ದೆಹಲಿ: ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಗಳನ್ನು ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ. 2022ನೇ ಸಾಲಿನಲ್ಲಿ ಸಿಬಿಎಸ್ಇ ಬೋರ್ಡ್ 10 ಮತ್ತು 12ನೇ ತರಗತಿಯ ಪರೀಕ್ಷಾ ಯೋಜನೆಗಳನ್ನು ಎರಡು ಭಾಗಗಳಾಗಿ ಬೋರ್ಡ್ ವಿಭಜಿಸಿದೆ. ಈ ಕುರಿತು ಈಗಷ್ಟೇ ಮಹತ್ವದ ಘೋಷಣೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಒಟ್ಟಾರೆ ಸಿಲೇಬಸ್ನ್ನು ಪ್ರತಿ ಭಾಗಕ್ಕೂ ಶೇಕಡಾ 50ರಂತೆ ವಿಂಗಡಿಸಿ ಹಂಚಲಾಗುವುದು. ಜುಲೈ 2021 ರಲ್ಲಿ ಅಧಿಸೂಚಿಸಬೇಕಾದ ಕೊನೆಯ ಶೈಕ್ಷಣಿಕ ವರ್ಷದಂತೆಯೇ 2021-22 ಅನ್ನು ನಿರ್ವಹಿಸಲಾಗುವುದು ಎಂದು ಸಿಬಿಎಸ್ಇ ಬೋರ್ಡ್ ತಿಳಿಸಿದೆ.
Academic session 2021-22 of class 10th & 12th to be divided into 2 terms with approx 50% syllabus in each term. Syllabus for Board examination 2021-22 will be rationalized similar to that of last academic session to be notified in July 2021: Central Board of Secondary Education pic.twitter.com/8vyfPUhWX7
— ANI (@ANI) July 5, 2021
ಈ ಹಿಂದೆ ಸಿಬಿಎಸ್ಇ, ಐಎಸ್ಸಿಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ್ದ ಸುಪ್ರೀಂಕೋರ್ಟ್
ಕೊವಿಡ್ 2ನೇ ಅಲೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ಕುರಿತು ಸೆಂಟ್ರಲ್ ಬೋರ್ಡ್ ಅಫ್ ಸೆಕಂಡರಿ ಎಜ್ಯುಕೇಶನ್ (Central Board of Secondary Education – CBSE) ಮತ್ತು ಸಿಐಸಿಎಸ್ಇ (Council for the Indian School Certificate Examinations – CISCE) ಸಂಸ್ಥೆಗಳು ತೆಗೆದುಕೊಂಡಿದ್ದ ಪರೀಕ್ಷೆ ರದ್ದು ನಿರ್ಧಾರವನ್ನು ಕೋರ್ಟ್ ಎತ್ತಿಹಿಡಿದಿತ್ತು. ಪರೀಕ್ಷೆ ರದ್ದತಿಯನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಮೌಲ್ಯಮಾಪನಕ್ಕಾಗಿ ಎರಡೂ ಸಂಸ್ಥೆಗಳು ರೂಪಿಸಿದ್ದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಸಿಬಿಎಸ್ಇ ಮತ್ತು ಐಸಿಎಸ್ಇ ರೂಪಿಸಿರುವ ಕ್ರಮಗಳಲ್ಲಿ ನಾವು ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ ಎನಿಸುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳ ಹಿತವನ್ನು ನಾವು ಗಮನದಲ್ಲಿರಿಸಿಕೊಂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಅವರಿದ್ದ ಪೀಠವು ಹೇಳಿತ್ತು.
ಪರೀಕ್ಷೆಗಳನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ಕುರಿತು ನಾವು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡಿದ್ದೇವೆ. ಸಾರ್ವಜನಿಕ ಹಿತವನ್ನು ಗಮನದಲ್ಲಿರಿಸಿಕೊಂಡು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ಅರ್ಜಿದಾರರ ಪರ ತೀರ್ಪುಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು
ಐಐಟಿ, ಜೆಇಇ ಅಥವಾ ಕ್ಲಾಟ್ (IIT-JEE or CLAT) ಪರೀಕ್ಷೆಗಳು ನಡೆಯಬಹುದಾದರೆ 12ನೇ ತರಗತಿಯ ಪರೀಕ್ಷೆಗಳು ಏಕೆ ರದ್ದಾಗಬೇಕು ಎಂದು ಅನ್ಷುಲ್ ಗುಪ್ತಾ ಎಂಬುವವರು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ನ್ಯಾಯಪೀಠವು, ಈ ಕುರಿತು ಆಯಾ ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ:
ಕರ್ನಾಟಕದ 14948 ಅಂಗನವಾಡಿಗಳಲ್ಲಿ ವಿದ್ಯುತ್, 13690ರಲ್ಲಿ ಶೌಚಾಲಯ ಇಲ್ಲ: ಸೌಕರ್ಯ ಕಲ್ಪಿಸಲು ಹೈಕೋರ್ಟ್ ಗಡುವು
2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್ಗೆ ತಿಳಿಸಿದ ಸರ್ಕಾರ
(CBSE announces Class 10 12 board exam schemes for 2022 academic session to be divided into 2 terms)
Published On - 8:21 pm, Mon, 5 July 21