AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಮತ್ತು 12ನೇ ತರಗತಿಯ CBSC ಪರೀಕ್ಷೆ ಮುಂದೂಡಿಕೆ..

ಫೆಬ್ರವರಿಯಲ್ಲಿ CBSC 10, 12ನೇ ತರಗತಿ ಪರೀಕ್ಷೆ ಇಲ್ಲ ಎಂದು ಸಿಬಿಎಸ್‌ಸಿ ಪರೀಕ್ಷೆಯ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿದ್ದಾರೆ. ಹಾಗೂ ಶಿಕ್ಷಕರು, ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

10 ಮತ್ತು 12ನೇ ತರಗತಿಯ CBSC ಪರೀಕ್ಷೆ ಮುಂದೂಡಿಕೆ..
ಸಿಬಿಎಸ್ ಸಿ ಪರೀಕ್ಷೆಗಳು ಮುಂದೂಡಿಕೆ
ಆಯೇಷಾ ಬಾನು
|

Updated on: Dec 23, 2020 | 7:47 AM

Share

ಬೆಂಗಳೂರು: ಫೆಬ್ರವರಿಯಲ್ಲಿ ನಡೆಯಬೇಕಿದ್ದ CBSC ಪರೀಕ್ಷೆಯನ್ನು ಮುಂದೂಡಲಾಗಿದೆ. CBSC 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒತ್ತಡದಿಂದ ಪರೀಕ್ಷೆ ಮುಂದೂಡಲಾಗಿದ್ದು ಫೆಬ್ರವರಿ ತಿಂಗಳಲ್ಲ ಪರೀಕ್ಷೆ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೂ 10 ಮತ್ತು 12 ನೇ ತರಗತಿ ಪರೀಕ್ಷೆಗಳು ಆಫ್‌ಲೈನ್‌ನಲ್ಲಿ ನಡೆಯಲಿದ್ದು, ಫೆಬ್ರವರಿ ನಂತರ ನಡೆಯಲಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷೆಗಳ ನಿಖರವಾದ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ರಮೇಶ್ ಪೋಖ್ರಿಯಾಲ್ ಅವರು ಶಿಕ್ಷಕರೊಂದಿಗೆ ನೇರ ಸಂವಾದದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು