ಗಂಡಸರೇ ಹುಷಾರು! ದ್ವಿಚಕ್ರ ವಾಹನದಲ್ಲಿ ಗೆಳತಿಯನ್ನು ಕರೆದೊಯ್ಯುವಾಗ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಮುಂದೆ ಸಂಸಾರದಲ್ಲಿ ಬಿರುಗಾಳಿ ಏಳುವುದು ಖಚಿತ!

|

Updated on: May 11, 2023 | 11:07 AM

ಮಹಿಳೆಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಆಕೆಯ ಪತಿ ಹೇಳಿದ್ದು, ಆಕೆಗೆ ಸ್ಕೂಟರ್ ನಲ್ಲಿ ಲಿಫ್ಟ್ ನೀಡಿರುವುದಾಗಿ ಅಲವತ್ತುಕೊಂಡಿದ್ದಾನೆ. ಆದರೆ, ಗಂಡ ನೀಡಿದ ಉತ್ತರ ಆಕೆಗೆ ತೃಪ್ತಿ ತಂದಿಲ್ಲ.

ಗಂಡಸರೇ ಹುಷಾರು! ದ್ವಿಚಕ್ರ ವಾಹನದಲ್ಲಿ ಗೆಳತಿಯನ್ನು ಕರೆದೊಯ್ಯುವಾಗ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಮುಂದೆ ಸಂಸಾರದಲ್ಲಿ ಬಿರುಗಾಳಿ ಏಳುವುದು ಖಚಿತ!
ಗಂಡಸರೇ ಹುಷಾರು! ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಮುಂದೆ ಸಂಸಾರದಲ್ಲಿ ಬಿರುಗಾಳಿ ಏಳುವುದು ಖಚಿತ!
Follow us on

ಸುರಕ್ಷತಾ ಯೋಜನೆಯ ಭಾಗವಾಗಿ ಕೇರಳದ ರಸ್ತೆ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ (CCTV ) ಕ್ಯಾಮೆರಾಗಳು ಭ್ರಷ್ಟಾಚಾರದ ಆರೋಪದಲ್ಲಿ ಕೇರಳ (Kerala) ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆಯದರೂ ರಾಜ್ಯ ಪೊಲೀಸರ ನೆರವಿಗೆ ಬಂದಿದೆ. ಜೊತೆಗೆ ಸಕಾಲದಲ್ಲಿ ಅದು ಗೃಹಿಣಿಯೊಬ್ಬರ ಕೈಹಿಡಿದಿದೆ. ಏನಾಯಿತೆಂದರೆ ಸಂಚಾರಿ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ (Traffic violation) ವ್ಯಕ್ತಿಯೊಬ್ಬರು ರಸ್ತೆ ಬದಿಯ ಅತ್ಯಾಧುನಿಕ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿಬಿದ್ದಿದ್ದಾರೆ. ಸಿಸಿಟಿವಿ ತೆಗೆದ ಫೋಟೋ ಸಮೇತ ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಕಳುಹಿಸಿದ್ದ ವಿವರಗಳ ಬಗ್ಗೆ ಪತ್ನಿಯ (Woman) ಫೋನ್ ನಂಬರ್ ಗೆ ಸಂದೇಶ ಕಳುಹಿಸಿದ್ದಾರೆ. ಇದರಿಂದ ಅವರ ಸಂಸಾರದಲ್ಲಿ ದೊಡ್ಡ ಸಮಸ್ಯೆ (Trouble) ಉಂಟಾಗಿದೆ.

ಇಡುಕ್ಕಿಯ ಜವಳಿ ಅಂಗಡಿಯೊಂದರ 32 ವರ್ಷದ ಉದ್ಯೋಗಿಯೊಬ್ಬರು ಏಪ್ರಿಲ್ 25 ರಂದು ಹೆಲ್ಮೆಟ್ ಧರಿಸದೆ ನಗರದ ರಸ್ತೆಗಳಲ್ಲಿ ತನ್ನ ಗೆಳತಿಯೊಂದಿಗೆ ಸ್ಕೂಟರ್ ನಲ್ಲಿ ಬಿಂದಾಸ್​ ಆಗಿ ಅಡ್ಡಾಡಿದ್ದರು. ಆದರೆ ಈ ವೇಳೆ ರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾವೊಂದು ಗೆಳಿತಿಯೊಂದಿಗಿರುವ ಆತನ ಚಿತ್ರವನ್ನು ತೆಗೆದಿದೆ. ಆದರೆ ದ್ವಿಚಕ್ರ ವಾಹನದ ನೋಂದಣಿ ಪತ್ನಿ ಹೆಸರಿನಲ್ಲಿತ್ತು. ನೋಂದಣಿ ಪ್ರಮಾಣಪತ್ರದ ಪ್ರಕಾರ, ವ್ಯಕ್ತಿ ಮಾಡಿದ ಸಂಚಾರ ಉಲ್ಲಂಘನೆ ಮತ್ತು ಪಾವತಿಸಬೇಕಾದ ದಂಡದ ವಿವರಗಳೊಂದಿಗೆ ಅವರ ಪತ್ನಿ ಮೊಬೈಲ್ ಫೋನ್‌ಗೆ ಸಂದೇಶ ಕಳುಹಿಸಿದ್ದಾರೆ. ಮೆಸೇಜ್ ನೋಡಿ ಹೆಂಡತಿ ಗಾಬರಿಯಾಗಿದ್ದಾಳೆ. ಯಾಕೆಂದರೆ ಗಂಡನ ಗಾಡಿಯ ಹಿಂದೆ ಇನ್ನೊಬ್ಬ ಹೆಂಗಸು ಕುಳಿತಿದ್ದಾಳೆ. ಅದೇ ವಿಷಯವಾಗಿ ಮಹಿಳೆ ತನ್ನ ಪತಿಯನ್ನು ಸರಿಯಾಗಿ ವಿಚಾರಿಸಿಕೊಂಡಿದ್ದಾಳೆ.

Also Read: ಪತಿಯ ಸಾವಿನ ಬಳಿಕ ಆತನ ನೆನಪಿಗಾಗಿ ಪುಸ್ತಕ ಬರೆದ ಹೆಂಡತಿ! ಟ್ವಿಸ್ಟ್ ಏನೆಂದರೆ ಗಂಡನನ್ನು ಕೊಂದಿದ್ದು ಇದೇ ಪತ್ನಿ!

ಮಹಿಳೆಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಆಕೆಯ ಪತಿ ಹೇಳಿದ್ದು, ಆಕೆಗೆ ಸ್ಕೂಟರ್ ನಲ್ಲಿ ಲಿಫ್ಟ್ ನೀಡಿರುವುದಾಗಿ ಅಲವತ್ತುಕೊಂಡಿದ್ದಾನೆ. ಆದರೆ, ಗಂಡ ನಿಡಿದ ಉತ್ತರ ಆಕೆಗೆ ತೃಪ್ತಿ ತಂದಿಲ್ಲ. ಪತಿಯ ಆಟದ ಬಗ್ಗೆ ಪತ್ನಿಗೆ ನಂಬಿಕೆ ಬಂದಿಲ್ಲ. ಮುಂದೆ ದಂಪತಿ ನಡುವೆ ವಾಗ್ವಾದ ನಡೆದಿದೆ. ತನ್ನ ಪತಿ ತನ್ನ ಮತ್ತು ಮೂರು ವರ್ಷದ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಮೇ 5 ರಂದು ಇಲ್ಲಿನ ಕರಮಾನ ಪೊಲೀಸರಿಗೆ ಪತಿ ದೂರು ನೀಡಿದ್ದಾಳೆ.

ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಪತಿಯ ವಿರುದ್ಧ ಐಪಿಸಿ 321, 341, 294 ಮತ್ತು ಬಾಲಾಪರಾಧ ಕಾಯ್ದೆಯ ಸೆಕ್ಷನ್ 75 ರಂತಹ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:26 am, Thu, 11 May 23