CDS Bipin Rawat: ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಕುರಿತು ಇಂದು ತನಿಖಾ ವರದಿ ಸಲ್ಲಿಕೆ ಸಾಧ್ಯತೆ

| Updated By: shivaprasad.hs

Updated on: Dec 31, 2021 | 11:02 AM

Chopper Crash: ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಇಂದು ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

CDS Bipin Rawat: ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಕುರಿತು ಇಂದು ತನಿಖಾ ವರದಿ ಸಲ್ಲಿಕೆ ಸಾಧ್ಯತೆ
ತಮಿಳುನಾಡಿನ ಕುನೂರಿನಲ್ಲಿ ಸಿಡಿಎಸ್​ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ
Follow us on

ಭಾರತ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ (CDS Bipin Rawat) ಸೇರಿದಂತೆ 14 ಜನರು ಸಾವನ್ನಪ್ಪಿದ ಡಿಸೆಂಬರ್ 8 ರ ಹೆಲಿಕಾಪ್ಟರ್ ಪತನ ಘಟನೆಯ ಕುರಿತು ತ್ರಿ-ಸರ್ವೀಸಸ್ ತನಿಖಾ ತಂಡದ (Tri Service Inquiry) ವರದಿಯನ್ನು ಇಂದು (ಡಿಸೆಂಬರ್ 31) ಸರ್ಕಾರಕ್ಕೆ ಸಲ್ಲಿಸಲಾಗುವುದು. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರ ನೇತೃತ್ವದಲ್ಲಿನ ತಂಡದಲ್ಲಿ ಸೇನೆ ಮತ್ತು ನೌಕಾಪಡೆಯ ಇಬ್ಬರು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳಿದ್ದು, ಘಟನೆಯ ಕುರಿತು ತನಿಖೆ ನಡೆಸಿದ್ದಾರೆ. ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ, ರಕ್ಷಣಾ ಸಹಾಯಕ, ಭದ್ರತಾ ಕಮಾಂಡೋಗಳು ಮತ್ತು ಐಎಎಫ್ ಪೈಲಟ್ ಅವರು ಡಿಸೆಂಬರ್ 8 ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ಸೂಲೂರು ನಡುವೆ Mi-17V5 ಹೆಲಿಕಾಪ್ಟರ್​ನಲ್ಲಿ ಪಯಣಿಸುವಾಗ ಅಪಘಾತಕ್ಕೀಡಾಗಿದ್ದರು.

Mi-17V5 ಅತ್ಯಾಧುನಿಕ ಹೆಲಿಕಾಪ್ಟರ್ ಆಗಿದ್ದು ಇದನ್ನು ಭಾರತೀಯ ವಾಯುಪಡೆಯು ಬಳಸುತ್ತದೆ. ಹೆಲಿಕಾಪ್ಟರ್ ಯುದ್ಧಗಳಲ್ಲಿ ವಾಯು ಪಡೆಯ ದಾಳಿ ಹಾಗೂ ಇತರ ಅಡೆತಡೆಗಳನ್ನು ಎದುರಿಸಲು ಸಮರ್ಥವಾಗಿದೆ. ಇದೇ ಕಾರಣಕ್ಕೆ ರಾವತ್ ಪಯಣಿಸುತ್ತಿದ್ದ ಹೆಲಿಕಾಪ್ಟರ್ ಪತನದ ಕುರಿತಂತೆ ಪ್ರಶ್ನೆಗಳು ಮೂಡಿದ್ದವು. ಈ ಕಾರಣಕ್ಕಾಗಿ ಅಪಘಾತದ ಕಾರಣವನ್ನು ತನಿಖೆ ಮಾಡಲು ತಂಡ ರಚಿಸಲಾಯಿತು.

ತನಿಖಾ ಸಮಿತಿಯು ಸೇನೆ ಮತ್ತು ವಾಯುಪಡೆಯ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅಪಘಾತದ ಸ್ಥಳದ ಬಳಿ ಇದ್ದ ಸ್ಥಳೀಯರೊಂದಿಗೂ ಮಾತುಕತೆ ನಡೆಸಲಾಗಿದೆ. ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ನ ವಿಡಿಯೋ ರೆಕಾರ್ಡ್ ಆಗಿದ್ದ ಮೊಬೈಲ್ ಫೋನ್ ಅನ್ನು ಕೂಡ ಪರಿಶೀಲಿಸಲಾಗಿದೆ. ಎಫ್‌ಡಿಆರ್ ಅಂದರೆ ಬ್ಲ್ಯಾಕ್ ಬಾಕ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಫ್ಲೈಟ್ ಡೇಟಾ ರೆಕಾರ್ಡ್ ಪರಿಶೀಲಿಸಲಾಗಿದ್ದು, ಮಾಹಿತಿಯನ್ನು ವರದಿಯಲ್ಲಿ ಸೇರಿಸಲಾಗಿದೆ.

ಏರ್ ಸ್ಟಾಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ದಕ್ಷಿಣ ಕೊರಿಯಾಕ್ಕೆ ನಾಲ್ಕು ದಿನಗಳ (ಡಿಸೆಂಬರ್ 26-30) ಭೇಟಿಗೆ ತೆರಳಿದ್ದರು. ಮೂಲಗಳ ಪ್ರಕಾರ, ಅವರು ಮರಳಿರುವುದರಿಂದ ಇಂದು ವರದಿ ಸಲ್ಲಿಸಲಾಗುತ್ತದೆ.

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8 ರಂದು Mi-17V5 ಹೆಲಿಕಾಪ್ಟರ್​​ನಲ್ಲಿದ್ದರು. ಅದು ಸೂಲೂರು ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದು, ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನೆಡೆಗೆ ಹೊರಟಿತ್ತು. ಹೆಲಿಕಾಪ್ಟರ್ ಕೂನೂರು ಪ್ರದೇಶದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಪತನಗೊಂಡಿತ್ತು. ಘಟನೆಯಲ್ಲಿ ಒಟ್ಟು 14 ಮಂದಿ ದುರ್ಮರಣಕ್ಕೀಡಾಗಿದ್ದರು.

ಇದನ್ನೂ ಓದಿ:

CDS Bipin Rawat: ಜನರಲ್ ಬಿಪಿನ್ ರಾವತ್ ನಿರ್ವಹಿಸುತ್ತಿದ್ದ ಸಿಡಿಎಸ್ ಹುದ್ದೆಯ ಮಹತ್ವ, ಆ ಸ್ಥಾನದ ಜವಾಬ್ದಾರಿಗಳಿವು

ಕೊವಿಡ್ ಲಸಿಕೆಯ ಮುಂಜಾಗರೂಕತೆ ಡೋಸ್‌ ಪಡೆಯಲು ಅರ್ಹ ಹಿರಿಯ ನಾಗರಿಕರಿಗೆ ಸಂದೇಶ ಕಳಿಸಲಿದೆ ಕೇಂದ್ರ