
ನವದೆಹಲಿ, ಜೂನ್ 05: ಪಾಕಿಸ್ತಾನ(Pakistan)ವು 48 ಗಂಟೆಗಳಲ್ಲಿ ಭಾರತವನ್ನು ಮಂಡಿಯೂರುವಂತೆ ಮಾಡುತ್ತೇವೆ ಎಂದು ಹೇಳಿ 8 ಗಂಟೆಗಳಲ್ಲೇ ಮಣ್ಣು ಮುಕ್ಕಿತ್ತು. ಈ ಕುರಿತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ( ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ಐದು ನಿಮಿಷಗಳ ನಂತರ ಭಾರತ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು ಎಂದು ಅವರು ಹೇಳಿದ್ದಾರೆ. ಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮುಂಚಿತವಾಗಿ ಮಾಹಿತಿ ನೀಡುವ ಮೂಲಕ ಸರ್ಕಾರ ಅಪರಾಧ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಡಿಎಸ್ ಈ ಮಾಹಿತಿ ನೀಡಿದ್ದಾರೆ.
ಮೇ 7 ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ದಾಳಿ ನಡೆಸಿದ ದಿನದಂದು ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ದಾಳಿಯನ್ನು ಬೆಳಗಿನ ಜಾವ 1 ರಿಂದ 1.30 ರ ನಡುವೆ ನಡೆಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಾಚರಣೆ ಮುಗಿದ ಐದು ನಿಮಿಷಗಳ ನಂತರ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನಕ್ಕೆ ಫೋನ್ ಮೂಲಕ ತಿಳಿಸಲಾಯಿತು.
ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೀವ್ರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದವು ಎಂದು ಜನರಲ್ ಚೌಹಾಣ್ ಹೇಳಿದರು. ಅವರು ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡರು ಮತ್ತು ನಾಗರಿಕ ಪ್ರದೇಶಗಳು ಅಥವಾ ಮಿಲಿಟರಿ ನೆಲೆಗಳನ್ನು ತಪ್ಪಿಸಲಾಗಿತ್ತು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದ್ದ ಕೆಲವೇ ದಿನಗಳಲ್ಲಿ ಆಗಿರುವ ನಷ್ಟ ಮುಖ್ಯವಲ್ಲ, ಫಲಿತಾಂಶವಷ್ಟೇ ಮುಖ್ಯ ಎಂದು ಸಿಡಿಎಸ್ ಹೇಳಿದ್ದಾರೆ. ಯುದ್ಧದಲ್ಲಿ, ಹಿನ್ನಡೆಗಳಿದ್ದರೂ ಸಹ ನೈತಿಕತೆಯು ಉನ್ನತ ಮಟ್ಟದಲ್ಲಿರುವುದು ಮುಖ್ಯ.
ಮತ್ತಷ್ಟು ಓದಿ: ನಷ್ಟ ಎಷ್ಟಾಯ್ತು ಎಂಬುದಕ್ಕಿಂತ ಫಲಿತಾಂಶ ಮುಖ್ಯ; ಆಪರೇಷನ್ ಸಿಂಧೂರ್ ಕುರಿತು ಸಿಡಿಎಸ್ ಅನಿಲ್ ಚೌಹಾಣ್
ಕಳೆದ ವಾರ, ಪಾಕಿಸ್ತಾನ ಮತ್ತು ಪೋಕ್‌ನಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ಮಾಡುವಾಗ ಭಾರತವು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿತು ಮತ್ತು ಅದರ ಪರಿಣಾಮವಾಗಿ ಮೇ 7 ರಂದು ಪ್ರತೀಕಾರ ತೀರಿಸಿಕೊಂಡಿತು ಎಂದು ಚೌಹಾಣ್ ಹೇಳಿಕೊಂಡಿದ್ದರು. ದೇಶವು ಭಯೋತ್ಪಾದನೆ ಮತ್ತು ಪರಮಾಣು ಬೆದರಿಕೆಯ ನೆರಳಿನಲ್ಲಿ ಬದುಕುವುದಿಲ್ಲ.
ಪಹಲ್ಗಾಮ್‌ನಲ್ಲಿ ತೀವ್ರ ಕ್ರೌರ್ಯ ನಡೆದಿತ್ತು. ಆಪರೇಷನ್ ಸಿಂಧೂರ್‌ನ ಹಿಂದಿನ ಉದ್ದೇಶ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸುವುದಾಗಿತ್ತು. ಯುದ್ಧದಲ್ಲಿ, ಫಲಿತಾಂಶಗಳು ಮುಖ್ಯ, ನಷ್ಟಗಳಲ್ಲ. ಭಾರತದ ಡ್ರೋನ್ ಸಾಮರ್ಥ್ಯ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ.
ಪಾಕಿಸ್ತಾನದ ಗುರಿ 48 ಗಂಟೆಗಳಲ್ಲಿ ಭಾರತಕ್ಕೆ ಭಾರೀ ಹಾನಿಯನ್ನುಂಟುಮಾಡುವುದಾಗಿತ್ತು. ಗಡಿಯಾಚೆಯಿಂದ ಅನೇಕ ದಾಳಿಗಳನ್ನು ನಡೆಸಲಾಯಿತು. ಪಾಕಿಸ್ತಾನ ಈ ಸಂಘರ್ಷವನ್ನು ಹೆಚ್ಚಿಸಿತು. ನಾವು ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೆವ ಎಂದಿದ್ದಾರೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:21 am, Thu, 5 June 25