ಪಶ್ಚಿಮ ಬಂಗಾಳ: ಮೊಬೈಲ್ ಕದ್ದ ಶಂಕೆ, ಬಾಲಕನನ್ನು ಉಲ್ಟಾ ನೇತು ಹಾಕಿ, ಕರೆಂಟ್ ಶಾಕ್ ಕೊಟ್ರು
ಕಾರ್ಖಾನೆಯಲ್ಲಿ ಮಾಲೀಕರ ಮೊಬೈಲ್ ಕಳ್ಳತನದ ಅನುಮಾನದ ಮೇರೆಗೆ 14 ವರ್ಷದ ಬಾಲಕನನ್ನು ಉಲ್ಟಾ ನೇತು ಹಾಕಿ, ವಿದ್ಯುತ್ ಶಾಕ್ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಮಹೇಶತಲಾದಲ್ಲಿ ನಡೆದಿದೆ. ಮೊಬೈಲ್ ಕದ್ದ ಅನುಮಾನದ ಮೇರೆಗೆ ಆತನನ್ನು ಕ್ರೂರವಾಗಿ ತಳಿಸಿದ್ದಲ್ಲದೆ ವಿದ್ಯುತ್ ಶಾಕ್ ನೀಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋಲ್ಕತ್ತಾ, ಜೂನ್ 05: ಕಾರ್ಖಾನೆಯಲ್ಲಿ ಮಾಲೀಕರ ಮೊಬೈಲ್ ಕಳ್ಳತನದ ಅನುಮಾನದ ಮೇರೆಗೆ 14 ವರ್ಷದ ಬಾಲಕನನ್ನು ಉಲ್ಟಾ ನೇತು ಹಾಕಿ, ವಿದ್ಯುತ್ ಶಾಕ್(Electric Shock) ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಮಹೇಶತಲಾದಲ್ಲಿ ನಡೆದಿದೆ. ಮೊಬೈಲ್ ಕದ್ದ ಅನುಮಾನದ ಮೇರೆಗೆ ಆತನನ್ನು ಕ್ರೂರವಾಗಿ ತಳಿಸಿದ್ದಲ್ಲದೆ ವಿದ್ಯುತ್ ಶಾಕ್ ನೀಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರಮುಖ ಆರೋಪಿಯನ್ನು ಬಂಧಿಸಿದರು. ಘಟನೆಯ ಗಂಭೀರತೆಯನ್ನು ಪರಿಗಣಿಸಿ, ತನಿಖೆಯನ್ನು ತ್ವರಿತವಾಗಿ ನಡೆಸಲಾಗುತ್ತಿದ್ದು, ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯ ಕುಟುಂಬದವರು ಕಳ್ಳತನದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆತ ಯಾವುದೇ ಮೊಬೈಲ್ ಕದ್ದಿಲ್ಲ, ಸುಳ್ಳು ಆರೋಪದಲ್ಲಿ ಸಿಲುಕಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಕುಟುಂಬದವರು ದೂರು ದಾಖಲಿಸಿದ್ದಾರೆ.
ಮತ್ತಷ್ಟು ಓದಿ: ಮಕ್ಕಳಿಗೆ ವಿದ್ಯುತ್ ಶಾಕ್ ಹೊಡೆದರೆ ತಕ್ಷಣ ಏನು ಮಾಡಬೇಕು? ಮಾಹಿತಿ ಇಲ್ಲಿದೆ
ಜೀನ್ಸ್ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷದ ಬಾಲಕನನ್ನು ಮೊಬೈಲ್ ಫೋನ್ ಕಳ್ಳತನದ ಶಂಕೆಯಿಂದ ಘಟಕದ ಮಾಲೀಕರು ತಲೆಕೆಳಗಾಗಿ ನೇತುಹಾಕಿ, ಥಳಿಸಿ, ವಿದ್ಯುತ್ ಶಾಕ್ ನೀಡಿದ್ದಾರೆ . ಕಂಖುಲಿ ಪುರ್ಬಪಾರ ಪ್ರದೇಶದಲ್ಲಿರುವ ಕಾರ್ಖಾನೆಯಿಂದ ಬಾಲಕನನ್ನು ರಕ್ಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವನು ಮೊಬೈಲ್ ಫೋನ್ ಕದ್ದಿದ್ದಾನೆ ಎಂಬ ಆರೋಪವನ್ನು ಬೆಂಬಲಿಸಲು ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಯಾವುದೇ ಕಾರಣವಿಲ್ಲದೆ ಅವನನ್ನು ಥಳಿಸಿ ಚಿತ್ರಹಿಂಸೆ ನೀಡಲಾಗಿದೆ. ನಾವು ಔಪಚಾರಿಕ ದೂರು ದಾಖಲಿಸಿದ್ದೇವೆ ಎಂದು ಬಾಲಕನ ಕುಟುಂಬ ಸದಸ್ಯರು ಹೇಳಿದ್ದಾರೆ.

ಛತ್ತೀಸ್ಗಢದಲ್ಲಿ ಇಂಥದ್ದೇ ಘಟನೆ ನಡೆದಿತ್ತು ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಇಬ್ಬರು ಐಸ್ಕ್ರೀಂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಮಾಲೀಕ ಕಳ್ಳತನ ಆರೋಪ ಹೊರೆಸಿ ಥಳಿಸಿದ್ದರು.ರಾಜಸ್ಥಾನದ ಭಿಲ್ವಾರಾ ಜಿಲ್ಲೆಯವರಾದ ಅಭಿಷೇಕ್ ಭಂಬಿ ಮತ್ತು ವಿನೋದ್ ಭಂಬಿ ಅವರನ್ನು ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ರಭಟ್ಟಿ ಪ್ರದೇಶದ ಛೋಟು ಗುರ್ಜರ್ ಒಡೆತನದ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಗುತ್ತಿಗೆದಾರರ ಮೂಲಕ ನೇಮಿಸಲಾಗಿತ್ತು.
ಏಪ್ರಿಲ್ 14 ರಂದು, ಗುರ್ಜರ್ ಮತ್ತು ಅವರ ಸಹಚರ ಮುಖೇಶ್ ಶರ್ಮಾ ಇಬ್ಬರು ಕಾರ್ಮಿಕರ ಮೇಲೆ ಕಳ್ಳತನದ ಆರೋಪ ಹೊರಿಸಿದರು. ಇಬ್ಬರನ್ನೂ ವಿವಸ್ತ್ರಗೊಳಿಸಲಾಗಿತ್ತು. ವಿದ್ಯುತ್ ಶಾಕ್ ನೀಡಲಾಗಿತ್ತು. ಉಗುರುಗಳನ್ನು ಹೊರತೆಗೆದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Thu, 5 June 25




