ಗೃಹ ಸಚಿವ ಅಮಿತ್ ಶಾ(Amit Shah)150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘‘ಯಾರಾದರೂ ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವೇ? ಒಂದೊಮ್ಮೆ ಮಾಡಿದ್ದರೆ ಅವರ ಬಗ್ಗೆ ನಮಗೆ ತಿಳಿಸಿ ನಾವು ಶಿಕ್ಷಿಸುತ್ತೇವೆ. ಆದರೆ ವದಂತಿ ಹರಡಿ ಒಬ್ಬರನ್ನು ಅವಮಾನಿಸುವುದು ಸರಿಯಲ್ಲ’’ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ 150 ಜಿಲ್ಲಾಧಿಕಾರಿಗಳೊಂದಿಗೆ ಅಮಿತ್ ಶಾ ಈಗಾಗಲೇ ಮಾತನಾಡಿದ್ದಾರೆ, ಇದು ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ ಎಂದು ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಅಧಿಕಾರದಿಂದ ಕೆಳಗಿಳಿಯಲಿರುವ ಅಮಿತ್ ಶಾ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿರುವುದು ನಾಚಿಕೆಗೇಡಿನ ವಿಷಯ, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ, ಸಂವಿಧಾನವನ್ನು ಎತ್ತಿಹಿಡಿಯಬೇಕು ಎಂದು ಅವರು ಬರೆದಿದ್ದರು.
ಜನರ ಆಶಯ ಈಡೇರುವುದು ಸ್ಪಷ್ಟ, ಜೂನ್ 4 ರಂದು ಪ್ರಧಾನಿ ಮೋದಿ, ಶಾ ಮತ್ತು ಬಿಜೆಪಿ ನಿರ್ಗಮನ ಹಾಗೂ ಇಂಡಿಯಾ ಒಕ್ಕೂಟದ ಗೆಲುವು ಖಚಿತ ಎಂದು ಹೇಳಿದ್ದರು. ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಭಾನುವಾರ ಸಂಜೆ 7 ಗಂಟೆಯೊಳಗೆ ತಮ್ಮ ಆರೋಪಗಳ ಕುರಿತಾದ ಸಮಗ್ರ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿದೆ.
ಮತ್ತಷ್ಟು ಓದಿ: ಕೇಜ್ರಿವಾಲ್ ಜೈಲಿಗೆ ಹೋದ ನಂತರ ಉತ್ತರಾಧಿಕಾರಿಯನ್ನು ಘೋಷಿಸಬೇಕು: ಅಮಿತ್ ಶಾ
ಚುನಾವಣಾ ಆಯೋಗವು ಜೂನ್ 1ರಂದು ಜೈರಾಮ್ ರಮೇಶ್ ಅವರು ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖಿಸಿ ಮಾಹಿತಿ ಕೇಳಿದೆ.
‘ಮತ ಎಣಿಕೆ ಪ್ರಕ್ರಿಯೆಯು ಪ್ರತಿಯೊಬ್ಬ ಚುನಾವಣಾಧಿಕಾರಿಯ ಪವಿತ್ರ ಕರ್ತವ್ಯವಾಗಿದೆ ಮತ್ತು ಅಂತಹ ಸಾರ್ವಜನಿಕ ಹೇಳಿಕೆಗಳು ಅನುಮಾನವನ್ನು ಉಂಟುಮಾಡುತ್ತವೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು ಅರ್ಹವಾಗಿದೆ’ ಎಂದು ಚುನಾವಣಾ ಆಯೋಗ ರಮೇಶ್ ಅವರಿಗೆ ತಿಳಿಸಿದೆ.
#WATCH | On Congress leader Jairam Ramesh’s allegations that Union HM called DMs/ROs (Returning Officers), CEC Rajiv Kumar says, “…Can someone influence them (DMs/ROs) all? Tell us who did this. We will punish the person who did it…It is not right that you spread a rumour and… pic.twitter.com/iejNzcZQ2G
— ANI (@ANI) June 3, 2024
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಎಲ್ಲ ಅಧಿಕಾರಿಗಳು ಆಯೋಗದ ಡೀಮ್ಡ್ ಡೆಪ್ಯುಟೇಶನ್ ಅಡಿಯಲ್ಲಿರುತ್ತಾರೆ ಮತ್ತು ಅವರು ಯಾವುದೇ ನಿರ್ದೇಶನಗಳಿಗಾಗಿ ನೇರವಾಗಿ ಚುನಾವಣಾ ಆಯೋಗಕ್ಕೆ ವರದಿ ಮಾಡುತ್ತಾರೆ. ಆದಾಗ್ಯೂ, ನೀವು ಆರೋಪಿಸಿದಂತೆ ಯಾವುದೇ ಜಿಲ್ಲಾಧಿಕಾರಿಗಳು ಅನಗತ್ಯ ಪ್ರಭಾವ ಬೀರಲು ಯತ್ನಿಸಿರುವ ಬಗ್ಗೆ ವರದಿ ಮಾಡಿಲ್ಲ’ ಎಂದು ಅದು ಕಾಂಗ್ರೆಸ್ ನಾಯಕನಿಗೆ ತಿಳಿಸಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ, ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಬಹುಮತ ಸಾಧಿಸಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ