ಕೇಜ್ರಿವಾಲ್ ಜೈಲಿಗೆ ಹೋದ ನಂತರ ಉತ್ತರಾಧಿಕಾರಿಯನ್ನು ಘೋಷಿಸಬೇಕು: ಅಮಿತ್ ಶಾ
ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ಬಳಿಕ ಉತ್ತರಾಧಿಕಾರಿ ಘೋಷಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ವೈದ್ಯಕೀಯ ಕಾರಣಗಳಿಂದಾಗಿ ತನ್ನ ಜಾಮೀನನ್ನು ಒಂದು ವಾರದವರೆಗೆ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ತೆರಳುವ ಆಪ್ ನಾಯಕನಿಂದ ಯಾವುದೇ ಅಪಾಯ, ಬೆದರಿಕೆ ಇದೆ ಎಂದು ನಾನು ಹೇಳುವುದಿಲ್ಲ. ಅವರ ಮನವಿ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಬೇಕು ಎಂದು ಅವರು ಹೇಳಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಜೈಲಿಗೆ ಹೋದ ನಂತರ ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ(Amit Shah)ಹೇಳಿದ್ದಾರೆ. ಟಿವಿ9 ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕಾರಣಗಳಿಂದಾಗಿ ತನ್ನ ಜಾಮೀನನ್ನು ಒಂದು ವಾರದವರೆಗೆ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ತೆರಳುವ ಆಪ್ ನಾಯಕನಿಂದ ಯಾವುದೇ ಅಪಾಯ, ಬೆದರಿಕೆ ಇದೆ ಎಂದು ನಾನು ಹೇಳುವುದಿಲ್ಲ. ಅವರ ಮನವಿ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಬೇಕು ಎಂದು ಅವರು ಹೇಳಿದರು.
ನೀವು ಭ್ರಷ್ಟಾಚಾರ ಮಾಡಿದ್ದೀರಿ, ಎಲ್ಲರ ಭರವಸೆಗಳನ್ನು ನಾಶ ಮಾಡಿದ್ದೀರಿ ತಮ್ಮ ಪಕ್ಷವನ್ನು ಅಳಿಸಿ ಹಾಕಲು ಹಲವು ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎನ್ನುವ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ 1 ಲಕ್ಷ 30 ಸಾವಿರ ರಾಜಕೀಯ ಕಾರ್ಯಕರ್ತರನ್ನು ಕಂಬಿ ಹಿಂದೆ ಕಳುಹಿಸಿದ್ದರು. ಆದರೆ ಅದು ಆಗ ಯಾವ ಪ್ರಶ್ನೆಯೂ ಬಂದಿರಲಿಲ್ಲ.
ನೀವು ಭ್ರಷ್ಟಾಚಾರ ಮಾಡಿದ್ದೀರಿ, ಎಲ್ಲಾ ಭರವಸೆಗಳನ್ನು ಮುರಿದಿದ್ದೀರಿ, ಕೇಜ್ರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮೂಲಕ ಪಕ್ಷವನ್ನು ಸ್ಥಾಪಿಸಿದರು. ಮೊದಲಿಗೆ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದ ಅವರು ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರು. ಆದರೆ ಇಂದು ಖಾಂಗ್ರೆಸ್ ಜತೆಗೂಡಿ ಸ್ಪರ್ಧಿಸಿದ್ದಾರೆ. ದೆಹಲಿಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ.
ಮತ್ತಷ್ಟು ಓದಿ: ಬಿಜೆಪಿ 400 ಸ್ಥಾನಗಳ ಗಡಿ ದಾಟಲಿದೆ, ಈ ಘೋಷಣೆಯ ಒಳಾರ್ಥ ತಿಳಿಸಿದ ಅಮಿತ್ ಶಾ
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಆದರೆ ದೆಹಲಿಯಲ್ಲಿ ಒಟ್ಟಾಗಿವೆ, ಈ ಮೈತ್ರಿಯು ತತ್ವಗಳನ್ನು ಆಧರಿಸಿಲ್ಲ ಎಂದು ಶಾ ಹೇಳಿದರು.
ಈ ಇಂಡಿಯಾ ಒಕ್ಕೂಟವು ವೈಯಕ್ತಿಕ ಸ್ವಹಿತಾಸಕ್ತಿ ಮತ್ತು ಸ್ವಾರ್ಥ ಉದ್ದೇಶಗಳ ಆಧಾರದ ಮೇಲೆ ರೂಪುಗೊಂಡಿದೆ ಎಂದರು. ಗುಜರಾತ್, ಹರ್ಯಾಣ, ದೆಹಲಿಯಲ್ಲಿ ಕೇಜ್ರಿವಾಲ್ ಕಾಂಗ್ರೆಸ್ ಜತೆಗಿದ್ದರೆ ಪಂಜಾಬ್ನಲ್ಲಿ ಬೇರೆಯಾಗಿದೆ. ಈ ಮೈತ್ರಿ ಹೇಗೆ ಮತ್ತು ಏಕೆ ಅಸ್ತಿತ್ವದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Wed, 29 May 24