ಹಿಂದುಳಿದ ಮುಸ್ಲಿಮರ ಮೀಸಲಾತಿ ಮುಂದುವರೆಯುತ್ತೆ, ಆದರೆ ಧರ್ಮದ ಆಧಾರದಲ್ಲಿ ಎಲ್ಲರಿಗೂ ಇಲ್ಲ: ಅಮಿತ್ ಶಾ

ಮುಸ್ಲಿಮರ ಮೀಸಲಾತಿ ಕುರಿತು ಅಮಿತ್ ಶಾ ಟಿವಿ9 ವಿಶೇಷ ಸಂದರ್ಶನದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಹಿಂದುಳಿದ ಮುಸ್ಲಿಮರು ಮೀಸಲಾತಿ ಪಡೆಯಲಿದ್ದಾರೆ, ಆದರೆ ಧರ್ಮದ ಆಧಾರದಲ್ಲಿ ಎಲ್ಲಾ ಮುಸ್ಲಿಮರಿಗೂ ನೀಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಹಿಂದುಳಿದ ಮುಸ್ಲಿಮರ ಮೀಸಲಾತಿ ಮುಂದುವರೆಯುತ್ತೆ, ಆದರೆ ಧರ್ಮದ ಆಧಾರದಲ್ಲಿ ಎಲ್ಲರಿಗೂ ಇಲ್ಲ: ಅಮಿತ್ ಶಾ
ಅಮಿತ್ ಶಾImage Credit source: Indian Express
Follow us
ನಯನಾ ರಾಜೀವ್
|

Updated on: May 29, 2024 | 7:56 AM

‘‘ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ(Reservation) ಮುಂದುವರೆಯುತ್ತದೆ ಆದರೆ ಧರ್ಮದ ಆಧಾರದಲ್ಲಿ ಎಲ್ಲಾ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ’’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ. ಟಿವಿ9ಗೆ ಅಮಿತ್ ಶಾ ನೀಡಿದ ಸಂದರ್ಶನದಲ್ಲಿ ಮುಸ್ಲಿಮರ ಮೀಸಲಾತಿ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ.

‘‘ನಾವು ಮುಸ್ಲಿಮರ ಮೀಸಲಾತಿ ಕೊನೆಗೊಳಿಸುವ ಬಗ್ಗೆ ಮಾತನಾಡಿರುವುದು ಹೌದು ಏಕೆಂದರೆ ದೇಶದ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿಲ್ಲ, ಹಿಂದುಳಿದ ಮುಸ್ಲಿಮರು ಮೀಸಲಾತಿ ಪಡೆಯುವುದುನ್ನು ಮುಂದುವರೆಸುತ್ತಾರೆ’’ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ 400 ಸ್ಥಾನಗಳನ್ನು ಪಡೆದ ಬಳಿಕ ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ದೇಶದ ಜನತೆ 2014ರಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಅಧಿಕಾರ ನೀಡಿದ್ದಾರೆ. ಈ ಆರೋಪಗಳನ್ನು ಮಾಡುತ್ತಿರುವ ಜನರಿಗೆ ಸಂವಿಧಾನವನ್ನು ಬದಲಾಯಿಸುವ ಪ್ರಕ್ರಿಯೆ ಏನು ಎಂಬುದು ತಿಳಿದಿಲ್ಲ ಎಂದರು.

ಪಿಒಕೆ ಭಾರತದ ಒಂದು ಭಾಗವಾಗಿದೆ, ಪಿಒಕೆ ಭಾರತದ ಪ್ರತಿಯೊಂದು ಸರ್ಕಾರದ ಮುಖ್ಯ ಕಾರ್ಯಸೂಚಿಯಾಗಬೇಕು ಎಂದು ಅಮಿತ್ ಶಾ ಹೇಳಿದರು.

ಮತ್ತಷ್ಟು ಓದಿ: ಜೂನ್ 4ರಂದು ಚುನಾವಣಾ ಸೋಲಿಗೆ ಕಾಂಗ್ರೆಸ್ ನಾಯಕರು ಇವಿಎಂನ್ನು ದೂಷಿಸುತ್ತಾರೆ, ಖರ್ಗೆ ಕೆಲಸ ಕಳೆದುಕೊಳ್ಳುತ್ತಾರೆ: ಅಮಿತ್ ಶಾ

ಕಾಶ್ಮೀರದ ಪರಿಸ್ಥಿತಿಯ ಕುರಿತು ಒಮರ್ ಅಬ್ದುಲ್ಲಾ ಅವರ ಹೇಳಿಕೆಯ ಕುರಿತು, ಅಮಿತ್ ಶಾ ಮಾತನಾಡಿ, ಏನು ಹೇಳಲಿ, ಕಾಶ್ಮೀರದಲ್ಲಿನ ಮತದಾನದ ಶೇಕಡಾವಾರು ಪ್ರಮಾಣವು ಅಲ್ಲಿ ಸರ್ಕಾರದ ನೀತಿ ಯಶಸ್ವಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಅಲ್ಲಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾದಾಗಲೆಲ್ಲ ಅಬ್ದುಲ್ಲಾ ಕುಟುಂಬ ಇಂಗ್ಲೆಂಡಿಗೆ ಹೋಗುತ್ತಿತ್ತು ಎಂದರು.

ಮಾಯಾವತಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಅಮಿತ್ ಶಾ, ಚುನಾವಣೆಗಳಲ್ಲಿ ಇಂತಹ ಕೆಲಸಗಳು ನಡೆಯುತ್ತಲೇ ಇರುತ್ತವೆ. ಮಾಯಾವತಿಯವರ ಪಕ್ಷ ಮತ್ತು ಅವರ ಸಿದ್ಧಾಂತವು ಬಿಜೆಪಿಯೊಂದಿಗೆ ದೂರದಿಂದಲೂ ಹೊಂದಿಕೆಯಾಗುವುದಿಲ್ಲ. ಎಂಬ ಭಯದ ಪ್ರಶ್ನೆಗೆ, ಚಿಕ್ಕಂದಿನಲ್ಲೂ ರಾಹುಲ್ ಗಾಂಧಿ ಅಜ್ಜಿಗೆ ಹೆದರುತ್ತಿರಲಿಲ್ಲ, ಅವರ ವಿರುದ್ಧವೂ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಹೇಳಿದರು.

ಇಂಡಿಯಾ ಮೈತ್ರಿ ಬಗ್ಗೆ ಅಮಿತ್ ಶಾ ಮಾತು ಇಂಡಿಯಾ ಮೈತ್ರಿಕೂಟದ ಕುರಿತು ಅಮಿತ್ ಶಾ ಮಾತನಾಡಿ, ಈ ಮೈತ್ರಿಯು ತತ್ವದ ಆಧಾರದ ಮೇಲೆ ಅಲ್ಲ, ಆದರೆ ಸ್ವಾರ್ಥದ ಆಧಾರದ ಮೇಲೆ ಇದೆ ಎಂದು ಹೇಳಿದರು. ತಾತ್ವಿಕವಾಗಿ ಮೈತ್ರಿ ಇದ್ದಿದ್ದರೆ ಇಡೀ ದೇಶವೇ ಭಾಗಿಯಾಗುತ್ತಿತ್ತು. ಈ ಮೈತ್ರಿ ಹೇಗಿದೆ ಎಂಬುದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಎಡಪಕ್ಷಗಳು ಕೇರಳದಲ್ಲಿ ಮುಖಾಮುಖಿಯಾಗಿವೆ ಮತ್ತು ಬಂಗಾಳದಲ್ಲಿ ಒಟ್ಟಿಗೆ, ಕೇಜ್ರಿವಾಲ್ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಒಟ್ಟಾಗಿವೆ, ಆದರೆ ಪಂಜಾಬ್‌ನಲ್ಲಿ ವಿರುದ್ಧವಾಗಿವೆ.

ನೀವು ಸರ್ಕಾರ ರಚಿಸುವಾಗ ಇವಿಎಂ ಬಗ್ಗೆ ಏಕೆ ಪ್ರಶ್ನೆ ಕೇಳುವುದಿಲ್ಲ ಕಾಂಗ್ರೆಸ್ ಸರ್ಕಾರ ರಚಿಸಿದಾಗ ಇವಿಎಂಗಳ ಬಗ್ಗೆ ಏಕೆ ಪ್ರಶ್ನೆಗಳನ್ನು ಎತ್ತುವುದಿಲ್ಲ ಎಂದು ಅಮಿತ್ ಶಾ ಹೇಳಿದರು? ಇತ್ತೀಚೆಗೆ ಚುನಾವಣೆ ನಡೆದಾಗ ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತು, ತೆಲಂಗಾಣದಲ್ಲಿ ಗೆದ್ದಿತು, ಮಮತಾ ಬಂಗಾಳದಲ್ಲಿ ಸರ್ಕಾರ ರಚಿಸಿದರು. ಗೆದ್ದಾಗ ಇವಿಎಂ ಬಗ್ಗೆ ಹೇಳುವುದಿಲ್ಲ, ಸೋತಾಗ ಮೊದಲೇ ಕೂಗಾಡುತ್ತಾರೆ, ಸಾರ್ವಜನಿಕರು ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್