ಜೂನ್ 4ರಂದು ಚುನಾವಣಾ ಸೋಲಿಗೆ ಕಾಂಗ್ರೆಸ್ ನಾಯಕರು ಇವಿಎಂನ್ನು ದೂಷಿಸುತ್ತಾರೆ, ಖರ್ಗೆ ಕೆಲಸ ಕಳೆದುಕೊಳ್ಳುತ್ತಾರೆ: ಅಮಿತ್ ಶಾ
ಪ್ರಧಾನಿ ನರೇಂದ್ರ ಮೋದಿ ಹಿಂದುಳಿದವರ ಮನೆಯಲ್ಲಿ ಜನಿಸಿದರೆ, ರಾಹುಲ್ ಮತ್ತು ಅಖಿಲೇಶ್ ಇಬ್ಬರೂ ಬೆಳ್ಳಿ ಚಮಚದೊಂದಿಗೆ ಜನಿಸಿದರು. ಅವರಿಗೆ ಪೂರ್ವ ಉತ್ತರ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ. ಅವರಿಗೆ ದೇಶದ ಹವಾಮಾನ ಇಷ್ಟವಾಗುತ್ತಿರಲಿಲ್ಲ. ರಾಹುಲ್ ಆರು ತಿಂಗಳಿಗೊಮ್ಮೆ ರಜೆಯಲ್ಲಿ ಥಾಯ್ಲೆಂಡ್‌ಗೆ ಹೋಗುತ್ತಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ.
ದೆಹಲಿ ಮೇ 27: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕರು ಜೂನ್ 4 ರಂದು ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಯಲ್ಲಿನ ಸೋಲಿಗೆ ವಿದ್ಯುನ್ಮಾನ ಮತಯಂತ್ರ (EVM) ಕಾರಣ ಎಂದು ದೂಷಿಸಲಿದ್ದಾರೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಪಕ್ಷ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೂಷಿಸುವುದಿಲ್ಲ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ ಎಂದು ಶಾ ಹೇಳಿದ್ದಾರೆ. ಕುಶಿನಗರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಮೊದಲ ಐದು ಹಂತಗಳ ವಿವರ ನನ್ನ ಬಳಿ ಇದೆ. ಲೋಕಸಭೆ ಚುನಾವಣೆಯ ಐದು ಹಂತಗಳಲ್ಲಿ ಪ್ರಧಾನಿ ಮೋದಿ 310 ಸ್ಥಾನಗಳನ್ನು ದಾಟಿದ್ದಾರೆ. ಜೂನ್ 4 ರಂದು ರಾಹುಲ್ 40 ಮತ್ತು ಅಖಿಲೇಶ್ ಯಾದವ್ 4 ಸ್ಥಾನಗಳನ್ನು ಸಹ ಪಡೆಯುವುದಿಲ್ಲ” ಎಂದು ಹೇಳಿದ್ದಾರೆ.
ಜೂನ್ 4 ರಂದು ಮಧ್ಯಾಹ್ನ ರಾಹುಲ್ ಬಾಬಾರವರು ಪತ್ರಿಕಾಗೋಷ್ಠಿ ನಡೆಸಿ ಇವಿಎಂಗಳಿಂದಾಗಿ ಸೋತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ನಷ್ಟದ ಹೊಣೆ ಖರ್ಗೆಯವರ ಮೇಲೂ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಹಿಂದುಳಿದವರ ಮನೆಯಲ್ಲಿ ಜನಿಸಿದರೆ, ರಾಹುಲ್ ಮತ್ತು ಅಖಿಲೇಶ್ ಇಬ್ಬರೂ ಬೆಳ್ಳಿ ಚಮಚದೊಂದಿಗೆ ಜನಿಸಿದರು. ಅವರಿಗೆ ಪೂರ್ವ ಉತ್ತರ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ. ಅವರಿಗೆ ದೇಶದ ಹವಾಮಾನ ಇಷ್ಟವಾಗುತ್ತಿರಲಿಲ್ಲ. ರಾಹುಲ್ ಆರು ತಿಂಗಳಿಗೊಮ್ಮೆ ರಜೆಯಲ್ಲಿ ಥಾಯ್ಲೆಂಡ್‌ಗೆ ಹೋಗುತ್ತಿದ್ದರು. ಪೂರ್ವಾಂಚಲ್‌ನ ತಾಪವನ್ನು ಅವರು ಸಹಿಸಲಿಲ್ಲ. ಆದರೆ ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ
ಇಬ್ಬರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಶಾ, ಪ್ರಧಾನಿ ಮೋದಿ ಅವರು ಅಂತಹ ಯಾವುದೇ ಆರೋಪವನ್ನು ಎದುರಿಸಿಲ್ಲ ಎಂದು ಒತ್ತಿ ಹೇಳಿದರು.
‘ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ಮೋದಿ ವಿರುದ್ಧ 25 ಪೈಸೆಯಷ್ಟು ಭ್ರಷ್ಟಾಚಾರದ ಆರೋಪ ಇಲ್ಲ, ಆದರೆ ಇಬ್ಬರು ‘ಶೆಹಜಾದೆ’ (ರಾಹುಲ್-ಅಖಿಲೇಶ್) ₹12 ಲಕ್ಷ ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ರಾಹುಲ್ ಗಾಂಧಿ ಬರುತ್ತಿದ್ದಂತೆ ಕುಸಿದ ಬಿದ್ದ ವೇದಿಕೆ, ತಪ್ಪಿದ ಅನಾಹುತ
ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸಿದ ಗೃಹ ಸಚಿವರು, 70 ವರ್ಷಗಳ ಕಾಲ ಕಾಂಗ್ರೆಸ್ ದೇವಾಲಯದ ಸಮಸ್ಯೆಯನ್ನು ಸ್ಥಗಿತಗೊಳಿಸಿದಾಗ ಎಸ್‌ಪಿ ಸರ್ಕಾರ ರಾಮಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿದರು. ಮೋದಿಜಿಯವರು ದೇವಸ್ಥಾನದ ಭೂಮಿಪೂಜೆ ಮಾಡಿದ್ದು ಮಾತ್ರವಲ್ಲದೆ ಪ್ರಾಣ ಪ್ರತಿಷ್ಠೆ, ಕಾಶಿ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ, ಸೋಮನಾಥ ದೇವಸ್ಥಾನಕ್ಕೆ ಚಿನ್ನದ ಲೇಪನ ಮಾಡುವ ಕೆಲಸ ಮಾಡಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Mon, 27 May 24