AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ನಿಪಥ್ ಯೋಜನೆ ಕುರಿತು ರಾಹುಲ್ ಗಾಂಧಿ ಸುಳ್ಳು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ: ಅಮಿತ್ ಶಾ

ಇದಕ್ಕೆ ಅತ್ಯುತ್ತಮ ಉದಾಹರಣೆ ಅಗ್ನಿವೀರ್ ಯೋಜನೆ... 4 ವರ್ಷಗಳ ನಂತರ 75 ಪ್ರತಿಶತ ಅಗ್ನಿವೀರರು ಭವಿಷ್ಯವಿಲ್ಲದೆ ಉಳಿಯುತ್ತಾರೆ ಮತ್ತು ಅವರ ಜೀವನವು ನಾಶವಾಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ದೇಶದಾದ್ಯಂತ ಹರಡಲಾಗುತ್ತಿದೆ .ಯೋಜನೆಯಲ್ಲಿ 100 ಜನರು ಅಗ್ನಿವೀರ್ ಆಗಿದ್ದರೆ, ಅವರಲ್ಲಿ 25 ಪ್ರತಿಶತದಷ್ಟು ಜನರು ಸೇನೆಯಲ್ಲಿ ಖಾಯಂ ಆಗಿ ನೇಮಕಗೊಳ್ಳುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಅಗ್ನಿಪಥ್ ಯೋಜನೆ ಕುರಿತು ರಾಹುಲ್ ಗಾಂಧಿ ಸುಳ್ಳು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ: ಅಮಿತ್ ಶಾ
ಅಮಿತ್ ಶಾ
ರಶ್ಮಿ ಕಲ್ಲಕಟ್ಟ
|

Updated on: May 25, 2024 | 7:53 PM

Share

ದೆಹಲಿ ಮೇ 25: 2022 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಅಲ್ಪಾವಧಿಯ ರಕ್ಷಣಾ ನೇಮಕಾತಿ ಮಾದರಿಯಾದ ಅಗ್ನಿಪಥ್ ಯೋಜನೆಯ (Agnipath scheme)ಬಗ್ಗೆ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶನಿವಾರ ಹೇಳಿದ್ದಾರೆ. ಹಿಂದಿನ ರಾಜಕೀಯ ಪಕ್ಷಗಳು ನಿಜವಾದ ವಿಷಯಗಳನ್ನು ತಿರುಚುತ್ತಿದ್ದವು ಆದರೆ ಎಂದಿಗೂ ಸುಳ್ಳನ್ನು ಚುನಾವಣಾ ವಿಷಯಗಳಾಗಿ ಮಾಡಲಿಲ್ಲ, ಆದರೆ ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಈ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ. “ರಾಹುಲ್ ಗಾಂಧಿ (Rahul Gandhi) ರಾಜಕೀಯಕ್ಕೆ ಬಂದ ನಂತರ ಈ ದೇಶದ ರಾಜಕೀಯ ಬದಲಾಗಿದೆ, ಈ ಹಿಂದೆ ರಾಜಕೀಯ ಪಕ್ಷಗಳು ಜನರ ಮುಂದೆ ನಿಜವಾದ ವಿಷಯವನ್ನು ತಿರುಚುತ್ತಿದ್ದವು, ಆದರೆ ಎಂದಿಗೂ ಸುಳ್ಳನ್ನು ವಿಷಯವನ್ನಾಗಿ ಮಾಡಲಿಲ್ಲ, ರಾಹುಲ್ ಗಾಂಧಿ ಅವರು ಕೇವಲ ಸುಳ್ಳು  ಹೇಳುವಎಂಬ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

“ಇದಕ್ಕೆ ಅತ್ಯುತ್ತಮ ಉದಾಹರಣೆ ಅಗ್ನಿವೀರ್ ಯೋಜನೆ… 4 ವರ್ಷಗಳ ನಂತರ 75 ಪ್ರತಿಶತ ಅಗ್ನಿವೀರರು ಭವಿಷ್ಯವಿಲ್ಲದೆ ಉಳಿಯುತ್ತಾರೆ ಮತ್ತು ಅವರ ಜೀವನವು ನಾಶವಾಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ದೇಶದಾದ್ಯಂತ ಹರಡಲಾಗುತ್ತಿದೆ .ಯೋಜನೆಯಲ್ಲಿ 100 ಜನರು ಅಗ್ನಿವೀರ್ ಆಗಿದ್ದರೆ, ಅವರಲ್ಲಿ 25 ಪ್ರತಿಶತದಷ್ಟು ಜನರು ಸೇನೆಯಲ್ಲಿ ಖಾಯಂ ಆಗಿ ನೇಮಕಗೊಳ್ಳುತ್ತಾರೆ, ಬಿಜೆಪಿ ಆಡಳಿತದ ರಾಜ್ಯಗಳು ತಮ್ಮ ರಾಜ್ಯ ಪೊಲೀಸ್ ಪಡೆಗಳಲ್ಲಿ 10-20 ಪ್ರತಿಶತ ಮೀಸಲಾತಿಯನ್ನು ಹೊಂದಿವೆ ಕೇಂದ್ರ ಸರ್ಕಾರದ ಅರೆಸೇನಾ ಪಡೆಯಲ್ಲೂ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

“ಇದರ ನಂತರ, ಯಾವುದೇ ಅಗ್ನಿವೀರ್‌ಗೆ ಕೆಲಸ ಸಿಗದಿರಬಹುದು. ಬಹಳಷ್ಟು ಭದ್ರತಾ ಕಂಪನಿಗಳು ಅಗ್ನಿವೀರ್‌ಗಳಿಗೆ ಆದ್ಯತೆ ನೀಡಿವೆ. ಅವರು 4 ವರ್ಷಗಳವರೆಗೆ ಭಾರಿ ಸಂಬಳವನ್ನು ಪಡೆಯುತ್ತಾರೆ ಮತ್ತು ನಂತರ ಅವರು ಖಾಯಂ ಉದ್ಯೋಗವನ್ನು ಪಡೆಯುತ್ತಾರೆ. ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಅನುಕೂಲಕ್ಕಾಗಿ ಸಂಪೂರ್ಣ ಸುಳ್ಳುಗಳನ್ನು ಹೇಳುತ್ತಿದ್ದಾರೆ ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಕೇಂದ್ರದ ಅಗ್ನಿಪಥ್ ಯೋಜನೆ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿಪಥ್ ಯೋಜನೆಯನ್ನು “ಬಲವಂತವಾಗಿ” ಹೇರುವ ಮೂಲಕ ದೇಶ ಸೇವೆ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ‘ದ್ರೋಹ’ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಮುಜ್ರಾ ಹೇಳಿಕೆ ವಿವಾದ; ವಿಪಕ್ಷ ಕಿಡಿ

‘ಅಗ್ನಿಪಥ್’ ಯೋಜನೆಯು ಹದಿನೇಳೂವರೆ ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಒದಗಿಸುತ್ತದೆ, ಅವರಲ್ಲಿ ಶೇಕಡಾ 25 ರಷ್ಟು ಜನರನ್ನು 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ