ರಾಜಸ್ಥಾನದಲ್ಲಿ ಒಬಿಸಿ ವರ್ಗದಡಿ ಮುಸ್ಲಿಮರಿಗೆ ನೀಡಿದ ಮೀಸಲಾತಿ ಪರಿಶೀಲಿಸುತ್ತೇವೆ; ಸಚಿವ ಅವಿನಾಶ್ ಗೆಹ್ಲೋಟ್
ಕಾಂಗ್ರೆಸ್ ತನ್ನ ಕೀಳು ರಾಜಕಾರಣದ ಭಾಗವಾಗಿ 1997 ಮತ್ತು 2013ರ ನಡುವೆ ಒಬಿಸಿ ವರ್ಗದ ಅಡಿಯಲ್ಲಿ 14 ಮುಸ್ಲಿಂ ಜಾತಿಗಳಿಗೆ ಮೀಸಲಾತಿ ನೀಡಿದೆ. ಆ ಮೀಸಲಾತಿಯ ಪರಿಶೀಲನೆ ನಡೆಸಲಾಗುವುದು ಎಂದು ರಾಜಸ್ಥಾನದ ಬಿಜೆಪಿ ಸಚಿವ ಅವಿನಾಶ್ ಗೆಹ್ಲೋಟ್ ಹೇಳಿದ್ದಾರೆ.
ಜೈಪುರ: ರಾಜಸ್ಥಾನದ (Rajasthan) ಬಿಜೆಪಿ ಸರ್ಕಾರವು ಇತರ ಹಿಂದುಳಿದ ಜಾತಿಗಳ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿಯನ್ನು (Muslim Reservation) ಪರಿಶೀಲಿಸುತ್ತದೆ ಎಂದು ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಅವಿನಾಶ್ ಗೆಹ್ಲೋಟ್ ಹೇಳಿದ್ದಾರೆ.
“ತನ್ನ ಕೆಳಮಟ್ಟದ ರಾಜಕೀಯದ ಭಾಗವಾಗಿ ಕಾಂಗ್ರೆಸ್ 1997 ಮತ್ತು 2013ರ ನಡುವೆ OBC ವರ್ಗದ ಅಡಿಯಲ್ಲಿ 14 ಮುಸ್ಲಿಂ ಜಾತಿಗಳಿಗೆ ಮೀಸಲಾತಿ ನೀಡಿದೆ. ಆ ಎಲ್ಲಾ ಸುತ್ತೋಲೆಗಳು ನಮ್ಮ ಬಳಿ ಇವೆ. ಸರಿಯಾದ ಸಮಯದಲ್ಲಿ ಇಲಾಖೆ ಮತ್ತು ಸರ್ಕಾರವು ಅದನ್ನು ಪರಿಶೀಲಿಸುತ್ತದೆ ಎಂದು ಅವಿನಾಶ್ ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವವಿದ್ಯಾಲಯದಲ್ಲೂ ಧರ್ಮದ ಆಧಾರದಲ್ಲಿ ಮೀಸಲಾತಿ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಧರ್ಮದ ಆಧಾರದ ಮೇಲೆ ಯಾವುದೇ ಜಾತಿ, ಸಮುದಾಯ ಅಥವಾ ವರ್ಗಕ್ಕೆ ಮೀಸಲಾತಿ ನೀಡುವುದನ್ನು ಸಂವಿಧಾನದಡಿಯಲ್ಲಿ ನಿಷೇಧಿಸಲಾಗಿದೆ ಎಂದು ಪ್ರತಿಪಾದಿಸಿದ ಅವರು, ನಮಗೆ ಅದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇಲಾಖೆಯು ಆ ದೂರುಗಳನ್ನು ಪರಿಶೀಲಿಸುತ್ತಿದೆ. ಈ ಬಗ್ಗೆ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
Jaipur, Rajasthan: “The Congress granted reservation to 14 Muslim castes under the OBC category between 1997 and 2013. We have all the documents, and the department and the government will review them at the appropriate time,” says BJP leader Avinash Gehlot pic.twitter.com/tuY2mt9dZP
— IANS (@ians_india) May 25, 2024
ಒಟ್ಟಾರೆ ರಾಜಸ್ಥಾನದಲ್ಲಿ ಶೇ. 64ರಷ್ಟು ಮೀಸಲಾತಿ ಇದೆ. OBCಗಳಿಗೆ ಶೇ. 21, ಎಸ್ಸಿಗಳಿಗೆ ಶೇ. 16, ಎಸ್ಟಿಗಳಿಗೆ ಶೇ. 12, ಹಿಂದುಳಿದ ವರ್ಗದವರಿಗೆ ಶೇ. 10ರಷ್ಟು ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ ಶೇ. 5ರಷ್ಟು ಮೀಸಲಾತಿ ನೀಡಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ