ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಪಟ್ಟ: ಇನ್ಮುಂದೆ ಸರ್ಕಾರದಿಂದ ಸಿಗಲಿದೆ ಧನಸಹಾಯ

|

Updated on: Dec 17, 2020 | 6:53 PM

ಯೋಗಾಸನ ತುಂಬ ವರ್ಷಗಳಿಂದಲೂ ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿಯೇ ಇದೆ. ಆದರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಅದನ್ನು ಗುರುತಿಸಿರಲಿಲ್ಲ. ಆದರೆ ಇಂದು ನಾವದನ್ನು ಮಾಡುತ್ತಿದ್ದೇವೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.

ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಪಟ್ಟ: ಇನ್ಮುಂದೆ ಸರ್ಕಾರದಿಂದ ಸಿಗಲಿದೆ ಧನಸಹಾಯ
ಇಂದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರು..
Follow us on

ದೆಹಲಿ: ದೇಶದಲ್ಲಿ ಈಗಾಗಲೇ ಹೆಚ್ಚು ಪ್ರಾಶಸ್ತ್ಯ ಪಡೆದಿರುವ ಯೋಗಕ್ಕೆ ಈಗ ಕೇಂದ್ರ ಸರ್ಕಾರ ಮತ್ತೊಂದು ಹಂತದ ಪ್ರಾಮುಖ್ಯತೆ ನೀಡಿದೆ. ಇಂದು ಯೋಗವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯೆಂದು ಕೇಂದ್ರ ಅಧಿಕೃತವಾಗಿ ಮಾನ್ಯ ಮಾಡಿದ್ದು, ಇದರಿಂದ ಇನ್ಮುಂದೆ ಯೋಗ ಸ್ಪರ್ಧೆಗೆ ಸರ್ಕಾರದಿಂದ ಹಣಕಾಸು ನೆರವು ಸಿಗಲಿದೆ.

ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕಿರಣ್​ ರಿಜಿಜು ಮತ್ತು ಆಯುಷ್​ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಜಂಟಿಯಾಗಿ, ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಸ್ಥಾನ ನೀಡಿದ್ದಾರೆ. ಯೋಗವನ್ನು ಪ್ರೋತ್ಸಾಹಿಸಿ, ಅದರ ಬಗ್ಗೆ ಅರಿವು ಹೆಚ್ಚಿಸುವ ಜತೆ, ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೆಚ್ಚಿಸುವಲ್ಲಿ ಯೋಗದ ಎಷ್ಟು ಸಹಕಾರಿ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನದ ಭಾಗವಾಗಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಯೋಗಾಸನ ತುಂಬ ವರ್ಷಗಳಿಂದಲೂ ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿಯೇ ಇದೆ. ಆದರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಅದನ್ನು ಗುರುತಿಸಿರಲಿಲ್ಲ. ಆದರೆ ಇಂದು ನಾವದನ್ನು ಮಾಡುತ್ತಿದ್ದೇವೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.

ಯೋಗಾಸನ ಪದ್ಧತಿಯನ್ನು ಉಳಿಸಲು ಮತ್ತು ಬೆಳೆಸಲು ಕಳೆದ ವರ್ಷ ಬಾಬಾ ರಾಮದೇವ್​ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ನವೆಂಬರ್​ನಲ್ಲಿ ರಾಷ್ಟ್ರೀಯ ಯೋಗಾಸನಾ ಸ್ಪೋರ್ಟ್ಸ್​ ಫೆಡರೇಶನ್ ಆಫ್ ಇಂಡಿಯಾ (NYSFI) ಸ್ಥಾಪಿಸಲಾಗಿದೆ. ಅದನ್ನು ಈ ಕಳೆದ ತಿಂಗಳು ಕ್ರೀಡಾ ಸಚಿವಾಲಯ NSF (ನ್ಯಾಷನಲ್​ ಸ್ಪೋರ್ಟ್ಸ್​ ಫೆಡರೇಶನ್) ಎಂದು ಮರು ನಾಮಕಾರಣ ಮಾಡಿ, ಮಾನ್ಯ ಮಾಡಿದೆ. ಹಾಗೇ ಇನ್ನು ಮುಂದೆ, NYSFI ನಿಂದ ಆಯೋಜಿಸುವ ತರಬೇತಿಗೆ ಹಣಕಾಸು ನೆರವು ನೀಡುವುದಾಗಿ ಕ್ರೀಡಾ ಸಚಿವಾಲಯ ತಿಳಿಸಿದೆ.

ರಾಜ್ಯಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರದ ನೆರವು; ಕರ್ನಾಟಕಕ್ಕೆ ಲಭಿಸಲಿದೆ 4,509 ಕೋಟಿ ಹೆಚ್ಚುವರಿ ಸಂಪನ್ಮೂಲ