ದೆಹಲಿ: ಅತ್ಯಾಚಾರ ಆರೋಪ ಹೊತ್ತಿರುವ ಕೇಂದ್ರದ ಹಿರಿಯ ಅಧಿಕಾರಿ ಜಿತೇಂದ್ರ ನರೈನ್ ಅವರನ್ನು ಕೇಂದ್ರ ಸರ್ಕಾರದ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಆಗಸ್ಟ್‌ನಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಅತ್ಯಾಚಾರದ ಆರೋಪದ ಮೇಲೆ ಹಿರಿಯ ಅಧಿಕಾರಿ ಜಿತೇಂದ್ರ ನರೈನ್ ಅವರನ್ನು ಕೇಂದ್ರ ಸರ್ಕಾರದ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿ ಜಿತೇಂದ್ರ ನರೇನ್ ಅವರನ್ನು ಕೇಂದ್ರವು ಅಮಾನತುಗೊಳಿಸಿದೆ. ಆಗಿನ ದ್ವೀಪಗಳ ಮುಖ್ಯ ಕಾರ್ಯದರ್ಶಿಯಾಗಿದ್ದ ನರೇನ್ ಮತ್ತು ಇನ್ನೋರ್ವ ಅಧಿಕಾರಿ ಆರ್.ಎಲ್.ರಿಷಿ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 21 ವರ್ಷದ ಮಹಿಳೆ ಆರೋಪಿಸಿದ್ದಾರೆ.
ಗೃಹ ಸಚಿವಾಲಯವು ಅಕ್ಟೋಬರ್ 16 ರಂದು ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರಿಂದ ವರದಿಯನ್ನು ಪಡೆದು, ಜಿತೇಂದ್ರ ನಾರಾಯಣ್, IAS (AGMUT: 1990), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಗಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿತೇಂದ್ರ ನರೇನ್ ಅವರನ್ನು ಕೇಂದ್ರ ಸರ್ಕಾರ ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಇದನ್ನು ಓದಿ; ಆಶ್ರಮದಲ್ಲಿ 52 ವರ್ಷದ ಮಹಿಳೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ವರದಿಯಲ್ಲಿ ಜಿತೇಂದ್ರ ನರೇನ್ ಕಡೆಯಿಂದ ಘೋರ ದುರ್ನಡತೆ ಮತ್ತು ಅಧಿಕೃತ ಸ್ಥಾನದ ದುರುಪಯೋಗದ ಸಾಧ್ಯತೆ ಇರುವ ಕಾರಣ ಗೃಹ ಸಚಿವರು ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಾನೂನು ಪ್ರಕಾರ ತಕ್ಷಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆ ಕಾರಣಕ್ಕಾಗಿ ಅವರ ಅವರನ್ನು ಅಧಿಕಾರದಿಂದ ಅಮಾನತುಗೊಳಿಸುವಂತೆ ತಿಳಿಸಿದೆ.
ಪೊಲೀಸ್ ಪ್ರಕರಣ ದಾಖಲು ಮಾಡಿದ್ದಾರೆ. 2022ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತನ್ನ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಾಜಿ ಮುಖ್ಯ ಕಾರ್ಯದರ್ಶಿ ತಂಗಿದ್ದ ಆಸ್ತಿಯ ಸಾಕ್ಷ್ಯವಾಗಿ ಬಳಸಬಹುದಾದ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿತಗೊಳಿಸುವಂತೆ ಅವರು ಪೊಲೀಸರನ್ನು ಕೋರಿದ್ದಾರೆ.
ಮಹಿಳೆ ವರದಿಯಲ್ಲಿ ತಿಳಿಸಿರುವಂತೆ ತಾನು ಕೆಲಸ ಹುಡುಕುತ್ತಿದ್ದಾಗ ಹೋಟೆಲ್ ಮಾಲೀಕರ ಮೂಲಕ RL ರಿಷಿಗೆ ಪರಿಚಯವಾಗಿತ್ತು. ಅವರು ಜಿತೇಂದ್ರ ನರೇನ್ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮಾಜಿ ಮುಖ್ಯ ಕಾರ್ಯದರ್ಶಿಯ ಮನೆಯಲ್ಲಿ ತನಗೆ ಮದ್ಯವನ್ನು ಕುಡಿಯಲು ಒತ್ತಾಯ ಮಾಡಿದ್ದಾರೆ. ಆದರೆ ಅದನ್ನು ನಾನು ನಿರಾಕರಿಸಿದೆ. ಜಿತೇಂದ್ರ ನರೇನ್ ತನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
Govt suspends with immediate effect senior IAS officer Jitendra Narain, accused of rape in Andaman and Nicobar Islands: MHA
— Press Trust of India (@PTI_News) October 17, 2022
Published On - 6:44 pm, Mon, 17 October 22