ಆಶ್ರಮದಲ್ಲಿ 52 ವರ್ಷದ ಮಹಿಳೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಲಖನೌದಲ್ಲಿ 24 ಗಂಟೆಯೊಳಗೆ ಎರಡನೇ ಅತ್ಯಾಚಾರ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಮತಿ ನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಆಶ್ರಮದಲ್ಲಿ 52 ವರ್ಷದ ಮಹಿಳೆಯೊಬ್ಬರನ್ನು ಶಿಷ್ಯರೇ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆಯೊಂದು ನಡೆದಿದೆ.
ಲಕ್ನೋ: ಲಖನೌದಲ್ಲಿ (Lucknow) 24 ಗಂಟೆಯೊಳಗೆ ಎರಡನೇ ಅತ್ಯಾಚಾರ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಮತಿ ನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಆಶ್ರಮದಲ್ಲಿ 52 ವರ್ಷದ ಮಹಿಳೆಯೊಬ್ಬರನ್ನು ಶಿಷ್ಯರೇ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆಯೊಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಶ್ರಮದ ಮುಖ್ಯಸ್ಥರು ತನಗೆ ಯಾವುದೇ ಸಹಾಯ ಮಾಡಲಿಲ್ಲ ಮತ್ತು ಪೊಲೀಸರಿಗೆ ಈ ವಿಷಯವನ್ನು ತಿಳಿಸಿದರೆ ಜೀವ ತೆಗೆಯುವ ಬೆದರಿಕೆ ಹಾಕಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಅಕ್ಟೋಬರ್ 4ರಂದು ಸಂಜೆ ಈ ಘಟನೆ ನಡೆದಿದ್ದು, ಕಳೆದ ತಿಂಗಳು ಆಶ್ರಮಕ್ಕೆ ಬಂದಿದ್ದಳು. ಎಫ್‌ಐಆರ್‌ನ ಪ್ರಕಾರ, ಪ್ರಯಾಗ್‌ರಾಜ್‌ನಲ್ಲಿ ನಡೆದ ಮಾಘಮೇಳದ ವೇಳೆ ಭೇಟಿಯಾದ ನಂತರ ಈ ಮಹಿಳೆ ಆಶ್ರಮಕ್ಕೆ ಬಂದಿದ್ದಾರೆ ಎಂದು ತಿಳಿಸಲಾಗಿದೆ.
ಮೊದಲು ನಾನು ಮಥುರಾದ ಆಶ್ರಮದಲ್ಲಿ ತಂಗಿದ್ದೆ. ಈ ಮಹಿಳೆ ಲಕ್ನೋ ಮೂಲದ ಆಶ್ರಮದಲ್ಲಿ ನೆಲೆಸಿದ್ದರು. ಆಕೆಯ ಗುರುಗಳು ನಡೆಸುತ್ತಿದ್ದ ಆಶ್ರಮದಲ್ಲಿ ಉಳಿಯುವಂತೆ ಆಕೆ ಶಿಫಾರಸು ಮಾಡಿದಳು. ನಾನು ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರಗೊಂಡು ಅಲ್ಲಿ ವಾಸಿಸಲು ಪ್ರಾರಂಭಿಸಿದೆ. ಸ್ವಲ್ಪ ಸಮಯದ ನಂತರ, ಮಹಿಳೆಯು ವಾರಣಾಸಿಗೆ ಹೋಗಬೇಕಾಯಿತು, ಏಕೆಂದರೆ ಅವಳ ಸಹೋದರನಿಗೆ ಆರೋಗ್ಯ ಸರಿವಿಲ್ಲದ ಕಾರಣ ಮತ್ತು ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, ಎಂದು ಹೇಳಿದರು. ಆದರೆ ಈ ಸಮಯದಲ್ಲಿ ಆಕೆಗೆ ನಿದ್ರೆಯ ಮಾತ್ರೆಯನ್ನು ಬೆರೆಸಿದ ಆಹಾರವನ್ನು ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ.
ಇದನ್ನು ಓದಿ: ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಲು ಮುಂಬೈ ಹೈಕೋರ್ಟ್ ಆದೇಶ, ಜೊತೆಗೆ ಜಾಮೀನು ಸಹ ಪ್ರಾಪ್ತಿ!
ನಾನು ಎಚ್ಚರವಾದಾಗ, ಸಂಪೂರ್ಣವಾಗಿ ಬೆತ್ತಲೆಯಾಗಿದ್ದೆ ಮತ್ತು ನನಗೆ ತುಂಬಾ ನೋವುವಾಗುತ್ತಿತ್ತು ಎಂದು ವಿವರಿಸಿದ್ದಾರೆ. ನಾಲ್ವರೂ ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಾನು ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದಾಗ, ನಾನು ಬದುಕಬೇಕಾದರೆ ಈ ವಿಷಯವನ್ನು ಹೊರಜಗತ್ತಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೂರ್ವ ವಲಯದ ಉಪ ಪೊಲೀಸ್ ಕಮಿಷನರ್ (ಡಿಸಿಪಿ), ಪ್ರಾಚಿ ಸಿಂಗ್, ತನಿಖೆಯ ಸಮಯದಲ್ಲಿ ಆಶ್ರಮದ ಆಸ್ತಿಗೆ ಸಂಬಂಧಿಸಿದ ಕೆಲವು ವಿವಾದಗಳಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣದ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ಈ ಪ್ರಕರಣವನ್ನು ಎಲ್ಲಾ ಕಡೆಗಳಿಂದ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
Published On - 1:31 pm, Mon, 17 October 22