AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆನ್ಸೇಷನಲ್ ಕ್ರೈಮ್ ಕತೆಗಳು: ಉದ್ಯಮಿಯ ಮಗಳು ಪ್ರಿಯಾಂಕಳನ್ನು ಮದುವೆಯಾದ ರಹಮಾನ್ ಒಂದೇ ತಿಂಗಳ ನಂತರ ಶವವಾಗಿ ಪತ್ತೆಯಾದ!

ಪ್ರಕರಣದ ತನಿಖೆ ಆರಂಭವಾದಾಗ ಟ್ರೇನ್ ಚಾಲಕ ಯಾರೊಬ್ಬರೂ ಹಳಿಗಳ ಮೇಲೆ ಮಲಗಿದ್ದು ತಾನು ನೋಡಲಿಲ್ಲ ಎಂದು ಹೇಳಿದ. ಅವನ ಹೇಳಿಕೆಯ ನಂತರ ರಿಜ್ವಾನುರ್ ಸಾವಿನ ಪ್ರಕರಣ ಮರುಜೀವ ಪಡೆದುಕೊಂಡಿತು ಮತ್ತು ಮಾಧ್ಯಮಗಳಲ್ಲಿ ಅವನ ಸಾವು ಕೊಲೆ ಅಂತ ವರದಿಯಾಗುವುದು ಪ್ರಾರಂಭವಾಯಿತು.

ಸೆನ್ಸೇಷನಲ್ ಕ್ರೈಮ್ ಕತೆಗಳು: ಉದ್ಯಮಿಯ ಮಗಳು ಪ್ರಿಯಾಂಕಳನ್ನು ಮದುವೆಯಾದ ರಹಮಾನ್ ಒಂದೇ ತಿಂಗಳ ನಂತರ ಶವವಾಗಿ ಪತ್ತೆಯಾದ!
ರಿಜ್ವಾನುರ್ ರಹೆಮಾನ್ ಮತ್ತು ಪ್ರಿಯಾಂಕ ತೋಡಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 18, 2022 | 8:09 AM

Share

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ಇಂದಿನ ಕತೆ ಕೂಡ ಬಹL ಚರ್ಚೆಯಲ್ಲಿದ್ದ ಪ್ರಕರಣವಾಗಿತ್ತು. ಶ್ರೀಮಂತ ಯುವತಿ ಮತ್ತು ಬಡ ಕುಟುಂಬದ ಯುವಕನ ನಡುವೆ ಪ್ರೀತಿ-ಪ್ರಣಯ ಶುರುವಾಗಿ ಅವರ ಮದುವೆಗೆ ಆಸ್ತಿ-ಅಂತಸ್ತು, ಜಾತಿ-ಧರ್ಮ ಅಡ್ಡಿಯಾಗುವ ಹಲವಾರು ಸಿನಿಮಾಗಳನ್ನು ನಾವು ನೋಡಿದ್ದೇವೆ. ಪಶ್ಚಿಮ ಬಂಗಾಳದ ಪ್ರಿಯಾಂಕ ತೋಡಿ ಮತ್ತು ರಿಜ್ವಾನುರ್ ರಹೆಮಾನ್ ಅವರ ಕತೆಯೂ ಇದೇ ಸಾಲಿಗೆ ಸೇರಿದ್ದು.

ಅಸಲಿಗೆ ನಡೆದಿದ್ದೇನು?

ಕೊಲ್ಕತ್ತಾದಲ್ಲಿ ಕಂಪ್ಯೂಟರ್ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ರಿಜ್ವಾನುರ್ ರಹೆಮಾನ್ ಮತ್ತು ಒಬ್ಬ ಶ್ರೀಮಂತ ಉದ್ಯಮಿಯ ಮಗಳು 23-ವರ್ಷ-ವಯಸ್ಸಿನ ಪ್ರಿಯಾಂಕ ತೋಡಿ ನಡುವೆ ಪ್ರೀತಿ ಹುಟ್ಟಿಕೊಂಡುಬಿಟ್ಟಿತ್ತು. ಪ್ರಿಯಾಂಕ ಯಾರು ಗೊತ್ತಾ? ಲಕ್ಸ್ ಕೋಜಿ ಬ್ರ್ಯಾಂಡಿನ ಪುರುಷರ ಒಳಉಡುಪುಗಳು ನಿಮಗೆ ಗೊತ್ತಲ್ಲ? ಅದರ ಮಾಲೀಕ ಅಶೋಕ ತೋಡಿಯ ಮಗಳು!

ಅಗಸ್ಟ್ 18, 2007 ರಂದು ಪ್ರೇಮಿಗಳು ಯಾರಿಗೂ ಗೊತ್ತಾಗದ ಹಾಗೆ ಕೇವಲ ರಿಜ್ವಾನುರ್ ನ ಕೆಲ ಸ್ನೇಹಿತರ ಸಮ್ಮುಖದಲ್ಲಿ ಮದುವೆಯೂ ಆಗಿಬಿಟ್ಟರು. ಆಗಸ್ಟ್ 31, 2007 ರಂದು ಅವನು ಪ್ರಿಯಾಂಕಳನ್ನು ಕರೆದೊಯ್ದು ತನ್ನ ಕುಟುಂಬದವರಿಗೆ ಪರಿಚಯಿಸಿದ. ಅವನ ತಂದೆ-ತಾಯಿ ಮತ್ತು ಬೇರೆ ಸದಸ್ಯರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಆದರೆ ಅಂತರ್-ಧರ್ಮೀಯ ವಿವಾಹ ಮತ್ತು ಅಂತಸ್ತಿನ ವಿಷಯ ತೋಡಿ ಕುಟುಂಬಕ್ಕೆ ಪಥ್ಯವಾಗುವುದು ಸಾಧ್ಯವೇ ಇರಲಿಲ್ಲ.

ಹಾಗಾಗೇ, ರಿಜ್ವಾನ್, ಪ್ರಿಯಾಂಕಳನ್ನು ಮನೆಗೆ ಕರೆತಂದ ದಿನವೇ ಹತ್ತಿರದ ಪೊಲೀಸ್ ಸ್ಟೇಶನ್ ಗೆ ಅರ್ಜಿವೊಂದನ್ನು ಸಲ್ಲಿಸಿ ಪ್ರಿಯಾಂಕ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಕೋರಿದ.

ತವರಿಗೆ ಹೊರಟಳು ಪ್ರಿಯಾಂಕ!

ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯೆನಿಸಿಕೊಂಡಿರುವ ಅಶೋಕ್ ತೋಡಿಗೆ ಪ್ರಿಯಾಂಕ ಎಲ್ಲಿದ್ದಾಳೆ ಅಂತ ಪತ್ತೆ ಮಾಡುವುದು ಕಷ್ಟವಾಗಲಿಲ್ಲ. ಅವನು ತನ್ನ ಪ್ರಭಾವ ಮತ್ತು ಹಣ ಬಳಸಿ, ರಿಜ್ವಾನುರ್ ನನ್ನು ಎಚ್ಚರಿಸುವಂತೆ ಮತ್ತು ಪ್ರಿಯಾಂಕಳನ್ನು ಮನೆಗೆ ಕರೆತರುವಂತೆ ಪೊಲೀಸರಿಗೆ ಹೇಳಿದ. ಸೆಪ್ಟೆಂಬರ್ 8 ರಂದು ಪೊಲೀಸರು ರಿಜ್ವಾನುರ್ ನನ್ನು ಠಾಣೆಗೆ ಕರೆಸಿ ಪ್ರಿಯಾಂಕಳಿಗೆ ತನ್ನ ಮನೆಗೆ ಹೋಗಿ ತಂದೆ ತಾಯಿಗಳ ಆಶೀರ್ವಾದ ಪಡೆದುಕೊಳ್ಳಲು ಕೆಲದಿನಗಳ ಮಟ್ಟಿಗೆ ಹೋಗಿ ಬರಲು ಅವಕಾಶ ನೀಡುವಂತೆ ಹೇಳಿದರು.

ಮೊದಮೊದಲು ಅದಕ್ಕೊಪ್ಪದ ರಿಜ್ವಾನುರ್ ನಂತರ ಪ್ರಿಯಾಂಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ಅವಳ ಚಿಕ್ಕಪ್ಪ ಒಂದು ವಾರದಲ್ಲಿ ವಾಪಸ್ಸು ತಂದು ಬಿಡುವ ಮುಚ್ಚಳಿಕೆಯನ್ನು ಪೊಲೀಸರಿಗೆ ಬರೆದುಕೊಟ್ಟರೆ ಕಳಿಸುವುದಾಗಿ ಹೇಳಿದ. ಅವನು ಬರೆದುಕೊಟ್ಟ ನಂತರ ಅದೇ ದಿನ ಪ್ರಿಯಾಂಕ ರಿಜ್ವಾನುರ್ ಮನೆಯಿಂದ ತವರಿಗೆ ಹೊರಟಳು.

ಪ್ರಿಯಾಂಕ ವಾಪಸ್ಸು ಬರಲಿಲ್ಲ!

ಚಿಕ್ಕಪ್ಪ ಬರೆದುಕೊಟ್ಟಂತೆ ಪ್ರಿಯಾಂಕ ಒಂದು ವಾರದ ನಂತರ ವಾಪಸ್ಸು ಬರಲಿಲ್ಲ. ಪ್ರಾಯಶ: ಇದನ್ನು ನಿರೀಕ್ಷಿಸಿದ್ದ ರಿಜ್ವಾನುರ್ ಹೆಂಡತಿಯನ್ನು ಕರೆದುಕೊಂಡು ಬರಲು ಅವಳ ಮನೆ ಕಡೆ ಹೊರಟ. ಆದರೆ ಸೆಪ್ಟೆಂಬರ್ 21 ರಂದು ರಿಜ್ವಾನುರ್ ದೇಹ ರೇಲ್ವೆ ಹಳಿಗಳ ಮೇಲೆ ಪತ್ತೆಯಾಯಿತು! ಕೊಲ್ಕತ್ತಾದ ಪೊಲೀಸ್ ಕಮೀಶನರ್ ಅದೊಂದು ಆತ್ಮಹತ್ಯೆ ಪ್ರಕರಣ ಹೇಳಿಬಿಟ್ಟರು!!

ಆದರೆ ಪ್ರಕರಣದ ತನಿಖೆ ಆರಂಭವಾದಾಗ ಟ್ರೇನ್ ಚಾಲಕ ಯಾರೊಬ್ಬರೂ ಹಳಿಗಳ ಮೇಲೆ ಮಲಗಿದ್ದು ತಾನು ನೋಡಲಿಲ್ಲ ಎಂದು ಹೇಳಿದ. ಅವನ ಹೇಳಿಕೆಯ ನಂತರ ರಿಜ್ವಾನುರ್ ಸಾವಿನ ಪ್ರಕರಣ ಮರುಜೀವ ಪಡೆದುಕೊಂಡಿತು ಮತ್ತು ಮಾಧ್ಯಮಗಳಲ್ಲಿ ಅವನ ಸಾವು ಕೊಲೆ ಅಂತ ವರದಿಯಾಗುವುದು ಪ್ರಾರಂಭವಾಯಿತು.

ಆದರೆ ಕೊಂದಿದ್ದು ಯಾಕೆ?

ಅದು ಕೊಲೆಯೋ ಅಥವಾ ಅತ್ಮಹತ್ಯೆಯೋ ಅನ್ನೋದು ಇನ್ನೂ ನಿಗೂಢವಾಗಿದೆ. ಪ್ರಿಯಾಂಕಾಳ ತಂದೆ ಆಗಲೇ ಹೇಳಿದ ಹಾಗೆ ಸಮಾಜದಲ್ಲಿ ಗಣ್ಯ ವ್ಯಕ್ತಿ. ಆದರೆ ರಿಜ್ವಾನುರ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು ಮತ್ತು ಇಸ್ಲಾಂ ಧರ್ಮೀಯ. ಎರಡು ಕುಟುಂಬಗಳ ಧರ್ಮ ಮತ್ತು ಆರ್ಥಿಕ ಸ್ಥಿತಿ ನಡುವೆ ಭಾರೀ ವ್ಯತ್ಯಾಸವಿತ್ತು. ಇದೇ ಕಾರಣಕ್ಕೆ ಅವನ ಕೊಲೆಯಾಗಿದೆ ಅಂತ ಹೇಳಲಾಗುತ್ತಿದೆ.

ರಿಜ್ವಾನುರ್ ಸಾವಿನ ಪ್ರಕರಣದ ಈಗಿನ ಸ್ಟೇಟಸ್ ಏನು?

ಸಿಬಿಐ ಇದನ್ನು ಆತ್ಮಹತ್ಯೆ ಪ್ರಕರಣ ಅಂತ ಘೋಷಿಸಿದೆ. ಆದರೆ, ಪ್ರಿಯಾಂಕ ತಂದೆ ಅಶೋಕ ತೋಡಿ, ಚಿಕ್ಕಪ್ಪ ಪ್ರದೀಪ್ ತೋಡಿ, ಅನಿಲ ಸರೋಗಿ ಮತ್ತು ಕೆಲ ಪೊಲೀಸ ಅಧಿಕಾರಿಗಳ ವಿರುದ್ಧ ರಿಜ್ವಾನುರ್ ನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ವಿಧಿಸಲಾಗಿದೆ. ಅಕ್ಟೋಬರ್ 11, 2018 ರಂದು ಸುಪ್ರೀಮ್ ಕೋರ್ಟ್ ಆರೋಪ ನಿರೂಪಿಸುವಂತೆ ಸಿಬಿಐಗೆ ಆದೇಶಿಸಿತ್ತು.

ರಿಜ್ವಾನುರ್-ಪ್ರಿಯಾಂಕ ಪ್ರಕರಣ ಹಲವಾರು ಚಿತ್ರ ತಯಾರಕರಿಗೆ ಸಿನಿಮಾ ತಯಾರಿಸಲು ಪ್ರೇರಣೆ ನೀಡಿದೆ. ಹಾಗೆ, ಬಂಗಾಲಿ ಭಾಷೆಯಲ್ಲಿ ನಿರ್ಮಾಣಗೊಂಡ ಒಂದು ಚಿತ್ರವೆಂದರೆ ‘ಚಿರೋದಿನಿ ತುಮಿ ಜೆ ಅಮರ್.’

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?