ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಶುಕ್ರವಾರ ಡಿಜಿಟಲ್ ಕ್ಯಾಲೆಂಡರ್ ಹಾಗೂ ಡಿಜಿಟಲ್ ಡೈರಿಯನ್ನು ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್ ಜಾವ್ಡೇಕರ್ ಪಾಲ್ಗೊಂಡಿದ್ದರು. ಈ ವೇಳೆ, ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ಗಳಲ್ಲಿ ಕ್ಯಾಲೆಂಡರ್ ಹಾಗೂ ಡೈರಿ ಲಭ್ಯವಾಗುವಂತೆ ನೋಡಿಕೊಳ್ಳಲು ಅಪ್ಲಿಕೇಷನ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪ್ರಕಾಶ್ ಜಾವ್ಡೇಕರ್, ಜನವರಿ 15ರಿಂದ ಒಟ್ಟು 11 ಭಾಷೆಗಳಲ್ಲಿ ಈ ಉಚಿತ ಆ್ಯಪ್ ಲಭ್ಯವಿದೆ. ಪ್ರತಿ ವರ್ಷ ಈ ಆ್ಯಪ್ನಲ್ಲಿ ಹೊಸ ಹೊಸ ಕ್ಯಾಲೆಂಡರ್ ಸಿಗಲಿದೆ. ಅಲ್ಲದೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಪ್ರಕಾಶ್ ಜಾವ್ಡೇಕರ್ ತಿಳಿಸಿದರು.
ಉಳಿದ ಡಿಜಿಟಲ್ ಕ್ಯಾಲೆಂಡರ್ ಆ್ಯಪ್ಗಳಿಗೆ ಹೋಲಿಕೆ ಮಾಡಿದರೆ ಈ ಆ್ಯಪ್ ತುಂಬಾನೇ ಅಭಿವೃದ್ಧಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿಗೆ ಸಾಕಾರ ನೀಡಲು ಈ ಆ್ಯಪ್ ಸಹಕಾರಿ ಎಂದು ಪ್ರಕಾಶ್ ಜಾವ್ಡೇಕರ್ ಅಭಿಪ್ರಾಯಪಟ್ಟಿದ್ದಾರೆ.
Launch of Digital Calendar & Diary App of Government of India https://t.co/OTUowe2cje
— Prakash Javadekar (@PrakashJavdekar) January 8, 2021
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮೊದಲಿನಿಂದಲೂ ಡಿಜಿಟಲ್ ಇಂಡಿಯಾಗೆ ಮಹತ್ವ ನೀಡುತ್ತಲೇ ಬಂದಿದೆ. ಅಲ್ಲದೆ, ಸಾಕಷ್ಟು ಕ್ಷೇತ್ರಗಳಲ್ಲಿ ಡಿಜಿಟಲ್ ಕ್ರಾಂತಿ ಮಾಡಿದೆ.
ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್