Delhi Chalo ವಿಫಲಗೊಂಡ 8ನೇ ಸುತ್ತಿನ ಮಾತುಕತೆ, ಜನವರಿ 15ರಂದು ಮುಂದಿನ ಸಭೆ
ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಧರಣಿ ಕೃಷಿ ಕಾಯ್ದೆಗಳ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ವಾದಿಸಲು ಸಹ ಸಿದ್ಧ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಹನ್ನನ್ ಮೊಲ್ಲಾಹ್ ತಿಳಿಸಿದ್ದಾರೆ.
ದೆಹಲಿ: ರೈತ ಮುಖಂಡರ ಜೊತೆಗಿನ ಕೇಂದ್ರ ಸರ್ಕಾರದ 8ನೇ ಸಭೆಯೂ ವಿಫಲಗೊಂಡಿದ್ದು, ಜನವರಿ 15ರಂದು ಇನ್ನೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ.
ದೆಹಲಿ ಚಲೋ ಚಳುವಳಿಯ 44ನೇ ದಿನ ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಸಭೆ ನಡೆಯಿತು. ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಸಭೆಗೆ ಆಗಮಿಸಿದ ರೈತ ಪ್ರತಿನಿಧಿಗಳು ವಿಜ್ಞಾನ ಭವನದ ಹೊರಗೆ ಸ್ವತಃ ತಾವೇ ತಂದಿದ್ದ ಆಹಾರವನ್ನು ಸೇವಿಸಿದರು.
ಪಟ್ಟು ಬಿಡದ ರೈತರು ಸಭೆಯುದ್ದಕ್ಕೂ ಬಿರುಸಿನ ಚರ್ಚೆ ನಡೆಯಿತು. ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಯಾವುದೇ ನ್ಯಾಯಾಲಯದಲ್ಲಿ ವಾದಿಸಲು ಸಹ ಸಿದ್ಧ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಹನ್ನನ್ ಮೊಲ್ಲಾಹ್ ತಿಳಿಸಿದರು. ಅಲ್ಲದೇ, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪರೇಡ್ ಸಹ ನಡೆಸುತ್ತೇವೆ ಎಂದು ಸಭೆಯಲ್ಲಿ ಘೋಷಿಸಿದರು.
ರೈತರು ಕೃಷಿ ಕಾಯ್ದೆ ಬಿಟ್ಟು ಬೇರೆ ಆಯ್ಕೆ ನೀಡಿಲ್ಲ ಕೃಷಿ ಕಾಯ್ದೆ ರದ್ದತಿ ಬಿಟ್ಟು ಇನ್ಯಾವುದೇ ಆಯ್ಕೆ ನೀಡಿದರೂ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ರೈತರು ಕೃಷಿ ಕಾಯ್ದೆ ರದ್ದುಗೊಳಿಸುವುದನ್ನು ಬಿಟ್ಟು ಬೇರಾವ ಆಯ್ಕೆಯನ್ನು ನೀಡಿಲ್ಲ. ಹೀಗಾಗಿ ಇಂದಿನ ಸಭೆ ವಿಫಲಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆಯ ನಂತರ ಹೇಳಿದ್ದಾರೆ.
Delhi Chalo ವಿಶ್ಲೇಷಣೆ | ಇದು ಈ ಕಾಲದ ಚಳವಳಿ; ಬೀದಿಗೂ ಸೈ, ಸೋಷಿಯಲ್ ಮೀಡಿಯಾಗೂ ಜೈ ಎಂದ ಪಂಜಾಬ್ ಯುವಜನರು
Published On - 5:52 pm, Fri, 8 January 21