ಮುಂದಿನ ವರ್ಷ ಕೇಂದ್ರ ಸರ್ಕಾರದಿಂದ ಜನಗಣತಿ; 2028ರ ವೇಳೆಗೆ ಲೋಕಸಭೆ ಸ್ಥಾನಗಳ ವಿಂಗಡಣೆ

|

Updated on: Oct 28, 2024 | 3:52 PM

ಜನಗಣತಿಯನ್ನು ಸಾಂಪ್ರದಾಯಿಕವಾಗಿ ಪ್ರತಿ ದಶಕದ ಮೊದಲ ವರ್ಷದಲ್ಲಿ ನಡೆಸಲಾಗುತ್ತಿತ್ತು. ಆದರೆ, ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2021ರ ಜನಗಣತಿಯನ್ನು ಮುಂದೂಡಲಾಗಿತ್ತು. ಕೇಂದ್ರ ಸರ್ಕಾರ 2025ರಲ್ಲಿ ಜನಗಣತಿ ನಡೆಸುವ ಸಾಧ್ಯತೆಯಿದೆ.

ಮುಂದಿನ ವರ್ಷ ಕೇಂದ್ರ ಸರ್ಕಾರದಿಂದ ಜನಗಣತಿ; 2028ರ ವೇಳೆಗೆ ಲೋಕಸಭೆ ಸ್ಥಾನಗಳ ವಿಂಗಡಣೆ
ಜನಗಣತಿ
Follow us on

ನವದೆಹಲಿ: ಕೊರೊನಾದಿಂದ 2021ರಲ್ಲಿ ಮುಂದೂಡಲ್ಪಟ್ಟಿದ್ದ ಜನಗಣತಿಯನ್ನು ಮುಂದಿನ ವರ್ಷ ನಡೆಸಲು ಮತ್ತು 2026ರ ವೇಳೆಗೆ ಜನಗಣತಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರವು ಸಜ್ಜಾಗಿದೆ. ಜನಗಣತಿ ಪೂರ್ಣಗೊಂಡ ನಂತರ, ಕ್ಷೇತ್ರಗಳ ಪುನರ್​ರಚನೆಗೆ ಸರ್ಕಾರವು ಡಿಲಿಮಿಟೇಶನ್‌ಗೆ ಮುಂದುವರಿಯುತ್ತದೆ. ನಂತರ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದು ಜನಗಣತಿಗೆ ಸಂಬಂಧಿಸಿದೆ.

2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಆಗಿನ ಎನ್‌ಡಿಎ ಸರ್ಕಾರವು 84ನೇ ತಿದ್ದುಪಡಿಯ ಮೂಲಕ 25 ವರ್ಷಗಳ ಕಾಲ ಡಿಲಿಮಿಟೇಶನ್ ಅನ್ನು ವಿಳಂಬಗೊಳಿಸಿತು. 2031ರ ಜನಗಣತಿಯ ನಂತರ ಡಿಲಿಮಿಟೇಶನ್ ಅನ್ನು ಕೈಗೊಳ್ಳಲಾಗುವುದು. ಮೂಲಗಳ ಪ್ರಕಾರ, ಸರ್ಕಾರವು ಈಗ 2027ರ ವೇಳೆಗೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಒಂದು ವರ್ಷದೊಳಗೆ ಅದನ್ನು ಪೂರ್ಣಗೊಳಿಸಲು ಯೋಜಿಸಿದೆ.

ಇದನ್ನೂ ಓದಿ: ವ್ಹೀಲ್​ಚೇರ್​ನಲ್ಲಿದ್ದ ಮಹಿಳೆ ಕಂಡು ಕಾರಿನಿಂದ ಕೆಳಗಿಳಿದು ಬಂದು ಮಾತನಾಡಿಸಿದ ಪ್ರಧಾನಿ ಮೋದಿ

ಇತ್ತೀಚೆಗೆ, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಗಿ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರ ಅಧಿಕಾರಾವಧಿಯನ್ನು ಈ ಡಿಸೆಂಬರ್‌ನ ನಂತರ ಆಗಸ್ಟ್ 2026ರವರೆಗೆ ವಿಸ್ತರಿಸಲಾಯಿತು.

ಈ ಜನಗಣತಿಯ ನಂತರ ಮುಂದಿನ ಜನಗಣತಿಯನ್ನು 2035, 20245, 2025ರಂದು ನಡೆಸಲಾಗುವುದು. ಹಲವು ವಿರೋಧ ಪಕ್ಷಗಳು ಜಾತಿ ಗಣತಿಗೆ ಬೇಡಿಕೆ ಇಟ್ಟಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ