ಅ. 1 ರಿಂದ ಜಾರಿಯಾಗಲಿದೆ ಅನ್ ಲಾಕ್ 5.O: ಯಾವುದೆಲ್ಲ ಓಪನ್ ಆಗುತ್ತೆ ಗೊತ್ತಾ?
ದೆಹಲಿ: ಮಹಾಮಾರಿ ಕೊರೊನಾ ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿದ್ದ ದೇಶ ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಸದ್ಯ ಅಕ್ಟೋಬರ್ 1 ರಿಂದ ಅನ್ ಲಾಕ್ 5.O ಜಾರಿಯಾಗಲಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ. ಅಕ್ಟೋಬರ್ 1 ರಿಂದ ಹೆಚ್ಚು ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಬ್ಬಗಳ ಸೀಸನ್ ಶುರುವಾಗುತ್ತಿರುವುದರಿಂದ ದೇಶದ ಆರ್ಥಿಕತೆಯ ಚೇತರಿಕೆಗಾಗಿ ಆರ್ಥಿಕ ಚುಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಿದೆ. ಅಕ್ಟೋಬರ್ 1ರಿಂದ […]
ದೆಹಲಿ: ಮಹಾಮಾರಿ ಕೊರೊನಾ ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿದ್ದ ದೇಶ ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಸದ್ಯ ಅಕ್ಟೋಬರ್ 1 ರಿಂದ ಅನ್ ಲಾಕ್ 5.O ಜಾರಿಯಾಗಲಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.
ಅಕ್ಟೋಬರ್ 1 ರಿಂದ ಹೆಚ್ಚು ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಬ್ಬಗಳ ಸೀಸನ್ ಶುರುವಾಗುತ್ತಿರುವುದರಿಂದ ದೇಶದ ಆರ್ಥಿಕತೆಯ ಚೇತರಿಕೆಗಾಗಿ ಆರ್ಥಿಕ ಚುಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಿದೆ. ಅಕ್ಟೋಬರ್ 1ರಿಂದ ಸಿನಿಮಾ ಹಾಲ್ಗಳು ಓಪನ್ ಆಗುವ ಸಾಧ್ಯತೆ ಇದೆ. ಹಾಗೂ ಅಂತರ ಕಾಯ್ದುಕೊಂಡು ಸಿನಿಮಾ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಹಾಗೂ ಅನ್ ಲಾಕ್ 5.Oನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ.