ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮದಲ್ಲಿ, ನೆರೆಯ ಪಾಕಿಸ್ತಾನದಲ್ಲಿರುವ ತಮ್ಮ ನಾಯಕರಿಗೆ ಉಗ್ರರು ರಹಸ್ಯವಾಗಿ ಸಂದೇಶಗಳನ್ನು ಕಳುಹಿಸಲು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್(Messenger App)ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಂಡಿಯಾ ಟಿವಿ ಮೂಲಗಳ ಪ್ರಕಾರ, ಸರ್ಕಾರವು ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ವಿಸ್, ವಿಕ್ರ್ಮೆ, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಜಂಗಿ ಮತ್ತು ಥ್ರೀಮಾಗಳನ್ನು ನಿಷೇಧಿಸಿದೆ.
ಈ ಅಪ್ಲಿಕೇಶನ್‌ಗಳನ್ನು ಕಾಶ್ಮೀರ ಕಣಿವೆಯಲ್ಲಿರುವ ಭಯೋತ್ಪಾದಕರು ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಉಗ್ರಗಾಮಿ ಸಂಘಟನೆಗೆ ಸಂದೇಶಗಳನ್ನು ಕಳುಹಿಸುವ ಸಾಧನವಾಗಿ ಹೆಚ್ಚಾಗಿ ಬಳಸುತ್ತಿದ್ದರು ಎಂದು ಮೂಲಗಳು ಹೇಳಿವೆ.
Central Government blocks 14 mobile messenger apps. It is reported that terrorists used these mobile messenger apps to spread the message and receive messages from Pakistan.
— ANI (@ANI) May 1, 2023
ಗಮನಾರ್ಹವೆಂದರೆ, ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸರ್ಕಾರವು ಕ್ರಮ ಕೈಗೊಂಡಿರುವುದು ಇದೇ ಮೊದಲಲ್ಲ. ಕೇಂದ್ರವು ಹಲವಾರು ಬಾರಿ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಇದೇ ರೀತಿಯ ನಿಷೇಧವನ್ನು ವಿಧಿಸಿದೆ. ಫೆಬ್ರವರಿಯಲ್ಲಿ, ಸಾಲ ನೀಡುವ ಅಪ್ಲಿಕೇಶನ್‌ಗಳು, 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 94 ಸಾಲ ನೀಡುವ ಅಪ್ಲಿಕೇಶನ್‌ಗಳು ಸೇರಿದಂತೆ ಸುಮಾರು 230 ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಭಾರತ ಸರ್ಕಾರವು ಆದೇಶಿಸಿತ್ತು.
ಮತ್ತಷ್ಟು ಓದಿ:Chinese App Ban: ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್ಗಳ ನಿಷೇಧ; ಭಾರತ ತುರ್ತು ಕ್ರಮ
ಭಾರತದ ಸಾರ್ವಭೌಮತೆ, ಸಮಗ್ರತೆ ಹಾಗೂ ಭಾರತದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಮೊಬೈಲ್ನಲ್ಲಿ ಹಾಗೆಯೇ ಇಂಟರ್ನೆಟ್ ಬಳಸಿಕೊಂಡು ಬಳಕೆ ಮಾಡುವ ಮೆಸೆಂಜರ್ ಆ್ಯಪ್ಗಳನ್ನು ನಿಷೇಧಿಸಿದೆ.
2020 ರಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕನಿಷ್ಠ 118 ಮೊಬೈಲ್ ಅಪ್ಲಿಕೇಶನ್‌ಗಳಿಗೆ ನಿರ್ಬಂಧ ವಿಧಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:50 am, Mon, 1 May 23