Amit Shah: ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಕೊರೊನಾ ಲಸಿಕೆ ನೀಡಿದ ವೈದ್ಯರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 01, 2021 | 9:42 PM

ಕಳೆದ ಆಗಸ್ಟ್​ ತಿಂಗಳಲ್ಲಿ ಅಮಿತ್​ ಶಾಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಹೀಗಾಗಿ  ಆಸ್ಪತ್ರೆಗೆ ದಾಖಲಾಗಿದ್ದರು. ಡಿಸ್​​​​ಚಾರ್ಜ್​ ಆದ ನಂತರ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಮತ್ತೊಮ್ಮೆ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.

Amit Shah: ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಕೊರೊನಾ ಲಸಿಕೆ ನೀಡಿದ ವೈದ್ಯರು
ಗೃಹ ಸಚಿವ ಅಮಿತ್​ ಷಾ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊವಿಡ್​​-19 ಲಸಿಕೆ ಪಡೆದುಕೊಂಡ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಇಂದು ಕೊರೊನಾ ಲಸಿಕೆ ಪಡೆದಿದ್ದಾರೆ. ಮೇದಾಂತಾ ಆಸ್ಪತ್ರೆಯ ವೈದ್ಯರು ಅಮಿತ್​ ಶಾಗೆ ಲಸಿಕೆ ನೀಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗಿವೆ. ಅದೇ ರೀತಿ, ಗೃಹ ಸಚಿವ ಅಮಿತ್​ ಶಾ ಸಾಕಷ್ಟು ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕಳೆದ ಆಗಸ್ಟ್​ ತಿಂಗಳಲ್ಲಿ ಅಮಿತ್​ ಶಾಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಹೀಗಾಗಿ  ಆಸ್ಪತ್ರೆಗೆ ದಾಖಲಾಗಿದ್ದರು. ಡಿಸ್​​​​ಚಾರ್ಜ್​ ಆದ ನಂತರ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಮತ್ತೊಮ್ಮೆ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಕೆಲ ಕಡೆಗಳಲ್ಲಿ ಈ ಔಷಧ ವ್ಯಕ್ತಿರಿಕ್ತ ಪರಿಣಾಮ ಬೀರಿತ್ತು. ಕೊರೊನಾ ಲಸಿಕೆ ಪಡೆದ ನಂತರ ಕೆಲವರು ಮೃತಪಟ್ಟಿದ್ದರು. ಆದರೆ, ಇದಕ್ಕೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿತ್ತು.

ವ್ಯಾಕ್ಸಿನ್ ಡ್ರೈವ್ 2.O

ಮೊದಲ ಹಂತದಲ್ಲಿ 1 ಕೋಟಿ 30 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಇಂದಿನಿಂದ 2ನೇ ಹಂತದ ಲಸಿಕೆ ಅಭಿಯಾನ ಶುರುವಾಗಲಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿಬ್ಬಂದಿ ರೆಡಿಯಾಗಿದ್ದಾರೆ. 45 ವರ್ಷ ಮೇಲ್ಪಟ್ಟವರೂ ಸಹ ಇತರ ರೋಗಗಳಿಂದ ಬಳಲುತ್ತಿದ್ರೆ ಲಸಿಕೆ ಪಡೆಯಬಹುದು. ದೇಶದ 10 ಸಾವಿರ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, 20 ಸಾವಿರ ಖಾಸಗಿ ಕೇಂದ್ರಗಳ ಮೂಲಕವೂ ಲಸಿಕೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ, ಖಾಸಗಿ ಕೇಂದ್ರಗಳಲ್ಲಿ ಲಸಿಕೆಗೆ 250 ರೂಪಾಯಿ ಫಿಕ್ಸ್ ಮಾಡಿದ್ದಾರೆ.

ಇದನ್ನೂ ಓದಿ: ಪುದುಚೇರಿಯಲ್ಲಿ ಅಮಿತ್​ ಶಾ ಉದ್ಯೋಗ ಮಂತ್ರ: ನಿರುದ್ಯೋಗ ನಿವಾರಣೆಗೆ ಬಿಜೆಪಿಗೆ ಮತ ನೀಡಿ ಎಂದ ‘ಚಾಣಕ್ಯ’