Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ನೋಡಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳು ಇಲ್ಲಿವೆ

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

  • TV9 Web Team
  • Published On - 18:57 PM, 1 Mar 2021
Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ನೋಡಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳು ಇಲ್ಲಿವೆ
ಮೈಲಾರಲಿಂಗ ಕಾರಣಿಕ

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದೆ ಪ್ರಸ್ತುತ ಪಡಿಸಿದೆ, ನೋಡಿ.

1) ಕೊವಿಡ್ ಲಸಿಕೆ ಪಡೆದ ಇನ್ಫಿ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿ
ಬೊಮ್ಮಸಂದ್ರದಲ್ಲಿರುವ ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯಲ್ಲಿ ಲಸಿಕೆ ಪಡೆದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿಗೆ ನಾರಾಯಣ ಹೆಲ್ತ್ ಸಿಟಿ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನು ಇಂದು ಬೆಳಿಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಕೂಡ ಲಸಿಕೆ ಪಡೆದಿದ್ದಾರೆ.
Link: ಎರಡನೇ ಹಂತದಲ್ಲಿ ಕೊವಿಡ್ ಲಸಿಕೆ ಪಡೆದ ಇನ್ಫಿ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿ

2) ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್; ಹೊರಬಿತ್ತು ಮೈಲಾರಲಿಂಗೇಶ್ವರನ ಕಾರಣಿಕ
ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ, ಶೂನ್ಯವನ್ನು ದಿಟ್ಟಿಸುತ್ತಾ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂದು ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ಗೊರವ ಸಮುದಾಯದ ಪ್ರಮುಖರು ಭಕ್ತಿಯಿಂದ ಅವರನ್ನು ಕಂಬಳಿಯಲ್ಲಿ ಹಿಡಿದರು. ಮೈಲಾರದಲ್ಲಿ ಗೊರವಯ್ಯ ನುಡಿಯುವ ಕಾರಣಿಕವನ್ನು ಬಗೆಬಗೆಯಾಗಿ ವ್ಯಾಖ್ಯಾನಿಸಲಾಗುತ್ತದೆ.
Link: ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್; ಹೊರಬಿತ್ತು ಮೈಲಾರಲಿಂಗೇಶ್ವರನ ಕಾರಣಿಕ.. ಒಳಾರ್ಥವೇನು?

3) ಭಾರತದಲ್ಲಿನ ನನ್ನ ಆಸ್ತಿ ಸುರಕ್ಷಿತವಾಗಿದೆ, I Will Come Back Again ಎಂದ ಬಿ.ಆರ್​.ಶೆಟ್ಟಿ!
ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಸಾಲ ಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಆದರೆ, ಯಾರಿಂದೆಲ್ಲಾ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿಯೇ ಮುಂದೆ ಬಂದಿದ್ದೇನೆ. ಈಗಲೂ ನಾನು ಕಷ್ಟಪಟ್ಟು ದುಡಿದ ಹಣವನ್ನು ಮರು ಗಳಿಸುತ್ತೇನೆ ಹಾಗೂ ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ. ಐ ವಿಲ್ ಕಮ್ ಬ್ಯಾಕ್ ಅಗೈನ್ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Link: ಹೊರದೇಶದ ಆಸ್ತಿ ಹೋಗಿದ್ದರೂ ಭಾರತದ ಆಸ್ತಿ ಸುರಕ್ಷಿತವಾಗಿದೆ, I Will Come Back Again ಎಂದ ಬಿ.ಆರ್​.ಶೆಟ್ಟಿ!

4)  ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನವೇ ಶುರುವಾಯ್ತು ಪ್ರೇಮ್​ ಕಹಾನಿ!
ಬಿಗ್ ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳು ತಮ್ಮ ಲಗೇಜ್ ಜೋಡಿಸಿಕೊಳ್ಳುತ್ತಿದ್ದರು. ಈ ವೇಳೆ, ದಿವ್ಯಾ ಸುರೇಶ್ ಬಳಿ ಬಂದ ಮಂಜು ಪಾವಗಡ, ‘ನಿಮಗೆ ಏನು ಬೇಕು ಕೇಳಿ, ನಿಮಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ’ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ದಿವ್ಯಾ ಸುರೇಶ್ ‘ನಿಮ್ಮ ಕೈಯಲ್ಲಿ ಕೆಲಸ ಮಾಡಿಸಲ್ಲ. ನಿಮ್ಮ ಕೈಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ’ ಎಂದು ತಿಳಿಸಿದ್ದಾರೆ.
Link: Bigg Boss Kannada 8 Updates, Day 1: ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನವೇ ಶುರುವಾಯ್ತು ಪ್ರೇಮ್​ ಕಹಾನಿ!

5) ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..
ದೇಶಾದ್ಯಂತ ಫಾಸ್​ಟ್ಯಾಗ್​ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇಂದಿನವರೆಗೆ (ಮಾರ್ಚ್​ 1) ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ಪ್ಲಾಜಾಗಳಲ್ಲಿ ಉಚಿತವಾಗಿಯೂ ವಿತರಣೆಯಾಗುತ್ತಿತ್ತು. ಆದರೆ ಇಂದಿನಿಂದ ಫಾಸ್​ಟ್ಯಾಗ್​(FASTag) ಎಲ್ಲಿಯೂ ಉಚಿತವಾಗಿ ಸಿಗುವುದಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಫಾಸ್​ಟ್ಯಾಗ್​ನ್ನು ಹೊಂದುವುದು ಕಡ್ಡಾಯವಾಗಿದ್ದು, ಅದನ್ನು ಪಡೆಯಲು ಇಂದಿನಿಂದ 100 ರೂ.ಶುಲ್ಕ ನೀಡಬೇಕಾಗುತ್ತದೆ.
Link: New Rules in March: ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..

6) 1999ರಲ್ಲಿ ಎಸ್​.ಎಂ. ಕೃಷ್ಣ ಕುರುಡುಮಲೆಯಿಂದ ಪಾಂಚಜನ್ಯ ಮೊಳಗಿಸಿದ್ದರು, ನಾವೂ ಮತ್ತೆ ಇಲ್ಲಿಂದಲೇ ಪಾಂಚಜನ್ಯ ಮೊಳಗಿಸ್ತೇವೆ -ಡಿ.ಕೆ.ಶಿವಕುಮಾರ್ 
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆಗೆ ತೆರಳಿದ ಡಿ.ಕೆ.ಶಿವಕುಮಾರ್, 1999ರಲ್ಲಿ ಎಸ್.ಎಂ.ಕೃಷ್ಣ ಕುರುಡುಮಲೆಯಿಂದ ಪಾಂಚಜನ್ಯ ಯಾತ್ರೆ ಆರಂಭಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದರು. ಈಗ ಅದೇ ರೀತಿ ನಾನು ಪಾಂಚಜನ್ಯ ಮೊಳಗಿಸಲಿದ್ದೇನೆ ಎಂದರು.
Link:  ನಾವೂ ಕುರುಡುಮಲೆಯಿಂದಲೇ ಮತ್ತೆ ಪಾಂಚಜನ್ಯ ಮೊಳಗಿಸ್ತೇವೆ -ಡಿ.ಕೆ.ಶಿವಕುಮಾರ್

7) ಪಳನಿಸ್ವಾಮಿ ಜತೆ ಅಮಿತ್ ಶಾ ಸಭೆ, ಸೀಟು ಹಂಚಿಕೆ ನಿರ್ಧಾರ ಇಂದು ಸಾಧ್ಯತೆ
ಎಐಎಡಿಎಂಕೆ ಮೈತ್ರಿಕೂಟ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಸೀಟು ಹಂಚಿಕೆ ಬಗ್ಗೆ ಮಹತ್ವದ ನಿರ್ಧಾರ ಇಂದು ಪ್ರಕಟವಾಗುವ ಸಾಧ್ಯತೆ ಇದೆ. ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಬೆಂಬಲ ಬೇಡುವ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
Link: Tamil Nadu Assembly Elections 2021: ಪಳನಿಸ್ವಾಮಿ ಜತೆ ಅಮಿತ್ ಶಾ ಸಭೆ, ಸೀಟು ಹಂಚಿಕೆ ನಿರ್ಧಾರ ಇಂದು ಸಾಧ್ಯತೆ

8) ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು
ಆತ್ಮಹತ್ಯೆ ಮಾಡಿಕೊಂಡ ಜಯಂತ್ ರೆಡ್ಡಿ ರ‍್ಯಾಂಕ್ ಸ್ಟೂಡೆಂಟ್. ಶೇ.94ರಷ್ಟು ಅಂಕ ಪಡೆಯುತ್ತಿದ್ದ. ಆದ್ರೆ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಹಾಗೂ ಎರಡು ಬಾರಿ ಕೌನ್ಸಲಿಂಗ್ ಸಹ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ. ದಿನ ದಿನ ಸಾಯೋಕೆ ನನಗೆ ಆಗ್ತಿಲ್ಲ. ಅದಕ್ಕೆ ಒಂದೇ ಸಲ ಸಾವಿನ ನಿರ್ಧಾರ ಮಾಡಿದ್ದಾಗಿ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ.
Link: ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು

9) ತಮಿಳುನಾಡು ಚುನಾವಣಾ ಸಮಾವೇಶ: ಒಂದೇ ಕೈಯಲ್ಲಿ ರಾಹುಲ್ ಪುಶ್​​-ಅಪ್ಸ್
ರಾಹುಲ್​ ಗಾಂಧಿ ತಮಿಳುನಾಡಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ಪುಶ್​-ಅಪ್ಸ್​ ಚಾಲೆಂಜ್​ ಸ್ವೀಕರಿಸಿದ್ದಾರೆ.
Link: ಒಂದೇ ಕೈಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.