ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​

ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಆಗಿದೆ. ಹೀಗಾಗಿ, ರಾಹುಲ್​ ಗಾಂಧಿ ತಮಿಳುನಾಡಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ಪುಶ್​-ಅಪ್ಸ್​ ಚಾಲೆಂಜ್​ ಸ್ವೀಕರಿಸಿದ್ದಾರೆ.

ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​
ಪುಶ್​-ಅಪ್ಸ್​ ತೆಗೆದ ರಾಹುಲ್​ ಗಾಂದಿ
Follow us
ರಾಜೇಶ್ ದುಗ್ಗುಮನೆ
|

Updated on:Mar 01, 2021 | 6:51 PM

ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಅವರ ಸಿಕ್ಸ್​ ಪ್ಯಾಕ್​ ಫೋಟೋ ಇತ್ತೀಚೆಗೆ ವೈರಲ್​ ಆಗಿತ್ತು. ಈ ಫೋಟೋಗೆ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಹುಲ್​ ಗಾಂಧಿ ಮತ್ತೆ ಸುದ್ದಿಯಾಗಿದ್ದಾರೆ. ಅದೂ ಫಿಟ್​ನೆಸ್​ ವಿಚಾರಕ್ಕೆ. ಅವರು ಒಂದೇ ಕೈಯಲ್ಲಿ ಪುಶ್​-ಅಪ್ಸ್​ ತೆಗೆದಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಆಗಿದೆ. ಹೀಗಾಗಿ, ರಾಹುಲ್​ ಗಾಂಧಿ ತಮಿಳುನಾಡಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಅವರು ತಮಿಳುನಾಡಿನ ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ಸ್​ ಕಾಲೇಜಿನ ವಿದ್ಯಾರ್ಥಿ ಮತ್ತು ಶಿಕ್ಷಕರ ಜತೆ ಸಂವಾದ ನಡೆಸಿದ್ದಾರೆ. ಈ ವೇಳೆ 10 ನೇ ತರಗಿ ವಿದ್ಯಾರ್ಥಿಯೋರ್ವ ಪುಶ್​-ಅಪ್ಸ್​ ಚಾಲೆಂಜ್​ ಹಾಕಿದ್ದಾರೆ. ಇದನ್ನು ರಾಹುಲ್​ ಗಾಂಧಿ ಒಪ್ಪಿಕೊಂಡಿದ್ದಾರೆ.

ಜನರ ಮಧ್ಯೆಯೇ ರಾಹುಲ್​ ಗಾಂಧಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಪುಶ್​-ಅಪ್​ ನಡೆಸಿದ್ದಾರೆ. ವಿದ್ಯಾರ್ಥಿ ತೆಗೆದಷ್ಟು ಡಿಪ್ಸ್​ ತೆಗೆಯೋಕೆ ರಾಹುಲ್​ ಗಾಂಧಿ ಬಳಿ ಸಾಧ್ಯವಾಗಿಲ್ಲ. ಇದಾದ ಬೆನ್ನಲ್ಲೇ ರಾಹುಲ್​ ಗಾಂಧಿ ಒಂದೇ ಕೈ ಮೂಲಕ ಪುಶ್​-ಅಪ್ಸ್​ ತೆಗೆದು ಅಚ್ಚರಿ ಮೂಡಿಸಿದ್ದಾರೆ. ಎರಡೂ ಕೈಯಲ್ಲಾದರೆ ಡಿಪ್ಸ್​ ತೆಗೆಯೋದು ಸುಲಭ. ಆದರೆ, ಒಂದೇ ಕೈಯಲ್ಲಿ ಡಿಪ್ಸ್​ ತೆಗೆಯುವುದು ಕಷ್ಟ.

View this post on Instagram

A post shared by Rahul Gandhi (@rahulgandhi)

ಏನಿದು ಸಿಕ್ಸ್ ಪ್ಯಾಕ್​ ಸಮಾಚಾರ? ಇತ್ತೀಚೆಗೆ ರಾಹುಲ್​ ಗಾಂಧಿ ಕೇರಳಕ್ಕೆ ತೆರಳಿದ್ದರು. ಈ ವೇಳೆ ಅವರು ಸಮುದ್ರಕ್ಕೆ ತೆರಳಿ ಮೀನುಗಾರರೊಂದಿಗೆ ಈಜಿದ್ದಾರೆ. ಈ ವೇಳೆ ಅವರ ಆ್ಯಬ್ಸ್​ ಫೋಟೋ ವೈರಲ್​ ಆಗಿದೆ. ಈ ಫೋಟೋಗೆ ಅನೇಕರು ಕಮೆಂಟ್​ ಮಾಡಿದ್ದು, ಫಿಟ್​ನೆಸ್​ ಟಿಪ್ಸ್​ ಕೇಳಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಘೋಷಿಸಿದ ಲಾಕ್​ಡೌನ್​ನಿಂದ ಇಡೀ ದೇಶ ಸ್ತಬ್ಧವಾಗಿತ್ತು. ಹೀಗಾಗಿ, ಜಿಮ್​ಗಳು ಬಂದ್​ ಆಗಿದ್ದವು. ಇದೇ ಕಾರಣಕ್ಕೆ ಅನೇಕರು ಫಿಟ್​ನೆಸ್​ ಕಳೆದುಕೊಂಡಿದ್ದರು. ಆದರೆ, ಈ ಸಂದರ್ಭದಲ್ಲೂ ರಾಹುಲ್​ ಗಾಂಧಿ ಜಿಮ್​ ಬಿಟ್ಟಿಲ್ಲ ಎನ್ನುವುದು ಈ ಫೋಟೋ ಮೂಲಕ ಸಾಬೀತಾಗಿತ್ತು.

ಇದನ್ನೂ ಓದಿ: ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

Published On - 6:50 pm, Mon, 1 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್