New Rules in March: ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..

ಆನ್​ಲೈನ್​ ವಹಿವಾಟು ಮತ್ತು ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುವ ಸಂಬಂಧ ಇಂದಿನಿಂದ ಒಂದಷ್ಟು ಬದಲಾವಣೆ ಮಾಡಲು ಕೆಲವು ಬ್ಯಾಂಕ್​ಗಳು ನಿರ್ಧರಿಸಿವೆ. ಇಂದಿನಿಂದ (ಮಾ.1) ಇಂಡಿಯನ್ ಬ್ಯಾಂಕ್​ (Indian Bank) ಎಟಿಎಂಗಳಲ್ಲಿ 2000 ರೂ. ನೋಟುಗಳು ಸಿಗುವುದಿಲ್ಲ.

New Rules in March: ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..
ಫಾಸ್​ಟ್ಯಾಗ್ ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Mar 01, 2021 | 3:11 PM

ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ತೈಲ ಮಾರ್ಕೆಟಿಂಗ್ ಕಂಪನಿಗಳು ಗ್ಯಾಸ್​ ಸಿಲಿಂಡರ್​​ಗಳ ಹೊಸ ದರವನ್ನು ಪರಿಷ್ಕರಿಸುತ್ತವೆ. ಅಂತೆಯೇ ಇಂದು ಕೂಡ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ದರ ಹೆಚ್ಚಿದೆ. ಇದರ ಹೊರತಾಗಿ ಫೆಬ್ರವರಿಯಲ್ಲೇ ಮೂರು ಬಾರಿ ಪರಿಷ್ಕೃತಗೊಂಡಿವೆ. ಇಂದು ಮಾರ್ಚ್​ 1ರಿಂದ ಬರೀ ಗ್ಯಾಸ್​ ಸಿಲಿಂಡರ್​ಗಳ ಬೆಲೆಯಲ್ಲಷ್ಟೇ ಬದಲಾವಣೆಯಾಗಿದ್ದಲ್ಲ, ಅದರ ಹೊರತಾಗಿ ಕೂಡ ಬೇರೆ ಕೆಲವು ನಿಯಮಗಳು ಅನ್ವಯ ಆಗಲಿವೆ. ಹಾಗಿದ್ದರೆ ಯಾವ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳು ಇಂದಿನಿಂದ ಆಗಲಿವೆ ಎಂಬುದರ ಮಾಹಿತಿ ಇಲ್ಲಿದೆ..

ಫಾಸ್​ಟ್ಯಾಗ್​ (FASTag) ದೇಶಾದ್ಯಂತ ಫಾಸ್​ಟ್ಯಾಗ್​ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇಂದಿನವರೆಗೆ (ಮಾರ್ಚ್​ 1) ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ಪ್ಲಾಜಾಗಳಲ್ಲಿ ಉಚಿತವಾಗಿಯೂ ವಿತರಣೆಯಾಗುತ್ತಿತ್ತು. ಆದರೆ ಇಂದಿನಿಂದ ಫಾಸ್​ಟ್ಯಾಗ್​(FASTag) ಎಲ್ಲಿಯೂ ಉಚಿತವಾಗಿ ಸಿಗುವುದಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಫಾಸ್​ಟ್ಯಾಗ್​ನ್ನು ಹೊಂದುವುದು ಕಡ್ಡಾಯವಾಗಿದ್ದು, ಅದನ್ನು ಪಡೆಯಲು ಇಂದಿನಿಂದ 100 ರೂ.ಶುಲ್ಕ ನೀಡಬೇಕಾಗುತ್ತದೆ.

ಟೋಲ್​ ಪ್ಲಾಜಾಗಳಲ್ಲಿ ವಾಹನ ದಟ್ಟಣೆಯಾಗುವುದನ್ನು ತಪ್ಪಿಸಲು, ವೇಗವಾಗಿ ಶುಲ್ಕ ವಸೂಲಿ ಮಾಡಲು ಈ ಫಾಸ್​ಟ್ಯಾಗ್​ ವಿದ್ಯುಚ್ಚಾಲಿತ ವಿಧಾನವನ್ನು ಅಳವಡಿಸಲಾಗಿದೆ. ಫೆ.16ರಿಂದಲೇ ಕಡ್ಡಾಯ ಮಾಡಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರೂ ಇದನ್ನು ಹೊಂದುವುದು ಕಡ್ಡಾಯವಾಗಿದೆ. ಇಷ್ಟು ದಿನ ದೇಶದ 770 ಟೋಲ್​ ಪ್ಲಾಜಾಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಫಾಸ್​ಟ್ಯಾಗ್​ ಇನ್ನು ಮುಂದೆ ಉಚಿತವಲ್ಲ.

ಕೊರೊನಾ ಲಸಿಕೆ 2ನೇ ಹಂತದ ವಿತರಣೆ ಕೊವಿಡ್​-19 ಲಸಿಕೆ 2ನೇ ಹಂತದ ವಿತರಣೆ ಇಂದಿನಿಂದ (ಮಾರ್ಚ್​ 1) ಶುರುವಾಗಿದೆ. ಈ ಬಾರಿ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತ್ತು 45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊವಿಡ್​ 19 ಲಸಿಕೆ ನೀಡಲಾಗುತ್ತದೆ. ಇಂದಿನಿಂದ ಶುರುವಾಗಿರುವ ಲಸಿಕೆ ವಿತರಣೆ ಅಭಿಯಾನದ ನಿಯಮಗಳು ಯಾರಿಗೆ ಅನ್ವಯ ಆಗುತ್ತವೆಯೋ, ಅವರು ತಮ್ಮ ಹೆಸರನ್ನು ರಿಜಿಸ್ಟಾರ್​ ಮಾಡಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಗುರುತು ಪತ್ರ ನೀಡಿದರೆ ಸಾಕು. ಆದರೆ 45ವರ್ಷ ಮೇಲ್ಪಟ್ಟು, ಬೇರೆ ಆರೋಗ್ಯ ಸಮಸ್ಯೆ ಉಳ್ಳವರು ತಮ್ಮ ಕಾಯಿಲೆಯ ಬಗೆಗಿನ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಬೇಕು. ಹಾಗೇ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್​ಗೆ 250 ರೂ.ಶುಲ್ಕ ವಿಧಿಸಲಾಗುವುದು.

ಬ್ಯಾಂಕಿಂಗ್​ ವಲಯದಲ್ಲೊಂದಷ್ಟು ಬದಲಾವಣೆ ಆನ್​ಲೈನ್​ ವಹಿವಾಟು ಮತ್ತು ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುವ ಸಂಬಂಧ ಇಂದಿನಿಂದ ಒಂದಷ್ಟು ಬದಲಾವಣೆ ಮಾಡಲು ಕೆಲವು ಬ್ಯಾಂಕ್​ಗಳು ನಿರ್ಧರಿಸಿವೆ. ಇಂದಿನಿಂದ (ಮಾ.1) ಇಂಡಿಯನ್ ಬ್ಯಾಂಕ್​ (Indian Bank) ಎಟಿಎಂಗಳಲ್ಲಿ 2000 ರೂ. ನೋಟುಗಳು ಸಿಗುವುದಿಲ್ಲ. ಬ್ಯಾಂಕ್​ ಗ್ರಾಹಕರಿಗೆ 2000 ರೂ.ನೋಟು ಬೇಕಾದರೆ ಅವರು ಹತ್ತಿರದ ಬ್ರ್ಯಾಂಚ್​​ಗಳಿಗೇ ಭೇಟಿ ಕೊಡಬೇಕು. ಎಟಿಎಂಗಳಲ್ಲಿ 2000 ರೂ.ನೋಟು ಹಾಕುವುದರಿಂದ ಅದಕ್ಕೆ ಚಿಲ್ಲರೆ ಪಡೆಯುವುದು ಗ್ರಾಹಕರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬ್ಯಾಂಕ್​ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಇಂಡಿಯನ್ ಬ್ಯಾಂಕ್​ ಜತೆ ವಿಲೀನಗೊಂಡಿರುವ ಅಲಹಾಬಾದ್​ ಬ್ಯಾಂಕ್​ ಕೂಡ ತನ್ನ ಎಟಿಎಂಗಳಲ್ಲಿ 2000 ರೂ.ನೋಟು ತುಂಬುವುದನ್ನು ನಿಲ್ಲಿಸುತ್ತವೆಯಾ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಐಎಫ್​​ಎಸ್​ಸಿ ಕೋಡ್​ ಇರೋದಿಲ್ಲ ಬ್ಯಾಂಕ್​ ಆಫ್​ ಬರೋಡಾದಲ್ಲಿ, ವಿಜಯಾ ಬ್ಯಾಂಕ್​, ದೇನಾ ಬ್ಯಾಂಕ್ ವಿಲೀನಗೊಂಡಿದ್ದು ಗೊತ್ತೇ ಇದೆ. ಇದೀಗ ಇ-ವಿಜಯಾ ಮತ್ತು ಇ-ದೇನಾ ಆನ್​ಲೈನ್ ಬ್ಯಾಂಕಿಂಗ್​ ವಹಿವಾಟಿನಲ್ಲಿ ಇಂದಿನಿಂದ ಹಳೇ IFSC ಕೋಡ್​​ಗಳು ಸ್ಥಗಿತಗೊಳ್ಳಲಿವೆ. ಬ್ಯಾಂಕ್​​ಗಳ ಗ್ರಾಹಕರು ಹೊಸ IFSC ಕೋಡ್​ ಪಡೆಯಲು 8422009988ಕ್ಕೆ ರಿಜಿಸ್ಟರ್ ಮೊಬೈಲ್​ನಿಂದ ಮೆಸೇಜ್​ ಮಾಡಬೇಕು. ಅದು MIGR ನಿಮ್ಮ ಹಳೇ ಅಕೌಂಟ್​ನ ಕೊನೇ ನಾಲ್ಕು ಡಿಜಿಟ್​ಗಳನ್ನು ನಮೂದಿಸಿ ಮಸೇಜ್​ ಮಾಡಬೇಕು. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾದ ಹೆಲ್ಪ್​ ಡೆಸ್ಕ್ 1800 258 1700 ಕ್ಕೂ ಕರೆ ಮಾಡಬಹುದು.

ಇದನ್ನೂ ಓದಿ: Bank Holidays in March 2021: ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ

Gold Silver Price: ಮಾರ್ಚ್​ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ