ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್; ಹೊರಬಿತ್ತು ಮೈಲಾರಲಿಂಗೇಶ್ವರನ ಕಾರಣಿಕ.. ಒಳಾರ್ಥವೇನು?

‘ಮುತ್ತಿನರಾಶಿ’ ಎಂದರೆ ಸಂಪತ್ತು ಎಂದೂ, ಅದು ‘ಮೂರು ಭಾಗ ಆಗುತ್ತದೆ’ ಎಂದರೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದೂ ಕೆಲವರು ವ್ಯಾಖ್ಯಾನಿಸಿದ್ದಾರೆ. ಇನ್ನೂ ಕೆಲವರು ಇದು ‘ಶುಭ ಕಾರಣಿಕ. ಕೊರೊನಾದಿಂದ ದೇಶ ಸುಧಾರಿಸಿಕೊಂಡಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ’ ಎಂದು ಹೇಳುತ್ತಿದ್ದಾರೆ.

ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್; ಹೊರಬಿತ್ತು ಮೈಲಾರಲಿಂಗೇಶ್ವರನ ಕಾರಣಿಕ.. ಒಳಾರ್ಥವೇನು?
ಮೈಲಾರಲಿಂಗ ಕಾರಣಿಕ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 01, 2021 | 10:20 PM

ಹೂವಿನಹಡಗಲಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆವ ಮೈಲಾರಲಿಂಗೇಶ್ವರನ ಕಾರಣಿಕಕ್ಕೆ ಭಾರೀ ಮಹತ್ವವಿದೆ. ಈ ಕಾರಣಿಕವನ್ನ ವರ್ಷದ ಭವಿಷ್ಯವಾಣಿ ಎಂದೇ ಭಕ್ತರು ನಂಬುವ ಕಾರಣ ಪ್ರತಿವರ್ಷವೂ ಮೈಲಾರಲಿಂಗೇಶ್ವರ ಕಾರಣಿಕ ಕೇಳಲು ಜನರು ಭಯ ಭಕ್ತಿಯಿಂದ ಕಾತರರಾಗಿ ಕಾಯುತ್ತಾರೆ. ಅಂತೆಯೇ ಈ ಬಾರಿ ಮೈಲಾರದಲ್ಲಿ ಬಿಲ್ಲನ್ನೇರಿ ಗೊರವಯ್ಯ ಕಾರಣಿಕವಾಣಿ ನುಡಿದಿದ್ದು, ಎಲ್ಲರ ಗಮನ ಅತ್ತ ಹೋಗುತ್ತಿದೆ. ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂದಿರುವ ಕಾರಣಿಕವಾಣಿಯ ಒಳಾರ್ಥ ಹುಡುಕಲು ಜನ ಪ್ರಯತ್ನಿಸುತ್ತಿದ್ದಾರೆ.

ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ, ಶೂನ್ಯವನ್ನು ದಿಟ್ಟಿಸುತ್ತಾ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂದು ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ಗೊರವ ಸಮುದಾಯದ ಪ್ರಮುಖರು ಭಕ್ತಿಯಿಂದ ಅವರನ್ನು ಕಂಬಳಿಯಲ್ಲಿ ಹಿಡಿದರು. ಮೈಲಾರದಲ್ಲಿ ಗೊರವಯ್ಯ ನುಡಿಯುವ ಕಾರಣಿಕವನ್ನು ಬಗೆಬಗೆಯಾಗಿ ವ್ಯಾಖ್ಯಾನಿಸಲಾಗುತ್ತದೆ. ಈ ಬಾರಿಯ ಕಾರಣಿಕವಾಗಿರುವ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂಬ ಸಾಲನ್ನು ಇದೇ ರೀತಿ ಹಲವು ಬಗೆಗಳಲ್ಲಿ ಅರ್ಥೈಸಲಾಗುತ್ತಿದೆ.

‘ರಾಜಕೀಯವಾಗಿ ಕೇಂದ್ರ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಮುನ್ಸೂಚನೆ ಈ ಕಾರಣಿಕದಲ್ಲಿದೆ. ಇದನ್ನು 3 ಭಾಗದಲ್ಲಿ ಮಳೆ ಬೆಳೆ ಸಮೃದ್ಧಿ, 1 ಭಾಗದಲ್ಲಿ ಸ್ವಲ್ಪ ಸಮಸ್ಯೆ ಎಂದೂ ವಿಶ್ಲೇಷಿಸಬಹುದು ಎಂದು ಮೈಲಾರ ಲಿಂಗೇಶ್ವರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​ ಅಭಿಪ್ರಾಯಪಟ್ಟರು.

‘ಮುತ್ತಿನರಾಶಿ’ ಎಂದರೆ ಸಂಪತ್ತು ಎಂದೂ, ಅದು ‘ಮೂರು ಭಾಗ ಆಗುತ್ತದೆ’ ಎಂದರೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದೂ ಕೆಲವರು ವ್ಯಾಖ್ಯಾನಿಸಿದ್ದಾರೆ. ಇನ್ನೂ ಕೆಲವರು ಇದು ‘ಶುಭ ಕಾರಣಿಕ. ಕೊರೊನಾದಿಂದ ದೇಶ ಸುಧಾರಿಸಿಕೊಂಡಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ’ ಎಂದು ಹೇಳುತ್ತಿದ್ದಾರೆ. ಕೆಲವರು ಮಾತ್ರ ಕಾರಣಿಕವನ್ನು ಮತ್ತೊಂದು ಬಗೆಯಾಗಿ ವಿವರಿಸುತ್ತಿದ್ದಾರೆ. ಮೂರು ಭಾಗ ಎಂದರೆ ಇರುವ ಸಂಪತ್ತು ಹಂಚಿಹೋಗಬಹುದು ಎನ್ನುವ ಅರ್ಥದಲ್ಲಿ ವಿವರಿಸುತ್ತಿದ್ದಾರೆ.

ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಜ್ಯೋತಿಷಿ ಡಾ.ಬಸವರಾಜ್ ಗುರೂಜಿ, ಈ ಬಾರಿಯ ಕಾರಣಿಕ ಭವಿಷ್ಯ ‘ಮುತ್ತಿನ ರಾಶಿ ಮೂರು ಭಾಗ ಆದೀತಲೆ’ ಇದರ ಅರ್ಥ ಸತ್ವ, ರಜೋ, ತಮೋಗುಣವಾಗಿ ಮೂರುಭಾಗ. ಅಂದರೆ ಮನಸ್ಸುಗಳು ವಿಂಗಡಣೆ ಆಗಬಹುದು ಎಂದು ವಿಶ್ಲೇಷಿಸಿದ್ದಾರೆ.

ಕಳಚಿಬಿದ್ದ ತ್ರಿಶೂಲ: ಭಕ್ತರಲ್ಲಿ ಬೇಸರ ಮೈಲಾರ ಲಿಂಗೇಶ್ವರನ ಕಾರಣಿಕ ನುಡಿಯುವ ಮೊದಲೇ ದೇಗುಲ ಮುಂದಿನ ಕಟ್ಟೆಯಲ್ಲಿದ್ದ ಕಲ್ಲಿನ ತ್ರಿಶೂಲ ಕಳಚಿಬಿದ್ದಿದೆ. ಇದು ಅಪಶಕುನದ ಸೂಚನೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದರು. ತ್ರಿಶೂಲವನ್ನು ಈ ಮೊದಲು ಇದ್ದಂತೆಯೇ ಶಾಸ್ತ್ರೋಕ್ತವಾಗಿ ಮರು ಸ್ಥಾಪಿಸಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಮುಜರಾಯಿ ಅಧಿಕಾರಿಗಳಿಗೆ ಆಗ್ರಹಿಸಿದರು.

Mylaralinga Goravayya Karanika

ಮೈಲಾರಲಿಂಗ ಕಾರಣಿಕ

ಕಳೆದ ವರ್ಷ ‘ಸಂಪಾಯಿತಲೇ ಪರಾಕ್’ ಮೈಲಾರ ಕ್ಷೇತ್ರದಲ್ಲಿ ಕಳೆದ ವರ್ಷ ಅಂದರೆ ಫೆ.20, 2020ರಂದು ಗೊರವಯ್ಯ ‘ಸಂಪಾಯಿತಲೇ ಪರಾಕ್’ ಎಂದು ಕಾರಣಿಕ ನುಡಿದಿದ್ದರು. ‘ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ರೈತರ ಬದುಕು ಸುಧಾರಿಸುತ್ತದೆ’ ಎಂದು ಭಕ್ತರು ಅಂದಿನ ಕಾರಣಿಕವನ್ನು ವ್ಯಾಖ್ಯಾನಿಸಿಕೊಂಡಿದ್ದರು. ಅದರಂತೆಯೇ ಕಳೆದ ವರ್ಷ ಮಳೆ-ಬೆಳೆ ಚೆನ್ನಾಗಿ ಆಗಿತ್ತು. ಕೊರೊನಾ ಲಾಕ್​ಡೌನ್ ಕಾರಣದಿಂದಾಗಿ ಕೃಷಿ ಮಾರುಕಟ್ಟೆಗೆ ಸಮಸ್ಯೆಯಾಗಿದ್ದರೂ ಬೆಳೆಗಳಿಗೆ ಅತಿವೃಷ್ಟಿ ಹೊರತುಪಡಿಸಿ ಕೀಟಬಾಧೆ ಅಥವಾ ರೋಗಬಾಧೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ಕಾರಣಿಕವೂ ಶುಭ ಸೂಚಕ ಎಂಬ ಮಾತು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ: ಅನ್ನದಾತರಲ್ಲಿ ಮಂದಹಾಸ

Published On - 5:48 pm, Mon, 1 March 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ