ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ: ಅನ್ನದಾತರಲ್ಲಿ ಮಂದಹಾಸ
ಬಳ್ಳಾರಿ: ಒಂದೇ ಒಂದು ಸದ್ದು.. ಆ ಸದ್ದಿಗೆ ದಶದಿಕ್ಕುಗಳ ಮೌನವಾಗುತ್ತೆ. ಲಕ್ಷಾಂತರ ಭಕ್ತರು ನಿಶ್ಯಬ್ಧರಾಗುತ್ತೆ. ಯಾಕಂದ್ರೆ, ಆ ಬಳಿಕ ಪ್ರಕಟಿಸೋ ಭವಿಷ್ಯವಾಣಿಗೆ ಅಷ್ಟು ಮಹತ್ವವಿದೆ. ನಿನ್ನೆ ಆ ಭವಿಷ್ಯವಾಣಿ ಹೊರಬಿತ್ತು. ಕಾಲಿಡಲು ಜಾಗವಿಲ್ಲ.. ಸುಳಿಯೋದಕ್ಕೂ ಸಾಧ್ಯವಿಲ್ಲ.. ಎತ್ತ ನೋಡಿದ್ರೂ ಜನವೋ ಜನ. ಕಾದು ಕುಳಿತವರ ಮಧ್ಯದಲ್ಲಿ ಕುದುರೇ ಏರಿ ಗೊರವಪ್ಪ ಬಂದೇ ಬಿಟ್ರು. ಸಾವಿರಾರು ಜನರ ನಡುವೆ, ಕಂಬವನ್ನ ಚಕಚಕನೇ ಹತ್ತೇ ಬಿಟ್ರು. ಅತ್ತಿತ್ತ ನೋಡಿದವ್ರು, ಸದ್ದಲೇ ಅಂದಿದ್ದೇ ಅಂದಿದ್ದು. ನಿಶ್ಯಬ್ಧ.. ಜಾತ್ರೆಯಂತ ಜಾತ್ರೆ ಕತ್ತಲ ಕೋಣೆಯಂತೆ […]
ಬಳ್ಳಾರಿ: ಒಂದೇ ಒಂದು ಸದ್ದು.. ಆ ಸದ್ದಿಗೆ ದಶದಿಕ್ಕುಗಳ ಮೌನವಾಗುತ್ತೆ. ಲಕ್ಷಾಂತರ ಭಕ್ತರು ನಿಶ್ಯಬ್ಧರಾಗುತ್ತೆ. ಯಾಕಂದ್ರೆ, ಆ ಬಳಿಕ ಪ್ರಕಟಿಸೋ ಭವಿಷ್ಯವಾಣಿಗೆ ಅಷ್ಟು ಮಹತ್ವವಿದೆ. ನಿನ್ನೆ ಆ ಭವಿಷ್ಯವಾಣಿ ಹೊರಬಿತ್ತು.
ಕಾಲಿಡಲು ಜಾಗವಿಲ್ಲ.. ಸುಳಿಯೋದಕ್ಕೂ ಸಾಧ್ಯವಿಲ್ಲ.. ಎತ್ತ ನೋಡಿದ್ರೂ ಜನವೋ ಜನ. ಕಾದು ಕುಳಿತವರ ಮಧ್ಯದಲ್ಲಿ ಕುದುರೇ ಏರಿ ಗೊರವಪ್ಪ ಬಂದೇ ಬಿಟ್ರು. ಸಾವಿರಾರು ಜನರ ನಡುವೆ, ಕಂಬವನ್ನ ಚಕಚಕನೇ ಹತ್ತೇ ಬಿಟ್ರು. ಅತ್ತಿತ್ತ ನೋಡಿದವ್ರು, ಸದ್ದಲೇ ಅಂದಿದ್ದೇ ಅಂದಿದ್ದು. ನಿಶ್ಯಬ್ಧ.. ಜಾತ್ರೆಯಂತ ಜಾತ್ರೆ ಕತ್ತಲ ಕೋಣೆಯಂತೆ ಆಗ್ಬಿಡ್ತು. ನಂತರ, ಹೊರಬಿದ್ದಿದ್ದೇ ವರ್ಷದ ಭವಿಷ್ಯವಾಣಿ.
ಸಂಪಾಯಿತ್ತಲೇ ಪರಾಕ್: ಪರಾಕ್.. ಸಂಪಾಯಿತ್ತಲೇ ಪರಾಕ್.. ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಹೊರಬಿದ್ದ ವರ್ಷದ ಭವಿಷ್ಯವಾಣಿ ಇದು. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಮೈಲಾರ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಿನ್ನೆ ಕಾರ್ಣಿಕ ನುಡಿಯಲಾಯ್ತು.
ರಾಜ್ಯ, ಕೇಂದ್ರ ಸರ್ಕಾರ ಆಗಿರಲಿದೆಯಂತೆ ಸುಭದ್ರ: ಫೆಬ್ರವರಿ 1ರಂದು ಆರಂಭವಾದ ಜಾತ್ರೆ ಹನ್ನೊಂದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ನಿನ್ನೆ, ಕಾರ್ಣಿಕದ ದಿನ ಆಗಿದ್ರಿಂದ, ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ರು. ಜನರ ನಡುವೆ, 12 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಪ್ಪ, ಸಂಪಾಯಿತಲೇ ಪರಾಕ್ ಅಂತ ಭವಿಷ್ಯ ನುಡಿದು ಕೆಳಗೆ ಬಿದ್ರು. ಅಂದ್ರೆ, ಈ ವರ್ಷ ಮಳೆ ಬೆಳೆ ಸಮೃದ್ಧಿಯಾಗಿರುತ್ತೆ. ರಾಜಕೀಯವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇರಲ್ಲ ಅನ್ನೋದು ಇದರ ಅರ್ಥ.
ಕಾರ್ಣಿಕೋತ್ಸವದಲ್ಲಿ ಬೇಡಿಕೊಂಡ್ರೆ ಅದು ಈಡೇರುತ್ತೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ, ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ರು. ಭವಿಷ್ಯವಾಣಿ ಕೇಳಿ, ಅಲ್ಲಿಯೇ ಕಟ್ಟಿಗೆ ತುಂಡು, ಇಲ್ಲವೇ ಮಣ್ಣಿನಿಂದ ಮನೆ ಕಟ್ಟುವ ಮೂಲಕ ಹರಕೆ ಕಟ್ಟಿದ್ರು. ಇನ್ನು, ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಕೂಡ, ಭವಿಷ್ಯವಾಣಿ ಕೇಳಲು ಹಾಜರಿದ್ರು. ಒಟ್ನಲ್ಲಿ, ಈ ಬಾರಿ ಎಲ್ಲವೂ ಸಮೃದ್ಧಿಯಾಗಿರುತ್ತೆ ಅಂತ ಗೊರವಪ್ಪ ಕಾರ್ಣಿಕ ನುಡಿದಿದ್ದಾರೆ. ಈ ಭವಿಷ್ಯವಾಣಿ ರೈತರ ಮೊಗದಲ್ಲಿ ನಗು ತಂದಿದೆ.