ಎರಡನೇ ಹಂತದಲ್ಲಿ ಕೊವಿಡ್ ಲಸಿಕೆ ಪಡೆದ ಇನ್ಫಿ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿ

ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿ ಲಸಿಕೆ ಪಡೆದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿಗೆ ನಾರಾಯಣ ಹೆಲ್ತ್ ಸಿಟಿ ಸಂಸ್ಥಾಪಕ ದೇವಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ.

  • TV9 Web Team
  • Published On - 18:11 PM, 1 Mar 2021
ಎರಡನೇ ಹಂತದಲ್ಲಿ ಕೊವಿಡ್ ಲಸಿಕೆ ಪಡೆದ ಇನ್ಫಿ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಷನ್ ಚೇರ್ಮನ್ ಸುಧಾಮೂರ್ತಿ ಎರಡನೇ ಹಂತದಲ್ಲಿ ಲಸಿಕೆ ಪಡೆದ ದೃಶ್ಯ

ಬೆಂಗಳೂರು: ಇಂದು ದೇಶದಾದ್ಯಂತ ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿದೆ. ಎರಡನೇ ಹಂತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳ್ಳಂಬೆಳಗ್ಗೆಯೇ ದೆಹಲಿಯ ಎಮ್ಸ್​ನಲ್ಲಿ ಕೊವಿಡ್ ಲಸಿಕೆ ಡೋಸ್ ಪಡೆಯುವ ಮೂಲಕ ಚಾಲನೆ ನೀಡಿದ್ದರು. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಷನ್ ಚೇರ್ಮನ್ ಸುಧಾಮೂರ್ತಿ ದಂಪತಿ
ಸಹ ಲಸಿಕೆ ಪಡೆದು ಈ ಅಭಿಯಾನಕ್ಕೆ ಬಲ ತುಂಬಿದ್ದಾರೆ.

ಬೊಮ್ಮಸಂದ್ರದಲ್ಲಿರುವ ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯಲ್ಲಿ ಲಸಿಕೆ ಪಡೆದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿಗೆ ನಾರಾಯಣ ಹೆಲ್ತ್ ಸಿಟಿ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನು ಇಂದು ಬೆಳಿಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಕೂಡ ಲಸಿಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ನಾರಾಯಣ ಹೆಲ್ತ್ ಸಿಟಿಯಲ್ಲಿ 100ಕ್ಕೂ ಹೆಚ್ಚು ಹಿರಿಯ ನಾಗರಿಕರು ಕೊರೊನಾ ಲಸಿಕೆ ಪಡೆದಿದ್ದಾರೆ.

vaccince infosys

ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿ ಲಸಿಕೆ ಪಡೆದ ದೃಶ್ಯ

 

vaccince infosys

ಸುಧಾಮೂರ್ತಿಯವರು ಕೊರೊನಾ ಲಸಿಕೆ ಪಡೆಯುತ್ತಿರುವುದು

ಇದನ್ನೂ ಓದಿ: Covid 19 Vaccination: ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ