AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar: ಬಿಹಾರ ಸರ್ಕಾರಿ ಸಿಬ್ಬಂದಿ ಮನೆ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ, 4 ಕೋಟಿ ರೂ. ನಗದು ವಶ

ಆರ್‌ಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಕೇಂದ್ರ ವಿಚಕ್ಷಣ ಆಯೋಗ ಇಲಾಖೆ ಶನಿವಾರ ದಾಳಿ ನಡೆಸಿದೆ.

Bihar: ಬಿಹಾರ ಸರ್ಕಾರಿ ಸಿಬ್ಬಂದಿ ಮನೆ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ, 4 ಕೋಟಿ ರೂ. ನಗದು ವಶ
Central Intelligence Commission raids
TV9 Web
| Edited By: |

Updated on:Aug 27, 2022 | 4:48 PM

Share

ಪಾಟ್ನಾ: ಬಿಹಾರದ ಕಿಶನ್‌ಗಂಜ್‌ನಲ್ಲಿರುವ ಆರ್‌ಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರೈ ಸೇರಿ ಮೂವರು ಸರ್ಕಾರಿ ಅಧಿಕಾರಿಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ಇಲಾಖೆ ದಾಳಿ ನಡೆಸಿದೆ. ಸಂಜಯ್ ಕುಮಾರ್ ರೈ  ಅವರ ನಿವಾಸದ ಮೇಲೆ  ಶನಿವಾರ ದಾಳಿ ನಡೆಸಿದ್ದು, ಲೆಕ್ಕಕ್ಕೆ ಸಿಗದ ಕೋಟಿಗಟ್ಟಲೆ ಹಣವನ್ನು ವಶಪಡಿಸಿಕೊಂಡಿದೆ. ಗ್ರಾಮೀಣ ಕಾಮಗಾರಿ ಇಲಾಖೆಯ (ಆರ್‌ಡಬ್ಲ್ಯುಡಿ) ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಕೇಂದ್ರ ವಿಚಕ್ಷಣ ಆಯೋಗದ ತಂಡ ದಾಳಿ ನಡೆಸಿದೆ. ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್‌ಗಳಿಂದ ಲಂಚ ಪಡೆದಿರುವ ಬಗ್ಗೆ ಮಾಹಿತಿ ಪಡೆದ ತಂಡ ರೈ ಮನೆ ಮೇಲೆ ದಾಳಿ ಮಾಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ನಾದ ಇಂದ್ರಪುರಿ ರಸ್ತೆ ಸಂಖ್ಯೆ 10ರಲ್ಲಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಸಿದ್ದು, ಸುಮಾರು ₹ 1 ಕೋಟಿ ನಗದು ಪತ್ತೆಯಾಗಿದೆ.

ಇದೇ ವೇಳೆ ತನಿಖಾ ತಂಡ ನೋಟುಗಳನ್ನು ಹೊಂದಾಣಿಕೆ ಮಾಡಲು ಆರಂಭಿಸಿದೆ. ದಾಳಿಯಲ್ಲಿ ಇನ್ನೂ ಹಲವು ದಾಖಲೆಗಳು ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಳಿ ನಡೆಯುತ್ತಿದೆ. ಅಪಾರ ಪ್ರಮಾಣದ ನಗದು ವಸೂಲಿಯಾಗಿರುವುದರಿಂದ ನೋಟು ಎಣಿಕೆ ಯಂತ್ರ ಅಳವಡಿಸಲಾಗಿದೆ.

ಪಾಟ್ನಾದ ಡಿಎಸ್ಪಿ ವಿಜಿಲೆನ್ಸ್ ಸುಜಿತ್ ಸಾಗರ್ ಪ್ರಕಾರ, ಸಂಜಯ್ ಕುಮಾರ್ ರೈ ಒಳಗೊಂಡ ಲಂಚಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಹಲವಾರು ದಾಳಿಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಹಲವಾರು ದಾಳಿಗಳನ್ನು ನಡೆಸಲಾಯಿತು ಮತ್ತು 4 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.

Published On - 3:23 pm, Sat, 27 August 22

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?