ನಾಗಾಲ್ಯಾಂಡ್ ಹತ್ಯೆ ಪ್ರಕರಣ: ಮೃತರ ಕುಟುಂಬಗಳಿಗೆ ತಲಾ 11 ಲಕ್ಷ ರೂ.ಪರಿಹಾರ ನೀಡಲಿರುವ ಕೇಂದ್ರ ಸರ್ಕಾರ
ನಾಗಾಲ್ಯಾಂಡ್ನ ಮೋನ್ನಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ತಪ್ಪಾಗಿ ಭಾವಿಸಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಮೇಜರ್ ಜನರಲ್ ಶ್ರೇಣಿ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಭಾರತೀಯ ಸೇನೆ ನಿರ್ಧರಿಸಿದೆ ಎನ್ನಲಾಗಿದೆ.
ನಾಗಾಲ್ಯಾಂಡ್ನಲ್ಲಿ ನಿನ್ನೆ ಭದ್ರತಾ ಪಡೆಗಳ ಗುಂಡಿನ ದಾಳಿಗೆ 14 ಮಂದಿ ನಾಗರಿಕರು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಇಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ. ಮೃತರ ಕುಟುಂಬಕ್ಕೆ ತಲಾ 11 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದಾಘಿ ಸಿಎಂ ನಿಫಿಯೋ ಮಾಹಿತಿ ನೀಡಿದ್ದಾರೆ. ತಲಾ 5 ಲಕ್ಷ ರೂಪಾಯಿ ಕೊಡುವುದಾಗಿ ನಾಗಾಲ್ಯಾಂಡ್ ರಾಜ್ಯ ಸರ್ಕಾರ ಪ್ರಕಟಿಸಿದೆ. ಹಾಗೇ, ಇಂದು ಓಟಿಂಗ್ ಗ್ರಾಮದಲ್ಲಿ ನಡೆದ ಮೃತರ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ನಿಫಿಯೂ ರಿಯೋ ಪಾಲ್ಗೊಂಡಿದ್ದರು.
ನಿನ್ನೆ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದ ಸಮೀಪ ನಡೆದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ವೇಳೆ ಸೇನೆ ತಪ್ಪಾಗಿ ಕೂಲಿ ಕಾರ್ಮಿಕರ ಟ್ರಕ್ ಮೇಲೆ ಗುಂಡಿನ ದಾಳಿ ನಡೆಸಿತ್ತು. ಅದರಲ್ಲಿ 14 ನಾಗರಿಕರು ಸಾವನ್ನಪ್ಪಿದ್ದಾರೆ. ಅದನ್ನು ನೋಡಿದ ಸ್ಥಳೀಯರು ಆಕ್ರೋಶಗೊಂಡು ಭದ್ರತಾ ಪಡೆಗಳ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅದರಲ್ಲಿ ಯೋಧನೊಬ್ಬ ಮೃತಪಟ್ಟಿದ್ದಾರೆ. ಒಟ್ಟಾರೆ 11 ಮಂದಿ ಗಾಯಗೊಂಡಿದ್ದಾರೆ. ಈ ಅವಘಡವೀಗ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳು ತೀವ್ರ ಕಿಡಿಕಾರುತ್ತಿವೆ. ಇಂದು ಟಿಎಂಸಿಯ ಐವರು ಮುಖಂಡರನ್ನೊಳಗೊಂಡ ನಿಯೋಗವೊಂದು ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ.
ನಾಗಾಲ್ಯಾಂಡ್ನ ಮೋನ್ನಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ತಪ್ಪಾಗಿ ಭಾವಿಸಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಮೇಜರ್ ಜನರಲ್ ಶ್ರೇಣಿ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಭಾರತೀಯ ಸೇನೆ ನಿರ್ಧರಿಸಿದ್ದು, ಇನ್ನು ಸಿಬ್ಬಂದಿ ವಿಚಾರಣೆಯನ್ನು ಕೋರ್ಟ್ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾಗಿ ಸೇನಾ ಮೂಲಗಳು ತಿಳಿಸಿವೆ. ಈ ಮಧ್ಯೆ ರಾಜ್ಯದ ಬುಡಕಟ್ಟು ಜನಾಂಗದ ಪ್ರಮುಖ ಸಂಘಟನೆಯೊಂದು, ಭದ್ರತಾ ಪಡೆಯ ದಾಳಿಯಲ್ಲಿ ಮೃತಪಟ್ಟವರು 14 ಮಂದಿ ನಾಗರಿಕರಲ್ಲ, 17 ಮಂದಿ ಎಂದು ಪ್ರತಿಪಾದಿಸುತ್ತಿದ್ದು, ಪೊಲೀಸರು ಅಲ್ಲಗಳೆದಿದ್ದಾರೆ.
#WATCH Nagaland CM Neiphiu Rio attends funeral service of civilians killed in army’s anti-insurgency operation at Oting in Nagaland’s Mon pic.twitter.com/PcvIWX4W7Z
— ANI (@ANI) December 6, 2021
ಇದನ್ನೂ ಓದಿ: ನಾನು ಇನ್ಮುಂದೆ ಕಣ್ಣೀರು ಹಾಕಲ್ಲ: ಮಂಡ್ಯದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿಕೆ