AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸ್​ಪೋರ್ಟ್​​ನಲ್ಲಿದ್ದ ರಾಷ್ಟ್ರೀಯತೆ ಕಾಲಂನ್ನು ತೆಗೆದೇಬಿಟ್ಟಿತಾ ಕೇಂದ್ರ ಸರ್ಕಾರ? ವೈರಲ್​ ಮೆಸೇಜ್​ನ ಸತ್ಯಾಂಶ ಏನು?

ಪಾಸ್​ಪೋರ್ಟ್​ನಲ್ಲಿರುವ ರಾಷ್ಟ್ರೀಯತೆ ಕಾಲಂನ್ನು ತೆಗೆದುಹಾಕುವುದು ಸಣ್ಣ ವಿಷಯವಲ್ಲ. ಹಾಗೊಮ್ಮೆ ಸರ್ಕಾರ ಮಾಡಿದ್ದರೆ, ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು. ಆದರೆ ಎಷ್ಟೇ ಹುಡುಕಿದರೂ ಇದಕ್ಕೆ ಸಂಬಂಧಪಟ್ಟ ಒಂದು ಸುದ್ದಿಯೂ ಸಿಕ್ಕಿಲ್ಲ.

ಪಾಸ್​ಪೋರ್ಟ್​​ನಲ್ಲಿದ್ದ ರಾಷ್ಟ್ರೀಯತೆ ಕಾಲಂನ್ನು ತೆಗೆದೇಬಿಟ್ಟಿತಾ ಕೇಂದ್ರ ಸರ್ಕಾರ? ವೈರಲ್​ ಮೆಸೇಜ್​ನ ಸತ್ಯಾಂಶ ಏನು?
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Jan 09, 2021 | 7:13 PM

Share

ಪಾಸ್​ಪೋರ್ಟ್​ನಲ್ಲಿದ್ದ ರಾಷ್ಟ್ರೀಯತೆ (nationality) ಕಾಲಂನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ ಎಂಬ ಸಂದೇಶವೊಂದು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.. ಫೇಸ್​ಬುಕ್​ನಲ್ಲಷ್ಟೇ ಅಲ್ಲದೆ, ವಾಟ್ಸಾಪ್​​ನಲ್ಲೂ ಈ ಮೆಸೇಜ್​ ಓಡಾಡುತ್ತಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪಾಸ್​​ಪೋರ್ಟ್​​ನಲ್ಲಿದ್ದ ರಾಷ್ಟ್ರೀಯತೆ ಎಂಬ ಕಾಲಂನ್ನು ತೆಗದುಹಾಕಿಬಿಟ್ಟಿದೆ. ಹಾಗಾಗಿ ನಿಮ್ಮ ಹಳೆಯ ಪಾಸ್​ಪೋರ್ಟ್​ಗಳನ್ನು ಕಳೆದುಕೊಳ್ಳಬೇಡಿ.. ಹಾಳು ಮಾಡಿಕೊಳ್ಳಬೇಡಿ ಎಂಬ ಮೆಸೇಜ್​​ ಸೈಯದ್​ ಎಟೆಮಡ್ ಉದ್ದೀನ್​ ಎಂಬುವರ ವಾಟ್ಸಾಪ್​ನಿಂದ ಶೇರ್​ ಆಗಿದೆ. ಅವರು ತಮ್ಮನ್ನು ತಾವು ವಕೀಲ ಎಂದು ಹೇಳಿಕೊಂಡು, ಕಾನೂನು ಸಲಹೆ ಎಂಬರ್ಥದಲ್ಲಿ ಈ ಸಂದೇಶವನ್ನು ಕಳಿಸಿದ್ದರಿಂದ, ಸಹಜವಾಗಿಯೇ ಹಲವರು ಇದನ್ನು ಶೇರ್​ ಮಾಡಿದ್ದಾರೆ.

ವಾಸ್ತವ ಏನು? ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ (AFWA) ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಈ ಸಂದೇಶದ ವಾಸ್ತವ ಹೊರಬಿದ್ದಿದೆ. ಪಾಸ್​ಪೋರ್ಟ್​ ಸೇರಿ, ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ದಾಖಲೆಗಳಲ್ಲಿ ರಾಷ್ಟ್ರೀಯತೆ (nationality) ಕಾಲಂ ಹಾಗೇ ಇದೆ. ಅದನ್ನು ತೆಗೆದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್​ ಶ್ರೀವಾಸ್ತವ್​ ಸ್ಪಷ್ಟಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ತಿಳಿಸಿದೆ.

ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು ! ಪಾಸ್​ಪೋರ್ಟ್​ನಲ್ಲಿರುವ ರಾಷ್ಟ್ರೀಯತೆ ಕಾಲಂನ್ನು ತೆಗೆದುಹಾಕುವುದು ಸಣ್ಣ ವಿಷಯವಲ್ಲ. ಹಾಗೊಮ್ಮೆ ಸರ್ಕಾರ ಮಾಡಿದ್ದರೆ, ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು. ಆದರೆ ಎಷ್ಟೇ ಹುಡುಕಿದರೂ ಇದಕ್ಕೆ ಸಂಬಂಧಪಟ್ಟ ಒಂದು ಸುದ್ದಿಯೂ ಸಿಕ್ಕಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಪಾಸ್​ಪೋರ್ಟ್ ಹೊಣೆ ಹೊತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ದ ಪಾಸ್​ಪೋರ್ಟ್ ಸೇವಾ ವೆಬ್​ಸೈಟ್​ನಲ್ಲಿ ಕೂಡ ರಾಷ್ಟ್ರೀಯತೆ ಕಾಲಂ ತೆಗೆದು ಹಾಕಿರುವ ಬಗ್ಗೆ ಯಾವುದೇ ಅಧಿಸೂಚನೆಯೂ ಇಲ್ಲ. ಹಾಗೇ, ಈ ವೆಬ್​ಸೈಟ್​ನಲ್ಲಿ ಇರುವ ಪಾಸ್​ಪೋರ್ಟ್​ ಅರ್ಜಿಯಲ್ಲೂ ರಾಷ್ಟ್ರೀಯತೆಯನ್ನು ನಮೂದಿಸಲು ಕಾಲಂ ಇಡಲಾಗಿದೆ. ಹಾಗೇ, ಇತ್ತೀಚೆಗಷ್ಟೇ ಒಬ್ಬರಿಗೆ ನೀಡಲಾದ ಪಾಸ್​ಪೋರ್ಟ್​ ಕೂಡ ಚೆಕ್​ ಮಾಡಲಾಗಿದ್ದು, ಅದರಲ್ಲೂ ನ್ಯಾಷನಾಲಿಟಿ ಕಾಲಂ ಹಾಗೇ ಇದೆ.

ಹಾಗಾಗಿ ಪಾಸ್​ಪೋರ್ಟ್​ನಲ್ಲಿ ರಾಷ್ಟ್ರೀಯತೆ ಕಾಲಂ ಇರುವುದಿಲ್ಲ ಎಂಬ ಮೆಸೇಜ್​ ನಿಮಗೂ ಬಂದಿದ್ದರೆ ಅದನ್ನು ನಂಬಬೇಡಿ..

ಸುಳ್ಳು ಮಾಹಿತಿಯನ್ನು ಒಳಗೊಂಡ ಸಂದೇಶ

ಇತ್ತೀಚಿನ ಪಾಸ್​ಪೋರ್ಟ್​ನಲ್ಲಿ ರಾಷ್ಟ್ರೀಯತೆ ಕಾಲಂ ಇದೆ..

Follow Us
Lakshmi Hegde
Lakshmi Hegde
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್