ದೆಹಲಿ: ಕೊರೊನಾಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲವೆಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಕೊವಿಡ್ನಿಂದ ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂ. ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಈಗಾಗಲೇ ಅಗತ್ಯ ಇರುವವರಿಗೆ ನೆರವು ನೀಡಲಾಗಿದೆ. ಕೊರೊನಾ ವಿಚಾರವಾಗಿ ರಾಜ್ಯಗಳೂ ಸಹ ನೆರವು ನೀಡಿವೆ. ಹೀಗಾಗಿ ಆರ್ಥಿಕ ತೊಂದರೆ, ಇತರ ಅಂಶಗಳಿಂದಾಗಿ ಪರಿಹಾರ ಹಣ ರಕ್ತಸಂಬಂಧಿಗಳಿಗೆ ಪಾವತಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಆರ್ಥಿಕ ತೊಂದರೆಗಳು ಮತ್ತು ಇತರ ಅಂಶಗಳನ್ನು ಉಲ್ಲೇಖಿಸಿ, ಕೊವಿಡ್-19 ನಿಂದ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿಗಳ ಪರಿಹಾರವನ್ನು ಪಾವತಿಸಲಾಗುವುದಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 12 ರ ದೃಷ್ಟಿಯಿಂದ ಗೃಹ ಸಚಿವಾಲಯದ (ಎಂಎಚ್‌ಎ) ಪತ್ರದ ಪ್ರಕಾರ ಕೊರೊನಾ ಸೋಂಕಿಗೆ ಬಲಿಯಾದವರ ಕುಟುಂಬ ಸದಸ್ಯರಿಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಅರ್ಜಿಗಳನ್ನು ಆಲಿಸಿ ಮೇ 24 ರಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ನೀಡಿತ್ತು.
ಸುಪ್ರೀಂ ಕೋರ್ಟ್ ಹೊರಡಿಸಿದ ನೋಟಿಸ್‌ಗೆ ಉತ್ತರಿಸಿದ ಕೇಂದ್ರ ಸರ್ಕಾರ, ಆರ್ಥಿಕ ತೊಂದರೆಗಳು ಮತ್ತು ಇತರ ಅಂಶಗಳಿಂದಾಗಿ ಪರಿಹಾರ ಹಣ ರಕ್ತಸಂಬಂಧಿಗಳಿಗೆ ಪಾವತಿಸಲಾಗುವುದಿಲ್ಲ ಎಂದು ತಿಳಿಸಿದೆ. ಕೊರೊನಾ ವಿಚಾರವಾಗಿ ಈಗಾಗಲೇ ಅಗತ್ಯವಿರುವ ಪರಿಹಾರಗಳನ್ನು ನೀಡಲಾಗಿದೆ. ಸರ್ಕಾರದ ಸಾಕಷ್ಟು ಯೋಜನೆಗಳನ್ನು ಘೋಷಿಸಿದೆ ಎಂದು ಸ್ಪಷ್ಟಪಡಿಸದೆ.
ಕೊರೊನಾ ಸೋಂಕನ್ನು ಎದುರಿಸಲು ಅಗತ್ಯವಿರುವವರಿಗೆ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಭಾರಿ ಮೊತ್ತವನ್ನು ಖರ್ಚು ಮಾಡಿವೆ ಎಂದು ಕೇಂದ್ರ ಸರ್ಕಾರವು ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ; ಕುಟುಂಬದಲ್ಲಿ ಒಬ್ಬರಿಗೆ ಮಾತ್ರ: ಸಿಎಂ ಯಡಿಯೂರಪ್ಪ ಘೋಷಣೆ