ದಸರಾ ಗಿಫ್ಟ್‌: ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡಿದ ಕೇಂದ್ರ ಸರ್ಕಾರ

|

Updated on: Oct 24, 2020 | 3:25 PM

ದೆಹಲಿ: ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ದಸರಾ ಹಬ್ಬದ ಗಿಫ್ಟ್‌ ಸಿಕ್ಕಿದೆ. ಸಾಲದ ಮೇಲಿನ ಚಕ್ರಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಇದರಿಂದ ಕೊರೊನಾ ಮಹಾಮಾರಿ ಕಾಲದಲ್ಲಿ ಧುತ್ತನೆ ಎದುರಾಗಿದ್ದ ಬಡ್ಡಿ ಸಮಸ್ಯೆಯನ್ನು ದಸರಾ ಹಬ್ಬದ ಕೊಡುಗೆ ರೂಪದಲ್ಲಿ ಕೇಂದ್ರ ಸರ್ಕಾರ ಸಾಲಗಾರರಿಗೆ ತುಸು ನೆಮ್ಮದಿ ತಂದಿದೆ. ಚಕ್ರಬಡ್ಡಿ ಮನ್ನಾಗೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಲಾಕ್‌ಡೌನ್‌ ಅವಧಿಯ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ಸೂಚಿಸಿತ್ತು. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಅವಧಿಯಲ್ಲಿ ಸುಮಾರು […]

ದಸರಾ ಗಿಫ್ಟ್‌: ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡಿದ ಕೇಂದ್ರ  ಸರ್ಕಾರ
ಶೇ 16,000ದಷ್ಟು ಏರಿಕೆ
Follow us on

ದೆಹಲಿ: ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ದಸರಾ ಹಬ್ಬದ ಗಿಫ್ಟ್‌ ಸಿಕ್ಕಿದೆ. ಸಾಲದ ಮೇಲಿನ ಚಕ್ರಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಇದರಿಂದ ಕೊರೊನಾ ಮಹಾಮಾರಿ ಕಾಲದಲ್ಲಿ ಧುತ್ತನೆ ಎದುರಾಗಿದ್ದ ಬಡ್ಡಿ ಸಮಸ್ಯೆಯನ್ನು ದಸರಾ ಹಬ್ಬದ ಕೊಡುಗೆ ರೂಪದಲ್ಲಿ ಕೇಂದ್ರ ಸರ್ಕಾರ ಸಾಲಗಾರರಿಗೆ ತುಸು ನೆಮ್ಮದಿ ತಂದಿದೆ.

ಚಕ್ರಬಡ್ಡಿ ಮನ್ನಾಗೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಲಾಕ್‌ಡೌನ್‌ ಅವಧಿಯ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ಸೂಚಿಸಿತ್ತು. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಅವಧಿಯಲ್ಲಿ ಸುಮಾರು 2 ಕೋಟಿ ರೂಪಾಯಿವರೆಗಿನ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಮಾಡಲು ಸೂಚಿಸಿತ್ತು.

ಚಕ್ರಬಡ್ಡಿ ಮನ್ನಾದ ಒಟ್ಟು ಮೊತ್ತ 6,500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದೀಗ, ಗೃಹ ಸಾಲ, ಶಿಕ್ಷಣ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ಎಂಎಸ್​ಎಂಇಗಳ ಸಾಲ, ಗೃಹೋಪಯೋಗಿ ವಸ್ತುಗಳ ಸಾಲ ಮತ್ತು ತುರ್ತು ಅಗತ್ಯ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಆಗಲಿದೆ.

Published On - 3:14 pm, Sat, 24 October 20