ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಸವಾಲು ಸ್ವೀಕರಿಸುತ್ತೇನೆ ಎಂದ ಸಿಎಂ ಯೋಗಿ ಆದಿತ್ಯನಾಥ್​

ಅಸಾದುದ್ದೀನ್ ಓವೈಸಿ ಅವರು ನಮ್ಮ ದೇಶದ ದೊಡ್ಡ ನಾಯಕರು. 2022ರ ಚುನಾವಣೆ ವಿಚಾರದಲ್ಲಿ ಅವರು ನಮಗೆ ಸವಾಲು ಹಾಕಿದ್ದಾರೆ, ನಮ್ಮ ಕಾರ್ಯಕರ್ತರು ಅದನ್ನು ಸ್ವೀಕರಿಸುತ್ತಾರೆ ಎಂದು ಸಿಎಂ ಯೋಗಿ ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಸವಾಲು ಸ್ವೀಕರಿಸುತ್ತೇನೆ ಎಂದ ಸಿಎಂ ಯೋಗಿ ಆದಿತ್ಯನಾಥ್​
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
Updated By: Lakshmi Hegde

Updated on: Jul 04, 2021 | 5:51 PM

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಯೋಗಿ ಆದಿತ್ಯನಾಥ್​ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿಗೆ ಸಿಎಂ ಯೋಗಿ ತಿರುಗೇಟು ನೀಡಿದ್ದಾರೆ. ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು 300ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮತ್ತೆ ಉತ್ತರಪ್ರದೇಶದ ಅಧಿಕಾರ ಹಿಡಿಯುತ್ತೇವೆ ಎಂದಿದ್ದಾರೆ.

ಎಎನ್​ಐ ಜತೆ ಮಾತನಾಡಿದ ಅವರು, ಅಸಾದುದ್ದೀನ್ ಓವೈಸಿ ಅವರು ನಮ್ಮ ದೇಶದ ದೊಡ್ಡ ನಾಯಕರು. 2022ರ ಚುನಾವಣೆ ವಿಚಾರದಲ್ಲಿ ಅವರು ನಮಗೆ ಸವಾಲು ಹಾಕಿದ್ದಾರೆ, ನಮ್ಮ ಕಾರ್ಯಕರ್ತರು ಅದನ್ನು ಸ್ವೀಕರಿಸುತ್ತಾರೆ. ಹಾಗೇ, ಮುಂದಿನ ವರ್ಷವೂ ನಮ್ಮ ಪಕ್ಷವೇ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು. ಈ ಹಿಂದೆ ಮಾತನಾಡಿದ್ದ ಓವೈಸಿ, ನಮ್ಮ ಪಕ್ಷ ಉತ್ತರ ಪ್ರದೇಶದಲ್ಲಿ 100ಕ್ಕೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ಅಧಿಕಾರಕ್ಕೆ ಬಾರದಂತೆ ಖಂಡಿತ ತಡೆಯುತ್ತೇವೆ ಎಂದಿದ್ದರು.

ಇದನ್ನೂ ಓದಿ: ಬಿಜೆಪಿ ಗೆದ್ದಿದ್ದಕ್ಕೆ ಯೋಗಿ ಆದಿತ್ಯನಾಥ್​​​ರಿಗೆ ಅಭಿನಂದನೆ ಹೇಳಿದ ಸೈನಾ ನೆಹ್ವಾಲ್​; ಪ್ರತಿಪಕ್ಷಗಳಿಂದ ಕಟು ಟೀಕೆ

Challenge accepted Yogi Adityanath responds To Asaduddin Owaisi’s Remark