ಚಂಡೀಗಢ: ಚಂಡೀಗಢದ ಸಂಜಯ್ ರಾಣಾ ಅವರು ಕೊವಿಡ್ -19 ಲಸಿಕೆ ಪಡೆದ ಜನರಿಗೆ ಉಚಿತ ಚೋಲೆ ಭಟುರೆ ನೀಡುತ್ತಿದ್ದಾರೆ. ಈ ಬಗ್ಗೆ ಭಾನುವಾರ ಪ್ರಸಾರವಾದ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಪ್ರಸ್ತಾಪಿಸಿದ್ದರು. ಲಸಿಕೆ ಪಡೆದವರಿಗೆ ಚೋಲೆ ಭಟುರೆ ನೀಡುವ ಐಡಿಯಾ ರಾಣಾ ಅವರ ಮಗಳದ್ದಾಗಿದೆ.
ಭಾನುವಾರ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರಾಣಾ, ಸುಮಾರು ಎರಡು ತಿಂಗಳ ಹಿಂದೆ ಇದನ್ನು ಪ್ರಾರಂಭಿಸಿದ್ದೇನೆ. “ನಾನು ದಿನದಲ್ಲಿ 25 ಕ್ಕೂ ಹೆಚ್ಚು ಜನರಿಗೆ ಉಚಿತ ಆಹಾರವನ್ನು ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ. ಅದೇ ವೇಳೆ ನನ್ನ ಹೆಸರು ಉಲ್ಲೇಖಿಸಿದ್ದಕ್ಕೆ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ.
ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, “ಚಂಡೀಗಢದ ಸೆಕ್ಟರ್ 29 ರಲ್ಲಿ, ಸಂಜಯ್ ರಾಣಾ ಜಿ ಅವರು ಆಹಾರ ಮಳಿಗೆ ನಡೆಸುತ್ತಿದ್ದಾರೆ. ಅವರು ಚೋಲೆ ಭಟುರೆಯನ್ನು ಸೈಕಲ್‌ನಲ್ಲಿ ಮಾರಾಟ ಮಾಡುತ್ತಾರೆ. ಈ ರುಚಿಕರವಾದ ಚೋಲೆ ಭಟುರೆ ಅನ್ನು ಉಚಿತವಾಗಿ ತಿನ್ನಲು, ನೀವು ಅದೇ ದಿನ ಕೊವಿಡ್ -19 ಲಸಿಕೆಯನ್ನು ತೆಗೆದುಕೊಂಡಿದ್ದೀರಿ ಎಂಬುದಕ್ಕೆ ನೀವು ಪುರಾವೆ ತೋರಿಸಬೇಕಾಗುತ್ತದೆ. ”
ಕಾರ್ಯಕ್ರಮದ ಸಮಯದಲ್ಲಿ ಉಲ್ಲೇಖಿಸಲಾದ ವ್ಯಕ್ತಿ ರಾಣಾ ಮಾತ್ರ ಅಲ್ಲ. ಮೋದಿ ಅವರು ಒಡಿಶಾದ ಸಂಬಲ್ಪುರ ಜಿಲ್ಲೆಯ ಇಸಾಕ್ ಮುಂಡಾ ಬಗ್ಗೆಯೂ ಮಾತನಾಡಿದ್ದಾರೆ. ದಿನಗೂಲಿ ಕಾರ್ಮಿಕರಾಗಿದ್ದ ಮುಂಡಾ ಈಗ ಸ್ಥಳೀಯ ಪಾಕಪದ್ಧತಿಗಳ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಮತ್ತು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಡುಗೆ ಮಾಡುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ.
My daughter suggested that I should give Chole Bhature for free to people who take the COVID vaccine. So I started this around 2 months ago. I feed more than 25 such people in a day. I thank Modi Ji for mentioning my name (in today’s Mann Ki Baat): Chandigarh resident Sanjay Rana pic.twitter.com/RltGrgB60G
— ANI (@ANI) July 25, 2021
ತಮ್ಮ ವಿಡಿಯೊದಲ್ಲಿ, ಅವರು ಸ್ಥಳೀಯ ಖಾದ್ಯಗಳು, ಸಾಂಪ್ರದಾಯಿಕ ಪಾಕವಿಧಾನಗಳು, ಅವರ ಗ್ರಾಮ, ಜೀವನಶೈಲಿ, ಕುಟುಂಬ ಮತ್ತು ಆಹಾರ ಪದ್ಧತಿಗಳನ್ನು ಪರಿಚಯಿಸುತ್ತಾರೆ ಎಂದು ಮೋದಿ ಹೇಳಿದರು, ಯುಟ್ಯೂಬರ್ ಆಗಿ ಮುಂಡಾ ಅವರ ಪ್ರಯಾಣವು ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು, ಅವರು ಸಾಂಪ್ರದಾಯಿಕ ಒಡಿಶಾ ಖಾದ್ಯದ ‘ ಪಖಾಲಾ ಬಗ್ಗೆ ವಿಡಿಯೊ ಪೋಸ್ಟ್ ಮಾಡಿ ಈ ಪಯಣ ಆರಂಭಿಸಿದ್ದರು.
ಮುಂಡಾ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ “ಉತ್ತಮವಾಗಿ ಗಳಿಸುತ್ತಿದ್ದಾರೆ” ಮತ್ತು ಅವರ ಕುಟುಂಬವನ್ನು ಬೆಂಬಲಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಆಂಬರ್ಕ್ಸ್ ಯೋಜನೆಯನ್ನು ಪ್ರಾರಂಭಿಸಿದ ತಮಿಳುನಾಡಿನ ನೀಲಗಿರಿಯ ರಾಧಿಕಾ ಶಾಸ್ತ್ರಿ ಅವರನ್ನೂ ಮೋದಿ ಪ್ರಸ್ತಾಪಿಸಿದ್ದಾರೆ. ಇದು ಗುಡ್ಡಗಾಡು ಪ್ರದೇಶಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗಾಗಿ ಸುಲಭ ಸಾರಿಗೆ ಸೌಲಭ್ಯಗಳನ್ನು ನೀಡುವತ್ತ ಗಮನಹರಿಸುತ್ತದೆ.
ಇದನ್ನೂ ಓದಿ: Mann Ki Baat ಭಾರತದ ಒಲಿಂಪಿಕ್ಸ್ ತಂಡವನ್ನು ಬೆಂಬಲಿಸಿ: ದೇಶವನ್ನುದ್ದೇಶಿಸಿ ಮೋದಿ ಮನದ ಮಾತು
(Chandigarh man Sanjay Rana gives free Chole Bhature to people who have been administered Covid-19 vaccine)