ಲಡಾಖ್​ ತಲುಪಿದ ಭಾರತೀಯ ಸೇನೆಯ ದಾಳಿಪಡೆ: ಇದು ಮಹತ್ವದ ಕಾರ್ಯತಂತ್ರಕ್ಕೆ ಮುನ್ನುಡಿ

ಸೈನಿಕರಿಗೆ ಈ ಪ್ರದೇಶದ ಕೂಲಂಕಶ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿಶೇಷ ತರಬೇತಿಗಳನ್ನು ಯೋಜಿಸಿದ್ದಾರೆ.

ಲಡಾಖ್​ ತಲುಪಿದ ಭಾರತೀಯ ಸೇನೆಯ ದಾಳಿಪಡೆ: ಇದು ಮಹತ್ವದ ಕಾರ್ಯತಂತ್ರಕ್ಕೆ ಮುನ್ನುಡಿ
ಎಲ್​ಎಸಿ ಬಳಿ ಗಸ್ತು ತಿರುಗುತ್ತಿರುವ ಭಾರತೀಯ ಯೋಧರು (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 25, 2021 | 11:07 PM

ದೆಹಲಿ: ಭಾರತೀಯ ಸೇನೆಯ ವಿಶೇಷ ಸಾಮರ್ಥ್ಯದ ದಾಳಿ ಪಡೆಗಳು ಲಡಾಖ್​ಗೆ ತಲುಪಿದ್ದು, ಸೈನಿಕರಿಗೆ ಕಠಿಣ ತರಬೇತಿ ಆರಂಭವಾಗಿದೆ. ದೇಶದ ಉತ್ತರ, ಪಶ್ಚಿಮ ಮತ್ತು ಈಶಾನ್ಯ ಗಡಿಗಳಲ್ಲಿ ಸೇನೆಯ ನಿಯೋಜನೆಯನ್ನು ಮರುಪರಿಶೀಲಿಸುತ್ತಿರುವ ಹಿರಿಯ ಅಧಿಕಾರಿಗಳು, ಸೈನಿಕರಿಗೆ ಈ ಪ್ರದೇಶದ ಕೂಲಂಕಶ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿಶೇಷ ತರಬೇತಿಗಳನ್ನು ಯೋಜಿಸಿದ್ದಾರೆ.

ಸೇನೆಯ ಆರ್ಟಿಲರಿ, ವಿಶೇಷ ದಾಳಿಪಡೆ, ಸಶಸ್ತ್ರ ವಾಹನಗಳು ಮತ್ತು ಮೆಕನೈಸ್ಡ್​ ತುಕಡಿಗಳನ್ನೂ ಲಡಾಖ್​ಗೆ ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ಜಾಲತಾಣ ವರದಿ ಮಾಡಿದೆ. ಇದು ಕೇವಲ ಪುನರ್​ಮನನ ತರಬೇತಿ ಮಾತ್ರ. ಇದು ಸೈನಿಕರ ಶಾಶ್ವತ ನಿಯೋಜನೆ ಅಲ್ಲ. ಕೆಲ ಸಮಯದ ನಂತರ ಈ ಸಿಬ್ಬಂದಿಯನ್ನು ಶಾಂತಿಕಾಲದ ಅವರ ಮೂಲ ನೆಲೆಗಳಿಗೆ ವಾಪಸ್ ಕಳಿಸಲಾಗುವುದು. ಈ ಮೊದಲಿನಿಂದಲೂ ಸೇನೆಯಲ್ಲಿ ದಾಳಿಯಲ್ಲಿ ನೈಪುಣ್ಯ ಪಡೆದ ಕೆಲ ರೆಜಿಮೆಂಟ್​ಗಳಿದ್ದವು. ಇದೀಗ ಸೇನೆಯ ಒಟ್ಟಾರೆ ಪುನರ್​ ಸಂಘಟನೆ ಪ್ರಯತ್ನಗಳು ನಡೆಯುತ್ತಿರುವುದರಿಂದ ಲಡಾಖ್​ನ ಈ ತರಬೇತಿ ಮಹತ್ವ ಪಡೆದಿದೆ.

ಚೀನಾ ದೇಶವು ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಾವಿರಾರು ಸೈನಿಕರನ್ನು ನಿಯೋಜಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಚೀನಾ ಸಹ ತನ್ನ ಭಾಗದಲ್ಲಿ ಸೇನಾ ಚಟುವಟಿಕೆಗಳು ಮತ್ತು ಮಿಲಿಟರಿ ಸಾಗಾಟಕ್ಕೆ ಪೂರಕವಾದ ಸಿವಿಲ್ ನಿರ್ಮಾಣ ಚಟುವಟಿಕೆಗಳನ್ನು ಹೆಚ್ಚಿಸಿದೆ. ಗಡಿಯಲ್ಲಿ ದೀರ್ಘಾವಧಿ ಸೇನಾ ನಿಯೋಜನೆಗೆ ಚೀನಾ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತದೆ.

ಕಾರ್ಗಿಲ್ ವಿಜಯ್ ದಿವಸ್​ ಎನಿಸಿದ ಜುಲೈ 26ರ ನಂತರ ಭಾರತ ಮತ್ತು ಚೀನಾ ನಡುವೆ ಮತ್ತೊಂದು ಸುತ್ತಿನ ಸೇನಾ ಮಾತುಕತೆಗಳು ನಡೆಯಲಿವೆ. ಜುಲೈ 26ರಂದೇ ಮಾತುಕತೆ ನಡೆಯಬೇಕು ಎಂದು ಚೀನಾ ಕೋರಿತ್ತು. ಆದರೆ ಭಾರತ ಬೇರೊಂದು ದಿನಾಂಕ ನಿಗದಿಪಡಿಸುವಂತೆ ಸೂಚಿಸಿತ್ತು.

(Indian Army Strike Corps units reach Ladakh China Border as part of rebalance strategy)

ಇದನ್ನೂ ಓದಿ: ಟ್ಯಾಂಕ್​ ನಾಶಕ ಕ್ಷಿಪಣಿ ಪ್ರಯೋಗ ಯಶಸ್ವಿ: ಭೂಸೇನೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ

ಇದನ್ನೂ ಓದಿ: ಪೂರ್ವ ಲಡಾಖ್​​ನಲ್ಲಿ ವಿಪರೀತ ಚಳಿ; ಶೇ.90ರಷ್ಟು ಸೈನಿಕರನ್ನು ವಾಪಸ್​ ಕರೆಸಿದ ಚೀನಾ