ಪ್ರಧಾನಿ ಮೋದಿ ಭೇಟಿ ಮಾಡಿ ಆಂಧ್ರಪ್ರದೇಶಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ಕೋರಿದ ಚಂದ್ರಬಾಬು ನಾಯ್ಡು

|

Updated on: Aug 17, 2024 | 8:54 PM

ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ, ಹೊಸ ರಾಜಧಾನಿಯ ಅಭಿವೃದ್ಧಿಗೆ ₹ 15,000 ಕೋಟಿ ಹಂಚಿಕೆ ಸೇರಿದಂತೆ ಕೇಂದ್ರ ಬಜೆಟ್​​ನ ಪ್ರಮುಖ ಘೋಷಣೆಗಳಿಗಾಗಿ ನಾಯ್ಡು ಅವರು ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.ಅಧಿಕೃತ ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದ ಸಾರ್ವಜನಿಕ ಸಾಲವು 2019-20ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) 31.02 ಪ್ರತಿಶತದಿಂದ 2023-24ರಲ್ಲಿ ಶೇಕಡಾ 33.32 ಕ್ಕೆ ಏರಿದೆ.

ಪ್ರಧಾನಿ ಮೋದಿ ಭೇಟಿ ಮಾಡಿ ಆಂಧ್ರಪ್ರದೇಶಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ಕೋರಿದ ಚಂದ್ರಬಾಬು ನಾಯ್ಡು
ಮೋದಿಯನ್ನು ಭೇಟಿ ಮಾಡಿದ ನಾಯ್ಡು
Follow us on

ದೆಹಲಿ ಆಗಸ್ಟ್ 17: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಮತ್ತು ಸಂಪರ್ಕ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಕೂಡಾ ನಾಯ್ಡು ಜತೆ ಇದ್ದರು. ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ, ಹೊಸ ರಾಜಧಾನಿಯ ಅಭಿವೃದ್ಧಿಗೆ ₹ 15,000 ಕೋಟಿ ಹಂಚಿಕೆ ಸೇರಿದಂತೆ  ಕೇಂದ್ರ ಬಜೆಟ್​​ನ ಪ್ರಮುಖ ಘೋಷಣೆಗಳಿಗಾಗಿ ನಾಯ್ಡು ಅವರು ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥರು ಆಂಧ್ರಪ್ರದೇಶದ ಆರ್ಥಿಕ ಸ್ಥಿತಿಯನ್ನು ಪ್ರಧಾನ ಮಂತ್ರಿಯೊಂದಿಗೆ ವಿವರವಾಗಿ ಚರ್ಚಿಸಿದರು. ಹಣಕಾಸಿನ ಸವಾಲುಗಳನ್ನು ನಿಭಾಯಿಸಲು, ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ಮತ್ತು ರಾಜ್ಯದ ಜಿಡಿಪಿಯನ್ನು ಹೆಚ್ಚಿಸಲು ಹೆಚ್ಚಿನ ಕೇಂದ್ರ ಸರ್ಕಾರದ ಬೆಂಬಲವನ್ನು ಕೋರಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ಪೋಸ್ಟ್


ಅಧಿಕೃತ ಮಾಹಿತಿಯ ಪ್ರಕಾರ, ಆಂಧ್ರಪ್ರದೇಶದ ಸಾರ್ವಜನಿಕ ಸಾಲವು 2019-20ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) 31.02 ಪ್ರತಿಶತದಿಂದ 2023-24ರಲ್ಲಿ ಶೇಕಡಾ 33.32 ಕ್ಕೆ ಏರಿದೆ, ಇದು ಕಳೆದ ಐದು ವರ್ಷಗಳಲ್ಲಿ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಯನ್ನು ಸೂಚಿಸುತ್ತದೆ. ನಾಯ್ಡು ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೂಡಾ ಭೇಟಿ ಮಾಡಿದ್ದಾರೆ.

‘ವಿಕಸಿತ್ ಆಂಧ್ರಪ್ರದೇಶಕ್ಕಾಗಿ ನನ್ನ ಸರ್ಕಾರ ವಿಷನ್ 2047 ಅನ್ನು ಸಿದ್ಧಪಡಿಸುತ್ತಿದೆ’: ನಾಯ್ಡು

2047 ರ ವೇಳೆಗೆ ಕೇಂದ್ರದ ಮಹತ್ವಾಕಾಂಕ್ಷೆಯ “ವಿಕಸಿತ್ ಭಾರತ್” ಯೋಜನೆಯಂತೆ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶಕ್ಕಾಗಿ ಅವರ ಸರ್ಕಾರವು ತನ್ನ ವಿಷನ್ 2047 ಅನ್ನು ಸಿದ್ಧಪಡಿಸುತ್ತಿದೆ ಎಂದು ಆಂಧ್ರ ಸಿಎಂ ಗುರುವಾರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದಾರೆ.

16 ಸಂಸದರನ್ನು ಹೊಂದಿರುವ ತೆಲುಗು ದೇಶಂ ಪಕ್ಷವು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿದೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದರೆ, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21 ಮತ್ತು ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಸಿಎಂ ಮಮತಾ ರಾಜೀನಾಮೆಗೆ ನಿರ್ಭಯಾ ತಾಯಿ ಒತ್ತಾಯ

ಕಳೆದ ತಿಂಗಳು ನಾಯ್ಡು ಅವರು ದೆಹಲಿ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಆಗ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು “ಇಂದು, ಆಂಧ್ರಪ್ರದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪರಿಹರಿಸಲು ನಾನು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರೊಂದಿಗೆ ದೆಹಲಿಯಲ್ಲಿ ರಚನಾತ್ಮಕ ಸಭೆ ನಡೆಸಿದ್ದೇನೆ. ಅವರ ನಾಯಕತ್ವದಲ್ಲಿ ನಮ್ಮ ರಾಜ್ಯವು ರಾಜ್ಯಗಳ ನಡುವೆ ಮತ್ತೆ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Sat, 17 August 24