AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಅಯೋಧ್ಯೆಯ ರಾಮ ಮಂದಿರದ ದರ್ಶನಕ್ಕೆ ಚಪ್ಪಲಿ ಧರಿಸದೆ 11 ವರ್ಷ ಕಾದ ಭಕ್ತ

ಅಯೋಧ್ಯೆಯ ಭಗವಾನ್ ಶ್ರೀರಾಮನ ದೇವಾಲಯವನ್ನು ನಿರ್ಮಿಸಿದಾಗ ಮಧ್ಯಪ್ರದೇಶದ ಭಕ್ತ ಸೈಕಲ್​ನಲ್ಲಿ ರಾಮನ ದರ್ಶನಕ್ಕೆ ತೆರಳಿದರು. ರಾಮನನ್ನು ಕಣ್ತುಂಬಿಕೊಂಡ ನಂತರ ಇದೀಗ 11 ವರ್ಷಗಳ ಬಳಿಕ ಅವರು ಚಪ್ಪಲಿ ಧರಿಸಲಿದ್ದಾರೆ.

Viral News: ಅಯೋಧ್ಯೆಯ ರಾಮ ಮಂದಿರದ ದರ್ಶನಕ್ಕೆ ಚಪ್ಪಲಿ ಧರಿಸದೆ 11 ವರ್ಷ ಕಾದ ಭಕ್ತ
ಶ್ರೀರಾಮ ಲಲ್ಲಾ
ಸುಷ್ಮಾ ಚಕ್ರೆ
|

Updated on: Aug 17, 2024 | 7:48 PM

Share

ಲಾಹೋರ್: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಭಕ್ತರೊಬ್ಬರು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸುವವರೆಗೆ 11 ವರ್ಷಗಳ ಕಾಲ ಚಪ್ಪಲಿಯನ್ನು ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಅವರು ಶ್ರೀರಾಮನ ಭಕ್ತರಾಗಿದ್ದಾರೆ. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇವಾಲಯವನ್ನು ನಿರ್ಮಿಸಿದಾಗ ಅವರು ರಾಮನ ದರ್ಶನಕ್ಕೆ ಸೈಕಲ್​ನಲ್ಲಿ ತೆರಳಿದರು. ಇದೀಗ ರಾಮನ ದರ್ಶನದ ಬಳಿಕ 11 ವರ್ಷಗಳ ನಂತರ ಚಪ್ಪಲಿ ಧರಿಸಲಿದ್ದಾರೆ.

ರಾಮನ ಭಕ್ತ ಗಜಾನನ ಮಧ್ಯಪ್ರದೇಶದ ಲೋಣಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. 11 ವರ್ಷಗಳ ಹಿಂದೆ ನಾನು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ದೊಡ್ಡ ಮಂದಿರವನ್ನು ನಿರ್ಮಿಸಿದ ನಂತರ ಮತ್ತೆ ಬರುವುದಾಗಿ ಪ್ರತಿಜ್ಞೆ ಮಾಡಿದ್ದೆ. ಮಂದಿರ ನಿರ್ಮಾಣ ಆಗುವವರೆಗೂ ನಾನು ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದೆ. ಈಗ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸಲಾಗಿದೆ. ನಾನು ಸೈಕಲ್​ನಲ್ಲಿ ಭಗವಾನ್ ಶ್ರೀರಾಮನ ಪಟ್ಟಣವಾದ ಅಯೋಧ್ಯೆಗೆ ತಲುಪಿ ರಾಮಲಲ್ಲಾನ ದರ್ಶನ ಪಡೆದೆ. ಈಗ 11 ವರ್ಷಗಳ ನಂತರ ಮತ್ತೆ ಚಪ್ಪಲಿ ಹಾಕಲು ಆರಂಭಿಸುತ್ತೇನೆ. ನಾನು 11 ವರ್ಷಗಳ ಕಾಲ ಚಪ್ಪಲಿ ಇಲ್ಲದೆ ಬದುಕಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Ayodhya: ಅಯೋಧ್ಯೆ ಪ್ರವಾಸದ ವೇಳೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ಸಿಎಂ ಯೋಗಿ ಆದಿತ್ಯನಾಥ್

ಸದ್ಯಕ್ಕೆ ಗಜಾನನ ನೀರಿನ ವ್ಯಾಪಾರ ನಡೆಸುತ್ತಿದ್ದಾರೆ. ದೇವರು ತನ್ನ ಭಕ್ತರಿಗೆ ತುಂಬಾ ಸಹಾಯ ಮಾಡುತ್ತಾನೆ. ನನ್ನ ಶ್ರೀರಾಮ ಲಲ್ಲಾ ದೊಡ್ಡ ದೇವಸ್ಥಾನದಲ್ಲಿ ಕುಳಿತಾಗ ಮಾತ್ರ ನಾನು ಚಪ್ಪಲಿಯನ್ನು ಧರಿಸುತ್ತೇನೆ ಎಂದು ಹರಕೆ ಹೊತ್ತು ನಾನು ಚಪ್ಪಲಿಯನ್ನು ಧರಿಸುವುದನ್ನು ನಿಲ್ಲಿಸಿದೆ ಎಂದು ಅವರು ಹೇಳುತ್ತಾರೆ. ನಾನು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ನಾನು ನನ್ನ ಪ್ರತಿಜ್ಞೆಯನ್ನು ಮುರಿಯಲು ಬಿಡಲಿಲ್ಲ ಎಂದು 40 ವರ್ಷದ ಗಜಾನನ ಹೇಳಿದ್ದಾರೆ.

ನಾನು ಭಗವಾನ್ ಶ್ರೀರಾಮನನ್ನು ಭೇಟಿ ಮಾಡಿದ್ದೇನೆ. ಆದರೆ ತಿಂಗಳ ಕೊನೆಯ ಸೋಮವಾರದಂದು ನನ್ನ ಮನೆಯಲ್ಲಿ ಶ್ರಾವಣ ಪೂಜೆಯನ್ನು ಮಾಡಬೇಕು. ಅದರ ನಂತರ, ನಾನು ಚಪ್ಪಲಿ ಧರಿಸಲು ಪ್ರಾರಂಭಿಸುತ್ತೇನೆ. ಅದಕ್ಕೇ ಈಗಲೂ ಚಪ್ಪಲಿ ಇಲ್ಲದೇ ಓಡಾಡುತ್ತಿದ್ದೇನೆ. ನನ್ನ ಸಂಕಲ್ಪ ನೆರವೇರಲಿದೆ. ಇನ್ನು ನಾನು ಶ್ರೀರಾಮನನ್ನು ಭೇಟಿ ಮಾಡಲು ಪ್ರತಿ ವರ್ಷ ಅಯೋಧ್ಯೆಗೆ ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್​ಗೆ ವೀಸಾ ನಿರಾಕರಿಸಿದ ಅಮೆರಿಕ

ರಾಮಮಂದಿರ ಟ್ರಸ್ಟ್ ಸ್ಥಳೀಯ ಜನರಿಗೆ ಮತ್ತು ಸಂತರಿಗೆ ದೊಡ್ಡ ಉಡುಗೊರೆಯನ್ನು ನೀಡುತ್ತದೆ. ರಾಮ್ ನಗರಿಯಲ್ಲಿ ವಾಸಿಸುವ ಸಂತರು, ಮಹಂತರು ಮತ್ತು ಸ್ಥಳೀಯ ಜನರು ಯಾವುದೇ ಜನಸಂದಣಿಯನ್ನು ಎದುರಿಸದೆ ರಾಮ್ ಲಲ್ಲಾನ ದರ್ಶನವನ್ನು ಪಡೆಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?