ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ತಳ್ಳಿಹಾಕಿದ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್

ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸುವ ಮುನ್ನ ಜನವರಿ 31 ರಂದು ಹೇಮಂತ್ ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರ ಅನುಪಸ್ಥಿತಿಯಲ್ಲಿ, ಚಂಪೈ ಸೊರೆನ್ ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.ಚಂಪೈ ಸೊರೇನ್ ಅವರನ್ನು ಸಿಎಂ ಸ್ಥಾನದಿಂದ ತೆಗೆದಿರುವುದರ ಕುರಿತು ವಿರೋಧ ಪಕ್ಷ ಬಿಜೆಪಿ ಜೆಎಂಎಂ ನಾಯಕತ್ವವನ್ನು ಟೀಕಿಸಿದೆ.

ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ತಳ್ಳಿಹಾಕಿದ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್
ಚಂಪೈ ಸೊರೇನ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 17, 2024 | 6:45 PM

ದೆಹಲಿ ಆಗಸ್ಟ್ 17: ಜಾರ್ಖಂಡ್‌ನ (Jharkhand) ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಜಲಸಂಪನ್ಮೂಲ ಸಚಿವ ಚಂಪೈ ಸೊರೇನ್ (Champai Soren ) ಅವರು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ (BJP) ಸೇರುತ್ತಾರೆ ಎಂಬ ವದಂತಿಗಳನ್ನು ಶನಿವಾರ ತಿರಸ್ಕರಿಸಿದ್ದಾರೆ. ಯಾರು ವದಂತಿ ಹರಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ಯಾವ ಸುದ್ದಿಯನ್ನು ಯಾರ ಹರಿಬಿಡುತ್ತಾರೆ ಎಂದು ನನಗೆ ತಿಳಿದಿಲ್ಲ. ಹಾಗಾಗಿ ಅದು ನಿಜವೋ ಸುಳ್ಳೋ ಎಂದು ನಾನು ಹೇಳಲಾರೆ, ಅದರ ಬಗ್ಗೆ ನನಗೆ ಏನೂ ತಿಳಿದಿಲ್ಲ…ಹಮ್ ಜಹಾನ್ ಪರ್ ಹೇ ವಹಿ ಪರ್ ಹೈ (ನಾನು ಎಲ್ಲಿದ್ದೇನೋ ಅಲ್ಲೇ ಇದ್ದೀನಿ) ಎಂದು ಚಂಪೈ ಸೊರೇನ್ ಹೇಳಿದ್ದಾರೆ.

ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸುವ ಮುನ್ನ ಜನವರಿ 31 ರಂದು ಹೇಮಂತ್ ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರ ಅನುಪಸ್ಥಿತಿಯಲ್ಲಿ, ಚಂಪೈ ಸೊರೆನ್ ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಜೂನ್ 28 ರಂದು ಹೇಮಂತ್ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು. ಜುಲೈ 4 ರಂದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಸಚಿವ ಸಂಪುಟ 49 ವರ್ಷ ವಯಸ್ಸಿನ ನಾಯಕ ಚಂಪೈ ಸೊರೆನ್ ಅವರನ್ನು ಒಳಗೊಂಡಿತ್ತು, ಅವರು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಖಾತೆಗಳ ಜೊತೆಗೆ ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದಾರೆ.

ಚಂಪೈ ಸೊರೇನ್ ತಪ್ಪೇನು?’: ಬಿಜೆಪಿ

ಚಂಪೈ ಸೊರೇನ್ ಅವರನ್ನು ಸಿಎಂ ಸ್ಥಾನದಿಂದ ತೆಗೆದಿರುವುದರ ಕುರಿತು ವಿರೋಧ ಪಕ್ಷ ಬಿಜೆಪಿ ಜೆಎಂಎಂ ನಾಯಕತ್ವವನ್ನು ಟೀಕಿಸಿದೆ. “ಅವರೊಬ್ಬ ದೊಡ್ಡ ವ್ಯಕ್ತಿತ್ವ… ಜಾರ್ಖಂಡ್‌ನ 3.5 ಕೋಟಿ ಜನರು ಅವರ ಕೆಲಸದಿಂದ ಸಂತಸಗೊಂಡಿದ್ದರು. ಆದರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ರೀತಿ ದುರದೃಷ್ಟಕರ. ಒಳ್ಳೆಯ ವ್ಯಕ್ತಿಯನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿರುವುದು ಸರಿಯಲ್ಲ. ಅವರ ತಪ್ಪೇನು ಎಂದು ಬಿಜೆಪಿ ಸಂಸದ ದೀಪಕ್ ಪ್ರಕಾಶ್ ಪ್ರಶ್ನಿಸಿದ್ದಾರೆ.

ಇದಕ್ಕಿಂತ ಮುಂಚೆ ರಾಜ್ಯದ ಚುನಾವಣಾ ಸಹ-ಪ್ರಭಾರಿಯಾಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಊಹಾಪೋಹಗಳ ಬಗ್ಗೆ ದೃಢವಾದ ಸೂಚನೆಯನ್ನು ನೀಡಲು ನಿರಾಕರಿಸಿದ್ದರು.

“ನಮ್ಮೊಂದಿಗೆ ಇನ್ನೂ ಯಾರೂ ಸಂಪರ್ಕದಲ್ಲಿಲ್ಲ. ಚಾನೆಲ್‌ಗಳಿಂದ ಈ ವರದಿಗಳನ್ನು ನಾನು ಸಹ ಕೇಳುತ್ತಿದ್ದೇನೆ. ಚಂಪೈ ಸೊರೆನ್ ಅವರು ಅತ್ಯಂತ ಹಿರಿಯ ನಾಯಕ, ಅವರ ಬಗ್ಗೆ ಯಾವುದೇ ಅನೌಪಚಾರಿಕ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ” ಎಂದು ಅವರು ಎಎನ್‌ಐ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Bihar Bridge Collapse: ಮೂರನೇ ಬಾರಿ ಕುಸಿದು ಬಿತ್ತು ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ

ನಂತರ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಶರ್ಮಾ, ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್‌ನ 5 ವರ್ಷಗಳಲ್ಲಿ ಯಾವುದೇ ಕೆಲಸ ಮಾಡಿದ್ದರೆ, ಅದು ಚಂಪೈ ಸೊರೆನ್ ಅವರ ಅಧಿಕಾರದ 6 ತಿಂಗಳ ಅವಧಿಯಲ್ಲಿ ಮಾತ್ರ ಮಾಡಲ್ಪಟ್ಟಿದೆ. ಈಗ ಚಂಪೈ ಜಿ ಅವರ ಫೋಟೋ ಪ್ರತಿ ಜಾಹೀರಾತಿನಿಂದಲೂ ಕಣ್ಮರೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ