ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಮುಂದೂಡಿಕೆ

ಪ್ರಧಾನಿ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್​ ಚಂದ್ರಬಾಬು ನಾಯ್ಡು ಅವರ ಪ್ರಮಾಣವಚನ ದಿನಾಂಕವನ್ನು ಮುಂದೂಡಲಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಮುಂದೂಡಿಕೆ
ಚಂದ್ರಬಾಬು ನಾಯ್ಡು
Follow us
|

Updated on:Jun 06, 2024 | 10:30 AM

ಆಂಧ್ರಪ್ರದೇಶ ಮುಖ್ಯಮಂತ್ರಿ(Andhra Pradesh Chief Minister)ಯಾಗಿ ಟಿಡಿಪಿ ಮುಖ್ಯಸ್ಥ ಎನ್​ ಚಂದ್ರಬಾಬು ನಾಯ್ಡು(N Chandrababu Naidu) ಸ್ವೀಕರಿಸಬೇಕಿದ್ದ ಪ್ರಮಾಣ ವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಚಂದ್ರಬಾಬು ಅವರು ಜೂನ್ 9 ರಂದು ಅಮರಾವತಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕಿತ್ತು, ಆದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವುದರಿಂದ ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಕೊಂಚ ತಡವಾಗಿದೆ.

ಜೂನ್ 12 ರಂದು ಅಮರಾವತಿಯಲ್ಲಿ ಆಂಧ್ರದ ನೂತನ ಸಿಎಂ ಆಗಿ ಚಂದ್ರಬಾಬು ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ. ಚಂದ್ರಬಾಬು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರಮಾಣವಚನ ಸಮಾರಂಭ ಅಮರಾವತಿಯಲ್ಲಿ ನಡೆಯಲಿದೆ. ಕೇಂದ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗದ ಕಾರಣ ನರೇಂದ್ರ ಮೋದಿ ಅವರು ಎನ್ ಡಿಎ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿದರು. ಧವಾರ ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಚಂದ್ರಬಾಬು, ಪವನ್ ಕಲ್ಯಾಣ್, ನಿತೀಶ್ ಕುಮಾರ್ ಸೇರಿದಂತೆ ಎಲ್ಲಾ ಎನ್ ಡಿಎ ನಾಯಕರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಮೋದಿ ಎನ್‌ಡಿಎ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಚಂದ್ರಬಾಬು ಮತ್ತು ನಿತೀಶ್ ಕುಮಾರ್ ಎನ್ ಡಿಎ ಬೆಂಬಲಿಸಿ ಪತ್ರ ನೀಡಿದ್ದಾರೆ. ಚಂದ್ರಬಾಬು ಮತ್ತು ನಿತೀಶ್ ಕುಮಾರ್ ಅವರನ್ನು ತಮ್ಮ ಕಡೆಗೆ ಸೆಳೆದು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಇಂಡಿ ಮೈತ್ರಿಕೂಟ ಯೋಚಿಸಿತ್ತು ಎನ್ನಲಾಗಿದೆ.

ಆದರೆ, ಬುಧವಾರ ಎನ್ ಡಿಎ ಸಭೆಗೆ ತೆರಳಿದ್ದ ಈ ಇಬ್ಬರು ನಾಯಕರು ಎನ್​ಡಿಎ ಮೈತ್ರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಬುಧವಾರ ಎನ್‌ಡಿಎ ನಾಯಕರು ಸಭೆ ನಡೆಸಿದ್ದು, ಇಂದು ಮತ್ತೆ ಜೂನ್ 7 ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಎಲ್ಲ ಸಂಸದರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಆಂಧ್ರಪ್ರದೇಶ ವಿಧಾನಸಭಾ ಕ್ಷೇತ್ರದಲ್ಲಿ 175 ಸ್ಥಾನಗಳಿವೆ, ಅತಿದೊಡ್ಡ ಪಕ್ಷವಾದ ಟಿಡಿಪಿ 135 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು 21 ಸ್ಥಾನಗಳನ್ನು ಗೆದ್ದ ಜನಸೇನೆ ಎರಡನೇ ದೊಡ್ಡ ಪಕ್ಷವಾಯಿತು. ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ವೈಎಸ್‌ಆರ್‌ಸಿಪಿ ಕೇವಲ 8 ಸ್ಥಾನಗಳಿಗೆ ಸೀಮಿತವಾಗಿದ್ದರೆ, ಬಿಜೆಪಿಯಿಂದ 8 ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಒಟ್ಟಿನಲ್ಲಿ 164 ಸ್ಥಾನಗಳಲ್ಲಿ ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಜನ ಅಧಿಕಾರ ಹಸ್ತಾಂತರಿಸಿದ್ದಾರೆ .

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:50 am, Thu, 6 June 24

ತಾಜಾ ಸುದ್ದಿ
ಘಟಪ್ರಭಾ ‌ನದಿಗೆ ನೀರು ಬಿಡುಗಡೆ; ಸುರಕ್ಷಿತ ಸ್ಥಳಕ್ಕೆ ತೆರಳಲು ಡಂಗುರ
ಘಟಪ್ರಭಾ ‌ನದಿಗೆ ನೀರು ಬಿಡುಗಡೆ; ಸುರಕ್ಷಿತ ಸ್ಥಳಕ್ಕೆ ತೆರಳಲು ಡಂಗುರ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ