Chandrayaan-3: ಚಂದ್ರಯಾನ-3 ಕಾರ್ಯಾಚರಣೆಗೆ ಕೌಂಟ್‌ಡೌನ್ ಶುರು, ಜುಲೈ 14ಕ್ಕೆ ಉಡಾವಣೆ

|

Updated on: Jul 13, 2023 | 11:36 AM

ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಪರಿಶೋಧನಾ ಮಿಷನ್ ಚಂದ್ರಯಾನ-3ಗೆ ಇಂದಿನಿಂದ ಕೌಂಟ್‌ಡೌನ್ ಶುರುವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಜುಲೈ 13 ರಂದು) ಮಧ್ಯಾಹ್ನ 1.05 ಕ್ಕೆ 26 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಲಿದೆ ಎಂದು ಹೇಳಿದೆ.

Chandrayaan-3: ಚಂದ್ರಯಾನ-3 ಕಾರ್ಯಾಚರಣೆಗೆ ಕೌಂಟ್‌ಡೌನ್ ಶುರು, ಜುಲೈ 14ಕ್ಕೆ ಉಡಾವಣೆ
Chandrayaan-3
Follow us on

ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಪರಿಶೋಧನಾ ಮಿಷನ್ ಚಂದ್ರಯಾನ-3 ಗೆ (Chandrayaan-3) ಇಂದಿನಿಂದ ಕೌಂಟ್‌ಡೌನ್ ಶುರುವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಜುಲೈ 13 ರಂದು) ಮಧ್ಯಾಹ್ನ 1.05 ಕ್ಕೆ 26 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಲಿದೆ ಎಂದು ಹೇಳಿದೆ. ನಾಳೆ (ಜುಲೈ 14 ರಂದು) ಮಧ್ಯಾಹ್ನ 2.35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಡಾವಣೆವಾಗಲಿದೆ ಎಂದು ಹೇಳಲಾಗಿದೆ. ಚಂದ್ರಯಾನ-3 ಕಾರ್ಯಾಚರಣೆ ಚಂದ್ರನ ಕಡೆ ಸಾಗುತ್ತಿರುವ ಭಾರತದ ಮೂರನೇ ಪ್ರಯತ್ನವಾಗಿದೆ. ಜತೆಗೆ ಇದು ರಾಷ್ಟ್ರದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹತ್ವಾಕಾಂಕ್ಷೆಯ ಸಾಧನೆಯಾಗಿದೆ. ಈಗಾಗಲೇ ಚಂದ್ರಯಾನ-3ಯ ಎಲ್ಲ ಕಾರ್ಯತಂತ್ರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾರತವು ಚಂದ್ರನಲ್ಲಿ ತನ್ನ ಮಿಷನ್​ನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ನಾಲ್ಕನೇ ರಾಷ್ಟ್ರವಾಗಲಿದೆ, ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸುತ್ತಿದೆ.

LVM3 ರಾಕೆಟ್ ಉಡಾವಣೆಯಾದ ಸರಿಸುಮಾರು 16 ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ಮುಖ್ಯ ರಾಕೆಟ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ನಂತರ ಅದರಿಂದ ಅಂಡಾಕಾರದ ಚಕ್ರ ಹೊರಗೆ ಬಂದು, ಭೂಮಿಯ ಸುತ್ತ 5 ರಿಂದ 6 ಬಾರಿ ಸುತ್ತುತ್ತದೆ. ಭೂಮಿಯಿಂದ 36,500 ಕಿಮೀ ದೂರದಿಂದ ಸಾಗಿ, ಕ್ರಮೇಣ ಚಂದ್ರನ ಕಕ್ಷೆಯತ್ತ ಬರುತ್ತದೆ. ಇದು ಹೀಗೆ ಪ್ರಯಾಣ ನಡೆಸುತ್ತ ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರವನ್ನು ತಲುಪುವವರೆಗೆ ಅದೇ ಸ್ಥಿರವಾದ ವೇಗವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಚಂದ್ರಯಾನ ಯೋಜನೆಗಳು: ಭಾರತದ ಚಂದ್ರ ಅನ್ವೇಷಣೆ ಮತ್ತು ಸಾಧನೆಗಳು

ತನ್ನ ಸ್ಥಾನವನ್ನು ತಲುಪಿದ ನಂತರ, ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಲ್ಯಾಂಡಿಂಗ್​​ ಆಗಲು ಶುರು ಮಾಡುತ್ತದೆ. ಈ ಪ್ರಕ್ರಿಯೆ ಈ ತಿಂಗಳ 23 ಅಥವಾ 24ರ ತನಕ ನಡೆಯಲಿದೆ ಎಂದು ಹೇಳಲಾಗಿದೆ. ಈ ಚಂದ್ರಯಾನ-3 ಮಿಷನ್‌ನ ಪ್ರಾಥಮಿಕ ಉದ್ದೇಶವೇನೆಂದರೆ, ಚಂದ್ರನ ಕಕ್ಷೆಯಿಂದ ಭೂಮಿಯನ್ನು ಅಧ್ಯಯನ ಮಾಡುವುದು ಮತ್ತು ಅದರ ಸಾಂದ್ರತೆಯ ಬದಲಾವಣೆಗಳನ್ನು ಅಳೆಯುವುದು, ಜತೆಗೆ ಧ್ರುವ ಪ್ರದೇಶದಲ್ಲಿನ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳನ್ನು ವಿಶ್ಲೇಷಿಸುವುದು. ಇದು ಲ್ಯಾಂಡಿಂಗ್ ಆದ್ಮೇಲೆ ಚಂದ್ರನ ಸುತ್ತಲೂ ಭೂಕಂಪನ ಚಟುವಟಿಕೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ, ಇದರ ಜತೆಗೆ ಇದು ಚಂದ್ರನ ಹೊರಪದರ ಮತ್ತು ನಿಲುವಂಗಿಯ ರಚನೆಯ ಒಳನೋಟಗಳನ್ನು ನೀಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Thu, 13 July 23