ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್​​ ನಿರ್ಮಾಣ

ಜಮ್ಮು-ಕಾಶ್ಮೀರ ಅನೇಕ ವಿಚಾರಗಳಲ್ಲಿ ಬದಲಾಗುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲೂ ಕೂಡ ದೊಡ್ಡ ಮಟ್ಟದ ಬದಲಾವಣೆಯನ್ನು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಅನಂತನಾಗ್‌ನಲ್ಲಿ ಕ್ರಿ.ಶ.750 ರಲ್ಲಿ ರಾಜ ಲಾಲಿದಾದಿತ್ಯ ನಿರ್ಮಿಸಿದ್ದ ಸೂರ್ಯ ದೇವಾಲಯವನ್ನು ಅಲೆಕ್ಸಾಂಡರ್ ಕೆಡವಿದ, ಇದೀಗ ಈ ದೇವಾಲಯವನ್ನು ಅಲ್ಲಿನ ಜನರು ಪುನರ್​​ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್​​ ನಿರ್ಮಾಣ
ಸೂರ್ಯ ದೇವಾಲಯImage Credit source: Google
Follow us
|

Updated on: Apr 27, 2024 | 10:20 AM

ಜಮ್ಮು-ಕಾಶ್ಮೀರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದೆ. ಹಿಂಸೆಗಳನ್ನು ಕಾಣುತ್ತಿದ್ದ ಈ ರಾಜ್ಯದಲ್ಲಿ ಶಾಂತಿ, ಧಾರ್ಮಿಕ ಬದಲಾವಣೆಗಳು ಆಗುತ್ತಿದೆ. ಇದೀಗ ಇಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮಾಡಲು ಇಲ್ಲಿನ ಜನ ಮುಂದಾಗಿದ್ದಾರೆ. ಹೌದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ದೇಶದ ಅತ್ಯಂತ ಪುರಾತನ ಸೂರ್ಯ ದೇವಾಲಯವನ್ನು ಪುನರ್​​​ನಿರ್ಮಾಣ ಮಾಡಲಾಗುತ್ತಿದೆ. ಅನಂತನಾಗ್‌ನಲ್ಲಿ ನಿರ್ಮಿಸಲಾದ ಈ ಸೂರ್ಯ ದೇವಾಲಯವನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ದೇವಾಲಯಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಇದರ ಮೊದಲ ಸಭೆಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವ ತಿರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಮಾರ್ತಾಂಡ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹುದಿನಗಳಿಂದ ಬೇಡಿಕೆ ಇತ್ತು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನರು ದೇವಾಲಯದ ಪುನರ್​​​ ನಿರ್ಮಾಣಕ್ಕೆ ಅಭಿಯಾನ ಕೂಡ ನಡೆಸಿದರು ಎಂದು ಹೇಳಲಾಗಿದೆ. ಈ ದೇವಾಲಯವು ಶ್ರೀನಗರದಿಂದ ಸುಮಾರು 63 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ.750 ರಲ್ಲಿ ರಾಜ ಲಾಲಿದಾದಿತ್ಯ ನಿರ್ಮಿಸಿದ್ದ, ಇದು ದೇಶದ ಹಳೆಯ ಪರಂಪರೆಗಳಲ್ಲಿ ಇದೂ ಒಂದಾಗಿದ್ದು, ಇದೀಗ ಇದನ್ನು ಪುನರ್​​​ ನಿರ್ಮಾಣ ಮಾಡಲಾಗುತ್ತಿದೆ.

ದೇವಾಲಯವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ?

ಈ ಸೂರ್ಯ ದೇವಾಲಯವು ಕಾಶ್ಮೀರಿ ವಾಸ್ತುಶಿಲ್ಪದ ಸೌಂದರ್ಯವನ್ನು ಒಳಗೊಂಡಿದೆ. ಈ ದೇವಾಲಯದ ನಿರ್ಮಾಣದಲ್ಲಿ ಕಂಧಾರ, ಚೈನೀಸ್ ಮತ್ತು ಗುಪ್ತ ರೋಮನ್ ಶೈಲಿಗಳನ್ನು ಬಳಸಲಾಗಿದೆ. ದೇವಾಲಯವು 270 ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಅಗಲ 180 ಅಡಿ ಇದೆ. ಇದರ ಜತೆಗೆ ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಮಾರ್ತಾಂಡ ದೇವಾಲಯವು ಎಎಸ್‌ಐ (Archaeological Survey of India) ಸಂರಕ್ಷಿತ ತಾಣಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಸೂರ್ಯನಿಗೆ ಇಂದು ಪೂಜೆ ನಡೆಯುತ್ತಿಲ್ಲ ಎಂದು ಸಮಿತಿ ಹೇಳಿದೆ. ಗುಜರಾತ್ ಮತ್ತು ಒಡಿಶಾದಲ್ಲೂ ಸೂರ್ಯ ದೇವಾಲಯಗಳು ಸಹ ಎಎಸ್‌ಐ ಸಂರಕ್ಷಿತ ದೇವಾಲಯಗಳಾಗಿವೆ ಹಾಗೂ ಇಲ್ಲಿನ ಸೂರ್ಯ ದೇವಾಲಯಗಳಲ್ಲಿ ಪೂಜೆ ಮಾಡಲಾಗುತ್ತದೆ.

ಇದನ್ನೂ ಓದಿ:  ಉತ್ತರ ಪ್ರತಿಕೆಯಲ್ಲಿ ಜೈಶ್ರೀರಾಮ ಘೋಷಣೆ, ಅಂಕ ನೀಡಿದ ಪ್ರಾಧ್ಯಾಪಕರು ಅಮಾನತು

ಅಲೆಕ್ಸಾಂಡರ್ ಮಾರ್ತಾಂಡ ದೇವಾಲಯವನ್ನು ಕೆಡವಿದ್ದ

ಅಲೆಕ್ಸಾಂಡರ್ 15ನೇ ಶತಮಾನದಲ್ಲಿ ಭಾರತದ 1600 ವರ್ಷಗಳಷ್ಟು ಹಳೆಯ ಸಂಪತ್ತನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದ್ದ, ಇದರಲ್ಲಿ ಜಮ್ಮು – ಕಾಶ್ಮೀರದಲ್ಲಿರು ಈ ಸೂರ್ಯದೇವಾಲವು ಒಂದಾಗಿತ್ತು. ಆದರೆ ಇದನ್ನು ನಾಶಮಾಡಲು ಬಹಳ ಕಷ್ಟಪಟ್ಟಿದ್ದ, ಇದನ್ನು ಕೆಡವಲು ಸುಮಾರು ಎರಡು ವರ್ಷಗಳ ಕಾಲ ಪ್ರಯತ್ನ ಪಟ್ಟಿದ್ದ, ಕೊನೆಗೂ ಇದನ್ನು ಕೆಡವಿದ್ದಾನೆ. ಆದರೆ 500 ವರ್ಷಗಳ ನಂತರವೂ ಈ ದೇವಾಲಯದ ಕೆತ್ತನೆಗಳು ಮತ್ತು ವಿಭಿನ್ನ ಶೈಲಿಗಳ ಸೌಂದರ್ಯವು ಗೋಚರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ