ನೈನಿತಾಲ್: ಕೊರೋನಾದಿಂದ ಭಾರತ ಸಂಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯಕ್ಕೆ ಲಾಕ್ಡೌನ್ ತೆರವುಗೊಳಿಸಲಾಗಿದ್ದರೂ ಕೆಲವು ಧಾರ್ಮಿಕ ಕೇಂದ್ರಗಳಿಗೆ, ಸಮಾರಂಭಗಳಿಗೆ, ಉತ್ಸವಗಳಿಗೆ ಇನ್ನೂ ನಿಷೇಧ ಮುಂದುವರೆದಿದೆ. ಭಾರತದ ಹಿಂದೂಗಳ ಪವಿತ್ರವಾದ ಚಾರ್ ಧಾಮ್ ಯಾತ್ರೆಗೆ ಆಗಸ್ಟ್ 18ರವರೆಗೆ ನಿಷೇಧ ಹೇರಲಾಗಿದೆ. ಕೋವಿಡ್ ಸೋಂಕು ಹರಡುವಿಕೆ ಕಡಿಮೆಯಾಗದ ಕಾರಣದಿಂದ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು (Char Dham Yatra) ನಿರ್ಬಂಧಿಸುವುದಾಗಿ ನೈನಿತಾಲ್ ಹೈಕೋರ್ಟ್ ಆದೇಶಿಸಿದೆ.
ದೇಶದಲ್ಲಿ ಇನ್ನೂ ಕೊರೋನಾ ಹಾವಳಿ ಕಡಿಮೆಯಾಗದ ಕಾರಣದಿಂದ ಚಾರ್ ಧಾಮ್ ಯಾತ್ರೆಯಿಂದ ಮತ್ತೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆಗಸ್ಟ್ 18ವರೆಗೆ ಚಾರ್ ಧಾಮ್ ಯಾತ್ರೆಗೆ ನಿಷೇಧ ಹೇರಿರುವುದಾಗಿ ನೈನಿತಾಲ್ ಹೈಕೋರ್ಟ್ ತಿಳಿಸಿದೆ. ಹಾಗೇ, ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಸಂಬಂಧಿತ ನಿಯಮಾವಳಿಗಳನ್ನು ಅನುಸರಿಸದಿರುವುದಕ್ಕೆ ಉತ್ತರಾಖಂಡ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
Nainital High Court strongly reprimands the Uttarakhand government for not following COVID19 SOPs at the tourist places in the state. Court also bans the Chardham Yatra till August 18, in view of the pandemic pic.twitter.com/pNeMVjNAM3
— ANI (@ANI) July 28, 2021
ಕಳೆದ ಮೇ 14ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ಯಾತ್ರೆಯನ್ನು ಮುಂದೂಡಲಾಗಿತ್ತು. ಕೇದಾರನಾಥ ದೇವಾಲಯವನ್ನೂ ಒಳಗೊಂಡಿರುವ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಿದರೆ ಲಕ್ಷಾಂತರ ಪ್ರವಾಸಿಗರು ದಂಡಾಗಿ ಆಗಮಿಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕೇದಾರನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿ ಯಾತ್ರೆಗೆ ಪ್ರತಿವರ್ಷ ಲಕ್ಷಾಂತರ ಭಕ್ತರು, ಪ್ರವಾಸಿಗರು, ವಿದೇಶಿಗರು ಆಗಮಿಸುತ್ತಾರೆ.
ಕೊರೋನಾದಿಂದಾಗಿ ಉತ್ತರಾಖಂಡ ಸರ್ಕಾರ ಮೂರು ಜಿಲ್ಲೆಗಳಾದ ಚಮೋಲಿ, ರುದ್ರಪ್ರಯಾಗ, ಉತ್ತರಕಾಶಿಯ ಜನರಿಗೆ ಚಾರ್ ಧಾಮ ಯಾತ್ರೆಗೆ ಅವಕಾಶ ನೀಡುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ
(Char Dham Yatra: Nainital High Court bans Char Dham Yatra till August 18 amid of Covid Pandemic)