ಐಎಫ್‌ಸಿಐ ಲಿಮಿಟೆಡ್‌ಗೆ ₹22.6 ಕೋಟಿ ವಂಚನೆ: ಮೆಹುಲ್ ಚೋಕ್ಸಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

| Updated By: ರಶ್ಮಿ ಕಲ್ಲಕಟ್ಟ

Updated on: May 02, 2022 | 7:12 PM

Mehul Choksi ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಸಂಸ್ಥೆ ಗೀತಾಂಜಲಿ ಜೆಮ್ಸ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ ಹೊಸ ಪ್ರಕರಣ ದಾಖಲಿಸಿದೆ

ಐಎಫ್‌ಸಿಐ ಲಿಮಿಟೆಡ್‌ಗೆ ₹22.6 ಕೋಟಿ ವಂಚನೆ: ಮೆಹುಲ್ ಚೋಕ್ಸಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ
ಮೆಹುಲ್ ಚೋಕ್ಸಿ
Follow us on

ದೆಹಲಿ: 2014 ಮತ್ತು 2018 ರ ನಡುವೆ ಭಾರತ ಸರ್ಕಾರದ ಘಟಕವಾದ ಐಎಫ್‌ಸಿಐ ಲಿಮಿಟೆಡ್‌ಗೆ ₹22.6 ಕೋಟಿ ವಂಚಿಸಿದ ಆರೋಪದ ಮೇಲೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi), ಅವರ ಸಂಸ್ಥೆ ಗೀತಾಂಜಲಿ ಜೆಮ್ಸ್ ಲಿಮಿಟೆಡ್ (GGL) ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಹೊಸ ಪ್ರಕರಣ ದಾಖಲಿಸಿದೆ. ಶನಿವಾರ ಸಲ್ಲಿಸಿದ ತನ್ನ ಎಫ್‌ಐಆರ್ ನಲ್ಲಿ ಚೋಕ್ಸಿ ತನ್ನ ದೀರ್ಘಾವಧಿಯ ಕಾರ್ಯನಿರತ ಬಂಡವಾಳದ ಅಗತ್ಯಕ್ಕಾಗಿ ಹಣಕಾಸಿನ ನೆರವು ಕೋರಿ ಐಎಫ್​ಸಿಐ (IFCI) ಲಿಮಿಟೆಡ್ ಅನ್ನು ಸಂಪರ್ಕಿಸಿದ್ದು, 2016 ಮಾರ್ಚ್ ತಿಂಗಳಲ್ಲಿ ₹25 ಕೋಟಿ ಕಾರ್ಪೊರೇಟ್ ಸಾಲವನ್ನು ಹಣಕಾಸು ಸಂಸ್ಥೆ ಮಂಜೂರು ಮಾಡಿತ್ತು. ಎಫ್ಐಆರ್ ಪ್ರಕಾರ ಐಎಫ್​ಸಿಐ ಲಿಮಿಟೆಡ್ ಜಿಜಿಎಲ್ ಹಾಗೂ ಚೋಕ್ಸಿಯ ಪ್ರಾತಿನಿಧ್ಯ, ಭರವಸೆಗಳು ಮತ್ತು ಸುರಾಜ್ ಮಲ್ ಲಲ್ಲೂ ಭಾಯ್ ಆಂಡ್ ಕಂಪನಿ,ನರೇಂದ್ರ ಝಾರವಿ,ಪ್ರದೀಪ್ ಶಾ ಮತ್ತು ಶ್ರೇಣಿಕ್ ಶಾ ಎಂಬ ಮೌಲ್ಯಮಾಪಕರು ನಡೆಸಿದ ಮೌಲ್ಯಮಾಪನದ ಆಧಾರದ ಸಾಲ  ನೀಡಿತ್ತು.  ಷೇರುಗಳ ಗಿರವಿ ಮತ್ತು ಚಿನ್ನ, ವಜ್ರ ಮತ್ತು ಚಿನ್ನಾಭರಣಗಳ ಗಿರವಿ ಆಧಾರದ ಮೇಲೆ ಎರಡು ಬಾರಿ ಭದ್ರತಾ ಕವರ್ ಆಧಾರದ ಮೇಲೆ ಸಾಲವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಹೆಸರಿಸಿದ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದರು. ಅವರೆಲ್ಲರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಎಫ್‌ಐಆರ್​​ನ್ನು ಪರಿಶೀಲಿಸಿದೆ.

ಚೋಕ್ಸಿಯ ಕಂಪನಿಯು ಸಾಲದ ಕಂತುಗಳ ಮರುಪಾವತಿಯಲ್ಲಿ ವಿಫಲವಾಗಿದೆ ಮತ್ತು ಹಣವನ್ನು ವಸೂಲಿ ಮಾಡಲು ಐಎಫ್​ಸಿಐ ಗಿರವಿಯನ್ನು ಆಹ್ವಾನಿಸಿದ್ದು, ಒಟ್ಟು ಗಿರವಿ ಇರಿಸಿದ 20,60,054 ಷೇರುಗಳಲ್ಲಿ ಚೋಕ್ಸಿಯ ಕ್ಲೈಂಟ್ ಐಡಿಯನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಅಮಾನತುಗೊಳಿಸಿದ್ದರಿಂದ ಅದು ₹4.07 ಕೋಟಿ ಮೌಲ್ಯದ 6,48822 ಷೇರುಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು.

ಭದ್ರತೆಯನ್ನು ಅರಿತುಕೊಳ್ಳಲು  ಐಎಫ್‌ಸಿಐ ಇಬ್ಬರು ಮೌಲ್ಯಮಾಪಕರನ್ನು ನೇಮಿಸಿದ್ದು, ಅವರು ಗಿರವಿ ಇಟ್ಟಿರುವ ಆಭರಣಗಳ (ಚಿನ್ನ, ವಜ್ರಗಳು ಮತ್ತು ಚಿನ್ನಾಭರಣಗಳು) ಹೊಸ ಮೌಲ್ಯಮಾಪನವನ್ನು ನಡೆಸಿದರು. ಹೊಸ ಮೌಲ್ಯಮಾಪನವು ಮೂರು ವರ್ಷಗಳಲ್ಲಿ ಶೇ 98 ರಷ್ಟು ಗಿರವಿ ಮಾಡಿದ ಆಭರಣಗಳ ಮೌಲ್ಯಮಾಪನದಲ್ಲಿ ಕುಸಿತವನ್ನು ಕಂಡಿತು. “ವಜ್ರಗಳು ಕಡಿಮೆ ಗುಣಮಟ್ಟದ ಪ್ರಯೋಗಾಲಯದಲ್ಲಿ ತಯಾರಾದ ರಾಸಾಯನಿಕ ಆವಿ ವಜ್ರಗಳಾಗಿದ್ದು,  ಇತರ ಕಳಪೆ ಬಣ್ಣದ ಕಲ್ಲುಗಳು ಮತ್ತು ನಿಜವಾದ ರತ್ನದ ಕಲ್ಲುಗಳಲ್ಲ ಎಂಬುದು ಬೆಳಕಿಗೆ ಬಂದಿದೆ” ಎಂದು ಸಿಬಿಐ ಎಫ್‌ಐಆರ್‌ನಲ್ಲಿ ತಿಳಿಸಿದೆ.

ಚೋಕ್ಸಿ ಮತ್ತು ಕಂಪನಿಯು ಐಎಫ್‌ಸಿಐ ಲಿಮಿಟೆಡ್‌ಗೆ ಒಟ್ಟಾರೆ ₹22.06 ಕೋಟಿ ನಷ್ಟ ಉಂಟು ಮಾಡಿದೆ ಎಂದು ಸಿಬಿಐ ಹೇಳಿದೆ.

ಪರಾರಿಯಾದ ಉದ್ಯಮಿ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ. 2018 ರಲ್ಲಿ ₹13,578 ಕೋಟಿ ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣ ಬೆಳಕಿಗೆ ಬಂದ ತಕ್ಷಣ ಅವರು ಪಲಾಯನ ಮಾಡಿದ್ದರು. ಅವರು ಪಿಎನ್​​ಬಿಗೆ ₹ 6,097 ಕೋಟಿ ವಂಚಿಸಿದ ಆರೋಪ ಹೊತ್ತಿದ್ದಾರೆ. ಅವರ ಸಂಸ್ಥೆ ಅಸ್ಮಿ ಜ್ಯುವೆಲ್ಲರಿಯಿಂದ ₹ 942 ಕೋಟಿ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ತನಿಖೆ ನಡೆಯುತ್ತಿದೆ.

ಮೇ ತಿಂಗಳಲ್ಲಿ ಚೋಕ್ಸಿ ಅವರು ಕೆರಿಬಿಯನ್‌ನ ಸಣ್ಣ ದ್ವೀಪವಾದ ಡೊಮಿನಿಕಾದಲ್ಲಿ ಕಾಣಿಸಿಕೊಂಡಿದ್ದರು, ಅಲ್ಲಿ ಅವರು ನಾಗರಿಕರಾಗಿರುವ ಆಂಟಿಗುವಾದಿಂದ ಹಸ್ತಾಂತರಿಸುವ ಪ್ರಕ್ರಿಯೆಯ ಬದಲು ಅವರನ್ನು ಗಡೀಪಾರು ಮಾಡಲು ಭಾರತ ಸರ್ಕಾರವು ಪ್ರಯತ್ನಿಸಿತ್ತು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:59 pm, Mon, 2 May 22