ಕುನೋ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ತರಲಾಗಿದ್ದ ಎರಡು ಚೀತಾಗಳು 51 ದಿನಗಳ ನಂತರ ಚಿತಾಲ್ ಜಿಂಕೆ ಬೇಟೆಯಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 51 ದಿನಗಳ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ನವೆಂಬರ್ 6ರ ಮಧ್ಯರಾತ್ರಿಯಲ್ಲಿ ಆಫ್ರಿಕಾದ ಎರಡು ಚೀತಾಗಳು ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.
ಎರಡು ಗಂಡು ಚಿರತೆಗಳಾದ ‘ಫ್ರೆಡ್ಡಿ’ ಮತ್ತು ‘ಎಲ್ಟನ್’ ಅನ್ನು ನವೆಂಬರ್ 5 ರ ಸಂಜೆ ಕ್ವಾರಂಟೈನ್‌ನಿಂದ ದೊಡ್ಡ ಆವರಣಕ್ಕೆ ಈ ಚೀತಾಗಳನ್ನು ಬಿಡಲಾಗಿದೆ. ಇದರ ಬೇಟೆಗಾಗಿ ಮಚ್ಚೆಯುಳ್ಳ ಜಿಂಕೆ ತರಲಾಗಿದೆ. ಕುನೋದಲ್ಲಿ ಚೀತಾಗಳನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿ ಮೈಲಿಗಲ್ಲು ಮಹತ್ವದ್ದಾಗಿದೆ. ಚೀತಾಗಳು ಈ ಮೊದಲು ಮಚ್ಚೆಯುಳ್ಳ ಜಿಂಕೆಯನ್ನು ಕಂಡಿಲ್ಲ, ಇದು ಈ ಜಿಂಕೆಗಳಿಗೆ ಮೊದಲ ಅನುಭವ ಮತ್ತು ಹೊಸ ಆಹಾರವಾಗಿದೆ.
ಚೀತಾಗಳನ್ನು ಬಿಡಲಾದ ಆವರಣವು ಚೀಟಲ್, ನೀಲಿ ಬುಲ್, ನಾಲ್ಕು ಕೊಂಬಿನ ಹುಲ್ಲೆ, ಕಾಡುಹಂದಿ ಮತ್ತು ಭಾರತೀಯ ಗಸೆಲ್ ಬೇಟೆಯ ಪ್ರಮುಖ ಆಹಾರಗಳು. ಇದನ್ನು ಮತ್ತೆ ವಿಸ್ತರಿಸಬಹುದು ಎಂದು ಮಧ್ಯಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ ಜೆಎಸ್ ಚೌಹಾಣ್ ಹೇಳಿದರು. ಚೀತಾಗಳು ನವೆಂಬರ್ 5 ರಂದು ಬೇಟೆ ಮಾಡಲು ಈ ಚೀತಾಗಳನ್ನು ಹೊರಗೆ ಬಿಟ್ಟಿದ್ದಾರೆ. ಅದು ವಿಫಲವಾಯಿತು, ಆದರೆ ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ಚೀತಾ ಬೇಟೆಯಾಡಿದೆ.
ಇದನ್ನು ಓದಿ: Cheetahs Task force: ಚೀತಾಗಳ ಮೇಲ್ವಿಚಾರಣೆ ಮಾಡಲು ಕಾರ್ಯಪಡೆ ರಚನೆ, ಚೀತಾಗಳನ್ನು ನೀವು ಯಾವಾಗ ನೋಡಬಹುದು?
ಐದು ಹೆಣ್ಣು ಮತ್ತು ಮೂರು ಗಂಡು ನಮೀಬಿಯಾದಿಂದ ಚೀತಾಗಳನ್ನು ತರಲಾಗಿದೆ. ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ತಜ್ಞರು ರೂಪಿಸಿದ ಪ್ರೋಟೋಕಾಲ್ ಪ್ರಕಾರ, ಚಿರತೆಗಳನ್ನು ಮೊದಲು ಒಂದು ತಿಂಗಳ ಕಾಲ ಕ್ವಾರಂಟೈನ್ ಆವರಣದಲ್ಲಿ ಇರಿಸಲಾಯಿತು. ಈ ಕಾರಣಕ್ಕೆ ಅವುಗಳಿಗೆ ಎಮ್ಮೆ ಮಾಂಸವನ್ನು ನೀಡಲಾಗುತ್ತಿತ್ತು.
Published On - 2:00 pm, Tue, 8 November 22