ಚೆಂಗಲ್ಪಟ್ಟು: ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ 27 ವರ್ಷದ ನವವಿವಾಹಿತರೊಬ್ಬರು ಮದುವೆಯಾದ (wedding) ಕೇವಲ ಎರಡು ದಿನಗಳಲ್ಲಿ ತನ್ನ ಪತ್ನಿಯ ಮದುವೆಯ ಸೀರೆಯನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಮೃತರನ್ನು ರಾಣಿಪೇಟೆ ಮೂಲದ ಸರವಣನ್ ಎಂದು ಗುರುತಿಸಲಾಗಿದ್ದು, ಸುಂಗುವಚತಿರಂನಲ್ಲಿರುವ (Sunguvachatiram) ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ಚೆಂಗಲ್ಪಟ್ಟು ( Chengalpattu) ಸಮೀಪದ ದಿಮ್ಮಾವರಂನ ಶ್ವೇತಾ ಅಲಿಯಾಸ್ ರಾಜೇಶ್ವರಿ (21) ಅವರನ್ನು ವಿವಾಹವಾಗಿದ್ದರು.
ಪೊಲೀಸರ ಪ್ರಕಾರ ನವ ದಂಪತಿ ಸಂಬಂಧಿಕರಾಗಿದ್ದು, ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು. ಕೆಲವು ವರ್ಷಗಳಿಂದ ಅವರು ಸಂಬಂಧ ಹೊಂದಿದ್ದರು. ಇಬ್ಬರೂ ಪೋಷಕರ ಒಪ್ಪಿಗೆ ಮೇರೆಗೆ ಮದುವೆಯೂ ನಡೆದಿದೆ. ನವ ವಧುವಿನ ಪೋಷಕರು ಮಂಗಳವಾರ ಮೊದಲ ರಾತ್ರಿ ಕಾರ್ಯಕ್ರಮವನ್ನು ಏರ್ಪಡಿಸಿ ಚೆಂಗಲ್ಪಟ್ಟು ಬಳಿಯ ದಿಮ್ಮಾವರಂಗೆ (Dimmavaram) ಕರೆದಿಕೊಂಡು ಹೋಗಿದ್ದರು. ಮದುವೆಯ ನಂತರ ನವ ವರ (bridegroom) ಮೊದಲ ಬಾರಿಗೆ ಮಾವನ ಮನೆಗೆ ಬಂದಿದ್ದರು. ಮಂಗಳವಾರ ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದು, ಮರುದಿನ ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾ ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾಳೆ. ಬಂದವಳೆ ಗಂಡ ಆಕೆಯ ಗಂಡ ಮೃತಪಟ್ಟಿದ್ದಾನೆ ಎಂದು ಹೇಳುತ್ತಾ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಆಕೆಯ ಕುಟುಂಬ ಸದಸ್ಯರು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾರೆ.
ಆಕೆಯ ಪೋಷಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳ ಮುಹೂರ್ತದ ಸೀರೆಯಲ್ಲಿ ಸರವಣನ್ ನೇಣು ಬಿಗಿದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಮಾಹಿತಿ ಮೇರೆಗೆ ಕೆಂಗಲಪಟ್ಟು ತಾಲೂಕು ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಂಗಳವಾರ ರಾತ್ರಿ ಮೃತ ಹೊಸ ಗಂಡ ತನ್ನ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಾವು ಹನಿಮೂನ್‌ಗೆ ಭೇಟಿ ನೀಡಲು ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅವರು ಬುಧವಾರ ತಮ್ಮ ಪ್ರವಾಸವನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ