ಇತರ ದೇಶಗಳಲ್ಲಿರುವ ಕೆನಡಿಯನ್ನರು ಕೂಡಾ ಭಾರತೀಯ ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ: ಎಂಇಎ
India suspends visa services in Canada:ಇ-ವೀಸಾ ಸೇವೆಗಳನ್ನು ಸಹ ರದ್ದುಗೊಳಿಸಲಾಗಿದೆ. ನಮ್ಮ ಹೈಕಮಿಷನ್ ಮತ್ತು ಕೆನಡಾದಲ್ಲಿರುವ ಕಾನ್ಸುಲೇಟ್‌ಗಳು ಎದುರಿಸುತ್ತಿರುವ ಭದ್ರತಾ ಬೆದರಿಕೆಗಳ ಬಗ್ಗೆ ನಮಗೆ ತಿಳಿದಿದೆ. ಇದು ಅವರ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಿದೆ. ಅದರಂತೆ, ನಮ್ಮ ಉನ್ನತ ಆಯೋಗಗಳು ಮತ್ತು ದೂತಾವಾಸಗಳು ತಾತ್ಕಾಲಿಕವಾಗಿ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ನಾವು ನಿಯಮಿತವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ.
ದೆಹಲಿ ಸೆಪ್ಟೆಂಬರ್ 21: ಕೆನಡಾದ (Canada) ಪ್ರಜೆಗಳಿಗೆ ಭಾರತವು ವೀಸಾ ಸೇವೆಗಳನ್ನು ರದ್ದುಗೊಳಿಸಿದರ ಬಗ್ಗೆ ಗೊಂದಲವುಂಟಾಗಿದ್ದು, ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ವಿವರಣೆ ನೀಡಿದೆ. ಬೇರೆ ದೇಶದಲ್ಲಿ ವಾಸಿಸುವ ಕೆನಡಾದ ನಾಗರಿಕರು ಸಹ ಭಾರತೀಯ ವೀಸಾಕ್ಕೆ (Visa) ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಕೆನಡಾದ ಪ್ರಜೆಯು ಬೇರೆ ದೇಶದಲ್ಲಿ ವಾಸಿಸುತ್ತಿದ್ದರೂ ಸಹ ಭಾರತೀಯ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಎಲ್ಲಾ ವರ್ಗದ ವೀಸಾಗಳನ್ನು ಅಮಾನತುಗೊಳಿಸಲಾಗಿದೆ. ಸಮಸ್ಯೆಯು ಭಾರತಕ್ಕೆ ಪ್ರಯಾಣದ ಬಗ್ಗೆ ಅಲ್ಲ. ಆದರೆ ಕೆನಡಾ ಸರ್ಕಾರದ ಹಿಂಸಾಚಾರ ಮತ್ತು ನಿಷ್ಕ್ರಿಯತೆಗಿರುವ ಪ್ರತಿಕ್ರಿಯೆ ಆಗಿದೆ, ಮಾನ್ಯ ವೀಸಾಗಳು ಮತ್ತು OCI ಕಾರ್ಡ್‌ಗಳನ್ನು ಹೊಂದಿರುವವರು ಮುಕ್ತವಾಗಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ.
ಇ-ವೀಸಾ ಸೇವೆಗಳನ್ನು ಸಹ ರದ್ದುಗೊಳಿಸಲಾಗಿದೆ. ನಮ್ಮ ಹೈಕಮಿಷನ್ ಮತ್ತು ಕೆನಡಾದಲ್ಲಿರುವ ಕಾನ್ಸುಲೇಟ್‌ಗಳು ಎದುರಿಸುತ್ತಿರುವ ಭದ್ರತಾ ಬೆದರಿಕೆಗಳ ಬಗ್ಗೆ ನಮಗೆ ತಿಳಿದಿದೆ. ಇದು ಅವರ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಿದೆ. ಅದರಂತೆ, ನಮ್ಮ ಉನ್ನತ ಆಯೋಗಗಳು ಮತ್ತು ದೂತಾವಾಸಗಳು ತಾತ್ಕಾಲಿಕವಾಗಿ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ನಾವು ನಿಯಮಿತವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ.
#WATCH | “Yes, I do think there is a degree of prejudice here. They have made allegations and taken action on them. To us, it seems that these allegations by government of Canada are primarily politically driven”: MEA spox Arindam Bagchi on India-Canada row pic.twitter.com/75tvsAKRZl
— ANI (@ANI) September 21, 2023
ಹಿಂದಿನ ದಿನ, ಕೆನಡಾದಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವ BLS ಇಂಟರ್ನ್ಯಾಷನಲ್ – ತನ್ನ ವೆಬ್‌ಸೈಟ್‌ನಲ್ಲಿ ಭಾರತೀಯ ಮಿಷನ್‌ನ ಸೂಚನೆಯನ್ನು ಉಲ್ಲೇಖಿಸಿದ ಬೆಳವಣಿಗೆ ಕುರಿತು ಸಂದೇಶವನ್ನು ಪೋಸ್ಟ್ ಮಾಡಿತು. ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ, 21 ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ನವೀಕರಣಗಳಿಗಾಗಿ ದಯವಿಟ್ಟು BLS ವೆಬ್‌ಸೈಟ್ ಅನ್ನು ಪರಿಶೀಲಿಸುತ್ತಿರಿ ಎಂದು ಸಂದೇಶ ಹೇಳಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಶಾಮೀಲಾಗಿಗೆ ಎಂದು ದೊಡ್ಡ ಆರೋಪಗಳನ್ನು ಮಾಡಿದ ಕೆಲವು ದಿನಗಳ ನಂತರ ಭಾರತದ ಈ ಕ್ರಮ ಬಂದಿದೆ.
ಇದನ್ನೂ ಓದಿ: ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ MADAD ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಸಲಹೆ ನೀಡಿದ ವಿದೇಶಂಗ ಸಚಿವಾಲಯ
ಕೆನಡಾದ ಆರೋಪಗಳು ರಾಜಕೀಯ ಪ್ರೇರಿತ: ಎಂಇಎ
ಏತನ್ಮಧ್ಯೆ, ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಅವರು ಭಾರತದ ವಿರುದ್ಧ ಟ್ರುಡೊ ಅವರ ಆರೋಪಗಳು “ರಾಜಕೀಯವಾಗಿ ಪ್ರೇರಿತ” . ಕೆನಡಾ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ದೃಢಪಡಿಸಿದರು. ನಮ್ಮ ಕಡೆಯಿಂದ, ಕೆನಡಾದ ನೆಲವನ್ನು ಆಧರಿಸಿದ ಅಪರಾಧ ಚಟುವಟಿಕೆಗಳ ನಿರ್ದಿಷ್ಟ ಪುರಾವೆಗಳನ್ನು ಕೆನಡಾದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಲಾಗಿದೆ ಆದರೆ ಅದರ ಮೇಲೆ ಕ್ರಮ ಕೈಗೊಂಡಿಲ್ಲ. ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಟ್ರುಡೊ ಭಾರತದಲ್ಲಿದ್ದಾಗ ಪ್ರಧಾನಿ ಮೋದಿಯವರಲ್ಲಿ ಕೆನಡಾ ಪಿಎಂ ಆರೋಪಗಳನ್ನು ಮಾಡಿದ್ದು, ಪ್ರಧಾನಿ ಮೋದಿ ಅದನ್ನು ತಿರಸ್ಕರಿಸಿದರು ಎಂದು ಎಂಇಎ ಪುನರುಚ್ಚರಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ