ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ ನಂತರ ಮನೋಜ್ ತಿವಾರಿಗೆ ಪತ್ನಿಯ ಸ್ವಾಗತ, ವಿಡಿಯೊ ವೈರಲ್

ನೀವು ಮೋದಿಯವರ ಸೈನಿಕ ಎಂದು ಹೆಮ್ಮೆ ಇದೆ ಎಂದು ಹೇಳಿ ನನ್ನ ಪತ್ನಿ ನನಗೆ ಸರ್ಪೈಸ್ ಕೊಟ್ಟಿದ್ದಾಳೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆದ ನಂತರ ನಾನು ಮನೆಗೆ ಬಂದರೆ ಈ ರೀತಿ ಸ್ವಾಗತ ಸಿಕ್ಕಿತು. ಇದಂತೂ ಅಚ್ಚರಿ ಆಗಿಬಿಡ್ತು ಎಂದು  ಪ್ರಧಾನಿ ಮೋದಿ, ಕಾನೂನು ಸಚಿವ ಅರ್ಜುನ್ ಮೇಘವಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ  ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ ನಂತರ ಮನೋಜ್ ತಿವಾರಿಗೆ ಪತ್ನಿಯ ಸ್ವಾಗತ, ವಿಡಿಯೊ ವೈರಲ್
ಮನೋಜ್ ತಿವಾರಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 21, 2023 | 7:52 PM

ದೆಹಲಿ ಸೆಪ್ಟೆಂಬರ್ 21: ಲೋಕಸಭೆಯು (Lok sabha) ಮಹಿಳಾ ಮೀಸಲಾತಿ ಮಸೂದೆಯನ್ನು (women’s reservation bill) ಅಂಗೀಕರಿಸಿದ ನಂತರ ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಅವರಿಗೆ ಬುಧವಾರ ರಾತ್ರಿ ಅವರ ಮನೆಯಲ್ಲಿ ಭವ್ಯ ಸ್ವಾಗತ ಸಿಕ್ಕಿದ. ತಿವಾರಿ ಪತ್ನಿ ಅಭಿನಂದನೆ ಸಲ್ಲಿಸಿ ಹಣೆಗೆ ತಿಲಕವಿಡುತ್ತಿರುವ ವಿಡಿಯೊ ವೈರಲ್ ಆಗಿದೆ. ಬಿಜೆಪಿ ಸಂಸದ ತಿವಾರಿ ಅವರೇ ‘ಕಮಾಲ್ ಹೋ ಗಯಾ ಹೈ’ ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ನೀವು ಮೋದಿಯವರ ಸೈನಿಕರು ಎಂದು ನನಗೆ ಹೆಮ್ಮೆ ಇದೆ” ಎಂದು ಮನೋಜ್ ತಿವಾರಿ ಅವರ ಪತ್ನಿ ಹೇಳಿದ್ದಾರೆ..ಮನೋಜ್ ತಿವಾರಿ ಮನೆಗೆ ಬಂದಾಗ ಅವರರ ಪತ್ನಿ ಅವರನ್ನು ಸ್ವಾಗತಿಸುತ್ತಿದ್ದಂತೆ ‘ಕ್ಯಾ ಹುವಾ’ ಎಂದು ಅಚ್ಚರಿಯಿಂದ ಕೇಳಿದ್ದು, ನೀವು ನೋಡ್ತಾ ಇದ್ರಾ ಎಂದು ಕೇಳುತ್ತಿರುವುದು  ವಿಡಿಯೊದಲ್ಲಿದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ. ಇದು ಭಾರತದ ಸಂಸದೀಯ ಪಯಣದ ಸುವರ್ಣ ಕ್ಷಣ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಸಂಸತ್ ನ ವಿಶೇಷ ಅಧಿವೇಶನದಲ್ಲಿ ಸಂಸತ್ತಿನ ಪ್ರಕ್ರಿಯೆಗಳು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಲೋಕಸಭೆಯು ಅಂಗೀಕರಿಸಿದ ಮೊದಲ ಮಸೂದೆ ಇದಾಗಿದೆ.

ನೀವು ಮೋದಿಯವರ ಸೈನಿಕ ಎಂದು ಹೆಮ್ಮೆ ಇದೆ ಎಂದು ಹೇಳಿ ನನ್ನ ಪತ್ನಿ ನನಗೆ ಸರ್ಪೈಸ್ ಕೊಟ್ಟಿದ್ದಾಳೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆದ ನಂತರ ನಾನು ಮನೆಗೆ ಬಂದರೆ ಈ ರೀತಿ ಸ್ವಾಗತ ಸಿಕ್ಕಿತು. ಇದಂತೂ ಅಚ್ಚರಿ ಆಗಿಬಿಡ್ತು ಎಂದು  ಪ್ರಧಾನಿ ಮೋದಿ, ಕಾನೂನು ಸಚಿವ ಅರ್ಜುನ್ ಮೇಘವಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ  ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.

ಮಸೂದೆಯು ಸವರ್ಣೀಯ ಮಹಿಳೆಯರನ್ನು ಮಾತ್ರ ಉನ್ನತೀಕರಿಸುತ್ತದೆ ಎಂದು ವಾದಿಸಿದ AIMIM ಹೊರತುಪಡಿಸಿ, ಎಲ್ಲಾ ಪಕ್ಷದ ಸಂಸದರು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಖಚಿತಪಡಿಸುವ ಮಸೂದೆಯ ಪರವಾಗಿ ಮತ ಚಲಾಯಿಸಿದರು. ಆದರೆ, ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಇದು ಜಾರಿಗೆ ಬರಲಿದೆ. ಹೊಸ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಹಲವು ಪಕ್ಷಗಳು ಎತ್ತಿದ್ದವು.

ಇದನ್ನೂ ಓದಿ: G20 ಶೃಂಗಸಭೆ ವೇಳೆ ಐಷಾರಾಮಿ ಕೊಠಡಿಯಲ್ಲಿ ತಂಗಲು ನಿರಾಕರಿಸಿತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಿಯೋಗ

ವಿರೋಧ ಪಕ್ಷದ ಇಂಡಿಯಾ ಮೈತ್ರಿಕೂಟ ಮಹಿಳಾ ಮೀಸಲಾತಿಗೆ ಬೆಂಬಲವನ್ನು ನೀಡಿದ್ದು, ಅದರ ಅನುಷ್ಠಾನದಲ್ಲಿನ ವಿಳಂಬವನ್ನು ವಿರೋಧಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್