ಚೆನ್ನೈ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದ ಕಾರು, ಚಾಲಕ ನಾಪತ್ತೆ

|

Updated on: Dec 18, 2024 | 12:09 PM

ಚೆನ್ನೈ ಬಂದರಿನಲ್ಲಿ ಕಾರೊಂದು ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದಿದ್ದು, ಚಾಲಕ ಮಹಮ್ಮದ್ ಸಾಹಿ ನಾಪತ್ತೆಯಾಗಿದ್ದಾರೆ. ಓರ್ವ ನೌಕಾ ಸಿಬ್ಬಂದಿ ಗಾಯಗಳೊಂದಿಗೆ ಪಾರಾಗಿದ್ದಾರೆ. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಕಾರಣವನ್ನು ನಿರ್ಧರಿಸಲು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾಹಿ, ಟ್ಯಾಕ್ಸಿ ಸರ್ವಿಸ್ ಕಾರನ್ನು ಚಾಲನೆ ಮಾಡುತ್ತಿದ್ದು, ವಾಹನವನ್ನು ರಿವರ್ಸ್​ ತೆಗೆಯುತ್ತಿದ್ದಾಗ ಅದು ಬರ್ತ್‌ನಿಂದ ನೀರಿಗೆ ಬಿದ್ದಿತು. ಅವರ ಜತೆ ಪ್ಯಾಸೆಂಜರ್ ಸೀಟ್​ನಲ್ಲಿ ನೌಕಾಪಡೆಯ ಅಧಿಕಾರಿ ಇದ್ದರು ಅವರು ಕಾರಿನ ಕಿಟಕಿಯನ್ನು ಒಡೆದು ಹೇಗೋ ಸಾಹಸ ಮಾಡಿ ಹೊರಗೆ ಬಂದಿದ್ದಾರೆ. ಆದರೆ ಸಾಹಿ ಎಲ್ಲಿದ್ದಾರೆ ಏನಾಗಿದ್ದಾರೆ ಎನ್ನುವ ಯಾವ ಮಾಹಿತಿಯೂ ತಿಳಿದುಬಂದಿಲ್ಲ.

ಚೆನ್ನೈ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದ ಕಾರು, ಚಾಲಕ ನಾಪತ್ತೆ
ಕಾರು
Image Credit source: India Today
Follow us on

ಚೆನ್ನೈ ಬಂದರಿನಲ್ಲಿ ಕಾರೊಂದು ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದಿದ್ದು, ಚಾಲಕ ಮಹಮ್ಮದ್ ಸಾಹಿ ನಾಪತ್ತೆಯಾಗಿದ್ದಾರೆ. ಓರ್ವ ನೌಕಾ ಸಿಬ್ಬಂದಿ ಗಾಯಗಳೊಂದಿಗೆ ಪಾರಾಗಿದ್ದಾರೆ. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಕಾರಣವನ್ನು ನಿರ್ಧರಿಸಲು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾಹಿ, ಟ್ಯಾಕ್ಸಿ ಸರ್ವಿಸ್ ಕಾರನ್ನು ಚಾಲನೆ ಮಾಡುತ್ತಿದ್ದು, ವಾಹನವನ್ನು ರಿವರ್ಸ್​ ತೆಗೆಯುತ್ತಿದ್ದಾಗ ಅದು ಬರ್ತ್‌ನಿಂದ ನೀರಿಗೆ ಬಿದ್ದಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ