ಈ ಕುತಂತ್ರದಿಂದ ಕಾಂಗ್ರೆಸ್​ನ ದುಷ್ಕೃತ್ಯಗಳನ್ನು ಮರೆಮಾಚಲಾಗದು, ಅಂಬೇಡ್ಕರ್ ವಿವಾದ ಕುರಿತು ಮೋದಿ ಮಾತು

ಒಂದು ಕಡೆ ಅಂಬೇಡ್ಕರ್ ಕುರಿತ ಹೇಳಿಕೆಗೆ  ವಿಪಕ್ಷಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಅವರ ಶಕ್ತಿಯಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಒಂದರ ಹಿಂದೆ ಒಂದರಂತೆ ಹಲವಾರು ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ಹಾಗೂ ಅದರ ಕುತಂತ್ರಗಳು ಹಲವು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಡಲಾಗದು ಎಂದು ಹೇಳಿದರು.

ಈ ಕುತಂತ್ರದಿಂದ ಕಾಂಗ್ರೆಸ್​ನ ದುಷ್ಕೃತ್ಯಗಳನ್ನು ಮರೆಮಾಚಲಾಗದು, ಅಂಬೇಡ್ಕರ್ ವಿವಾದ ಕುರಿತು ಮೋದಿ ಮಾತು
Narendra Modi 2024 12 18t140830.730Image Credit source: Mint
Follow us
ನಯನಾ ರಾಜೀವ್
|

Updated on:Dec 18, 2024 | 2:13 PM

ಒಂದು ಕಡೆ ಅಂಬೇಡ್ಕರ್ ಕುರಿತ ಹೇಳಿಕೆಗೆ  ವಿಪಕ್ಷಗಳು ಗೃಹ ಸಚಿವ ಅಮಿತ್ ಶಾರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಅವರ ಶಕ್ತಿಯಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಒಂದರ ಹಿಂದೆ ಒಂದರಂತೆ ಹಲವಾರು ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ಹಾಗೂ ಅದರ ಕುತಂತ್ರಗಳು ಹಲವು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಚಲಾಗದು ಎಂದು ಹೇಳಿದರು.

ಅಮಿತ್ ಶಾ ಸದನದಲ್ಲಿ ಏನು ಹೇಳಿದ್ದರು?

ಇಂದು ಎಲ್ಲದಕ್ಕೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೆತ್ತುವುದು ಫ್ಯಾಷನ್ ಆಗಿ ಹೋಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ, ಏಳು ಜನ್ಮದ ಸ್ವರ್ಗವಾದರೂ ಸಿಕ್ಕಿರುತ್ತಿತ್ತು ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಈ ವಿಚಾರ ಕುರಿತು ಮೋದಿ ಟ್ವೀಟ್ ಮಾಡಿ,  ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಕಾಂಗ್ರೆಸ್​ ಹೇಗೆ ಕುತಂತ್ರಗಳನ್ನು ಮಾಡಿತ್ತೆಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಅತ್ಯಂತ ಭೀಕರ ಹತ್ಯಾಕಾಂಡಗಳು ತಮ್ಮ ಆಡಳಿತದ ಅವಧಿಯಲ್ಲಿ ನಡೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಮತ್ತಷ್ಟು ಓದಿ: ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು; ನೆಹರು, ಇಂದಿರಾ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಕಾಂಗ್ರೆಸ್​ ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಬಲಪಡಿಸಲು ಏನನ್ನೂ ಮಾಡಲಿಲ್ಲ. ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಜಿ ಅವರು ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ಮತ್ತು ಎಸ್‌ಸಿ/ಎಸ್‌ಟಿಯನ್ನು ಕಡೆಗಣಿಸಿದ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಟ್ವೀಟ್

ಅವರು ಹೇಳಿರುವ ಸತ್ಯ ನೋಡಿ ಆತಂಕಕ್ಕೊಳಗಾಗಿ ಅಮಿತ್ ಶಾ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದರು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ ಎಂಬ ವಿಷಯದ ಕುರಿತು ಎರಡು ದಿನಗಳ ಚರ್ಚೆಗೆ ಉತ್ತರಿಸಿದ ಅಮಿತ್ ಶಾ ಅವರು ಮಂಗಳವಾರ ತಮ್ಮ ಭಾಷಣದಲ್ಲಿ ಬಾಬಾಸಾಹೇಬರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:10 pm, Wed, 18 December 24

ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​